ರಾಜ್ಯದಲ್ಲಿ ಹೊಸ ಅಭಿಯಾನಕ್ಕೆ ಮುಂದಾದ ಜೆಡಿಎಸ್:​ ನವೆಂಬರ್​ 1ರಿಂದ ಮನೆ ಮನೆಗೆ ಕನ್ನಡ ಬಾವುಟ ರಾಜ್ಯ ಪ್ರೀತಿಯ ಸಂದೇಶ

| Updated By: ಆಯೇಷಾ ಬಾನು

Updated on: Oct 15, 2022 | 1:36 PM

ನವೆಂಬರ್ 1ರಿಂದ 15 ದಿನಗಳ ಕಾಲ ಈ ಅಭಿಯಾನ ನಡೆಯಲಿದ್ದು ಜನರಿಗೆ ಬಾವುಟ ನೀಡಲು ಹೆಚ್​ಡಿಕೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಹಾಗೂ ರಾಷ್ಟ್ರಪ್ರೇಮ ಜೊತೆಗೆ ರಾಜ್ಯ ಪ್ರೀತಿ ಅನ್ನೋ ಸಂದೇಶ ರವಾನಿಸಿದ್ದಾರೆ.

ರಾಜ್ಯದಲ್ಲಿ ಹೊಸ ಅಭಿಯಾನಕ್ಕೆ ಮುಂದಾದ ಜೆಡಿಎಸ್:​ ನವೆಂಬರ್​ 1ರಿಂದ ಮನೆ ಮನೆಗೆ ಕನ್ನಡ ಬಾವುಟ ರಾಜ್ಯ ಪ್ರೀತಿಯ ಸಂದೇಶ
ಹೆಚ್​ ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ಶುರು ಮಾಡಿವೆ. ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗಲು ತಯಾರಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಹೊಸ ಅಭಿಯಾನಕ್ಕೆ ಜೆಡಿಎಸ್(JDS)​ ಭರ್ಜರಿ ಸಿದ್ಧತೆ ನಡೆಸಿದೆ. ಮನೆಮನೆಗೆ ಕನ್ನಡ ಬಾವುಟ ಅಭಿಯಾನಕ್ಕೆ(Karnataka Flag Campaign) ದಳಪತಿಗಳು ಸಜ್ಜಾಗಿದ್ದಾರೆ. ರಾಜ್ಯಾದ್ಯಂತ ನವೆಂಬರ್​ 1ರಿಂದ ಮನೆ ಮನೆಗೆ ಕನ್ನಡ ಬಾವುಟ ಎಂಬ ಅಭಿಯಾನ ಮಾಡಲು ಜೆಡಿಎಸ್ ಮುಂದಾಗಿದ್ದು ಹೆಚ್​.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ನವೆಂಬರ್ 1ರಿಂದ 15 ದಿನಗಳ ಕಾಲ ಈ ಅಭಿಯಾನ ನಡೆಯಲಿದ್ದು ಜನರಿಗೆ ಬಾವುಟ ನೀಡಲು ಹೆಚ್​ಡಿಕೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಹಾಗೂ ರಾಷ್ಟ್ರಪ್ರೇಮ ಜೊತೆಗೆ ರಾಜ್ಯ ಪ್ರೀತಿ ಅನ್ನೋ ಸಂದೇಶ ರವಾನಿಸಿದ್ದಾರೆ.

ಹರ್ ಘರ್ ತಿರಂಗ ಮಾದರಿಯಲ್ಲೇ ರಾಜ್ಯದಲ್ಲಿ ಹೊಸ ಅಭಿಯಾನಕ್ಕೆ ಸಿದ್ಧತೆ ನಡೆದಿದ್ದು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ನವೆಂಬರ್ 1ರಂದು ಮನೆ ಮನೆಗೆ ಕನ್ನಡ ಬಾವುಟ ಅಭಿಯಾನಕ್ಕೆ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಸದ್ಯ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿ ಗೋಷ್ಠಿ ನಡೆಸಿದ್ದಾರೆ. ಇದನ್ನೂ ಓದಿ: ವಿಸ್ತಾರಾ ಏರ್​ಲೈನ್ಸ್​ನಲ್ಲಿ ಪ್ರಯಾಣಿಕರಿಗೆ ಕೊಟ್ಟ ಊಟದಲ್ಲಿ ಜಿರಳೆ ಪತ್ತೆ

ಎರಡೂ ರಾಷ್ಟ್ರೀಯ ಪಕ್ಷ ರಾಷ್ಟ್ರಕ್ಕೆ ಮಾರಕ

ದೇಶದಲ್ಲಿ ಕೇಂದ್ರದ ಗೃಹ ಸಚಿವ ಹಲವಾರು ಭಾಷೆಗಳ ನಾಶ ಮಾಡುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಗಳನ್ನು ಇಟ್ಟಿದ್ದಾರೆ. ಹೀಗಾಗಿ ಈ ಬಗ್ಗೆ ಈಗಾಗಲೇ ತಮಿಳುನಾಡಿನ ಸಿಎಂ ಪ್ರತಿಭಟನೆ ಮಾಡಿದ್ದಾರೆ. ಪಶ್ಚಿಮ ಬಂಗಾಳ, ಕೇರಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಇನ್ನೊಂದು ಕಡೆ ಭಾಷೆಯ ದಬ್ಬಾಳಿಕೆ ಪ್ರಾರಂಭ ಆಗಿದೆ. ಒಂದು ರಾಷ್ಟ್ರ ಮಾಡಬೇಕು ಎಂದು ಬಿಜೆಪಿ ಹೇಳ್ತಿದ್ದಾರೆ. ಭಾಷೆಗಳನ್ನು ನಾಶ ಮಾಡಿ ಒಂದು ರಾಷ್ಟ್ರ ಕಟ್ಟೋಕೆ ಹೇಗೆ ಸಾಧ್ಯ? ಕೇಂದ್ರದ ದೂರಣೆ ಸಂಪೂರ್ಣವಾಗಿ ಸ್ಥಗಿತಗೊಳಿಸಿ 120 ದೇಶದಲ್ಲಿ 104 ಸ್ಥಾನದಲ್ಲಿ ಬಡತನದಲ್ಲಿ ನಾವು ಇದ್ದೇವೆ. ದೇಶದಲ್ಲಿ ಇರುವ ಸಮಸ್ಯೆ ಬಗೆಹರಿಸಿ. ನಮ್ಮಲ್ಲಿರುವ ಕನ್ನಡ ಸಂಘ ಸಂಸ್ಥೆ ಜೊತೆಗೆ ನಮ್ಮ ಪಕ್ಷ ಕೂಡ ಕೈ ಜೋಡಿಸಿ ಪ್ರತಿಭಟನೆ ಮಾಡಬೇಕಾಗುತ್ತೆ. ಎರಡೂ ರಾಷ್ಟ್ರೀಯ ಪಕ್ಷ ರಾಷ್ಟ್ರಕ್ಕೆ ಮಾರಕ. ಒಂದೇ ನಾಣ್ಯದ ಎರಡೂ ಮುಖ. ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಬಾಗಿಲು ಹಾಕಿದ್ದಾರೆ. ಕರ್ನಾಟಕದಲ್ಲೂ ಅದು ಬಹಳ ದೂರ ಇಲ್ಲ. 18 ಹಾಗೂ 19ರಂದು ಶಾಸಕರ ಹಾಗೂ ಸದಸ್ಯರ ಸಭೆ ಕರೆದಿದ್ದೇವೆ. ನವಂಬರ್ 1ರಂದು ವಿಶೇಷವಾಗಿ ಕನ್ನಡ ಬಾವುಟವನ್ನು ಮನೆ ಮನೆಗೆ ಹಾರಿಸಲಾಗುವುದು ಎಂದರು.

ಮಳವಳ್ಳಿಯಲ್ಲಿ 10ವರ್ಷದ ಬಾಲಕಿ ಮೇಲೆ ಆತ್ಯಾಚಾರ ಪ್ರಕರಣಕ್ಕೆ ಹೆಚ್​ಡಿ ಕುಮಾರಸ್ವಾಮಿ ಬೇಸರ ಹೊರ ಹಾಕಿದ್ದಾರೆ. ಕುಟುಂಬಸ್ಥರಿಗೆ ನಿನ್ನೆ ನಮ್ಮ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ನಮ್ಮ ಯುವ ಘಟಕದ ಅಧ್ಯಕ್ಷರು ಭೇಟಿಯಾಗಿ ಬಂದಿದ್ದಾರೆ. ಹಾಗೆಯೇ 50 ಸಾವಿರ ಪರಿಹಾರ ಕೂಡ ನೀಡಿದ್ದಾರೆ ಎಂದರು. ಇನ್ನು ರಮೇಶ್ ಜಾರಕಿಹೊಳಿ ಜೆಡಿಎಸ್ ಜೊತೆಗೆ ಚರ್ಚೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಾನು ಯಾರ್ ಜೊತೆಗೂ ಚರ್ಚೆ ಮಾಡಿಲ್ಲ. ನಾನು ಪಂಚ ರತ್ನ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ಐದು ವರ್ಷ ಅಧಿಕಾರ ಕೊಟ್ಟರೆ ಐದು ಕಾರ್ಯಕ್ರಮ ಹೇಗೆ ಕೊಡಬೇಕು ಎಂಬುವುದರ ಬಗ್ಗೆ ತಯಾರಿ ಮಾಡ್ತಿದ್ದೇನೆ. ನವೆಂಬರ್ 1 ರಂದು ಪಂಚ ರತ್ನ ಯಾತ್ರೆ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಸಿದ್ದತೆ ಮಾಡ್ತಿದ್ದೇನೆ ಎಂದರು. ಇದನ್ನೂ ಓದಿ: Breaking News: ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಉಗ್ರರ ದಾಳಿ, ಓರ್ವ ಕಾಶ್ಮೀರಿ ಪಂಡಿತನಿಗೆ ಗಂಭೀರ ಗಾಯ

Published On - 1:34 pm, Sat, 15 October 22