Elevator – Yerili Theru: ಬೆಂಗಳೂರು ಏರ್ಪೋರ್ಟ್ನಲ್ಲಿ ಎಲಿವೇಟರ್ಗೆ ಕನ್ನಡದಲ್ಲಿ ‘ಏರಿಳಿತೇರು’ ಎಂದು ಬಳಸಿದ್ದಕ್ಕೆ ಆಕ್ರೋಶ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಎಲಿವೇಟರ್ ಬದಲಿಗೆ ಏರಳಿತೇರು ಎಂದು ಬಳಸಿದ್ದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಎಲಿವೇಟರ್ ಬದಲಿಗೆ ಏರಳಿತೇರು ಎಂದು ಬಳಸಿದ್ದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಹಲವರು ಈ ಶಬ್ದವನ್ನು ಸ್ವಾಗತಿಸಿದ್ದಾರೆ. ಆದರೆ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಕೆಲವು ದಿನಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದ ನಿರ್ವಾಹಕರನ್ನು ಎಲಿವೇಟರ್ ಪದಕ್ಕೆ ಕನ್ನಡದಲ್ಲಿ ಸರಿಯಾದ ಪದ ಬಳಸಬೇಕು ಎಂದು ಒತ್ತಾಯಿಸಿದ್ದು, ಏರಿಳಿ ತೇರು ಶಬ್ದ ಪ್ರಯೋಗ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.
ಶ್ರೀನಿವಾಸರಾಜು ಡಿಸೆಂಬರ್ 14 ರಂದು ಟ್ವೀಟ್ ಮಾಡಿದ್ದು, ಅದರಲ್ಲಿ ಎಲಿವೇಟರ್ ಅನ್ನು ಕನ್ನಡಕ್ಕೆ ಏರಿಳಿ ತೇರು ಎಂದು ಅನುವಾದಿಸಲಾಗಿದೆ, ಆದರೆ ರಥವು ಮುಂದೆ ಸಾಗುತ್ತದೇ ವಿನಃ ರಥ ಏರಿಳಿಯುವುದಿಲ್ಲ ಎಂದು ಹೇಳಿದ್ದಾರೆ. ಈ ಶಬ್ಧಪ್ರಯೋಗ ತಪ್ಪಿದೆ, ಹೀಗೆ ಬರೆಯುವುದಕ್ಕಿಂತ ಕನ್ನಡದಲ್ಲಿ ಲಿಫ್ಟ್ ಎಂದು ಸರಳವಾಗಿ ಬರೆಯಬಹುದಲ್ಲ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಮಂಗಳವಾರ ಅಂದರೆ ಮೊನ್ನೆ ಡಿಸೆಂಬರ್ 27ರಂದು ಏರಿಳಿ ತೇರು ಎಂಬುದನ್ನು ತೆಗೆದು ಆ ಜಾಗದಲ್ಲಿ ಎಲಿವೇಟರ್ ಎಂದು ಬದಲಾವಣೆ ಮಾಡಿದೆ. ಇದನ್ನು ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು, ನಮ್ಮ ಕಾರ್ಯಾಚರಣೆ ತಂಡವು ಪರಿಶೀಲಿಸಿ ಸರಿಪಡಿಸುವ ಬದಲಾವಣೆಗಳನ್ನು ಮಾಡಿದೆ ಎಂದು ಟ್ವೀಟ್ ಮಾಡಿದೆ. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಶ್ರೀನಿವಾಸರಾಜು ಧನ್ಯವಾದ ತಿಳಿಸಿದ್ದಾರೆ.
Elevator at @BLRAirport has been translated into Kannada as ‘yerili theru’, meaning a chariot that goes up and down! When did a chariot go up and down? It moved forward not even backward. Perhaps something more accurate should be found. Or should simply write ‘lift’ in /1 pic.twitter.com/NrksiRyquU
— Sugata Srinivasaraju (@sugataraju) December 13, 2022
ಆದರೆ ಇಂಗ್ಲಿಷ್ ಶಬ್ದವನ್ನು ಯಥಾವತ್ತಾಗಿ ಕನ್ನಡಕ್ಕೆ ಬದಲಾಯಿಸಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕನ್ನಡ ಭಾಷೆಗೆ ಮಾಡಿರುವ ಅವಮಾನ ಎಂದು ದೂರಿದ್ದಾರೆ.
ವಿಮಾನ ನಿಲ್ದಾಣಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲದೆ ಬೇರೆ ಭಾಗಗಳಿಂದಲೂ ಜನರು ಬರುತ್ತಾರೆ, ಕೆಲವು ಶಬ್ದಗಳಿಗೆ ಸರಿಯಾದ ಕನ್ನಡ ಶಬ್ದವಿರುವುದಿಲ್ಲ ಎಂದು ಸುಗತ ಅವರು ಹೇಳಿದ್ದಾರೆ.