PSI Recruitment Scam: ಕೆಳಹಂತದ ಅಧಿಕಾರಿಗಳಿಂದ ಅಮೃತ್ ಪಾಲ್ ತನಿಖೆ ಪ್ರಯೋಜನವಿಲ್ಲ: ಹೈಕೋರ್ಟ್
ಅಮ್ರಿತ್ ಪಾಲ್ ಅವರ ವಿಚಾರಣೆಯನ್ನು ಕೆಳಹಂತದ ಅಧಿಕಾರಿಗಳು ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ
ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ನೇಮಕಾತಿ ವಿಭಾಗದ ಮಾಜಿ ಎಡಿಜಿಪಿ ಅಮ್ರಿತ್ ಪಾಲ್ ಅವರ ವಿಚಾರಣೆಯನ್ನು ಕೆಳಹಂತದ ಅಧಿಕಾರಿಗಳು ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಸಿಐಡಿ ಪರ ವಕೀಲರು, ಡಿಜಿಪಿ ಮೇಲ್ವಿಚಾರಣೆಯಲ್ಲಿಯೇ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು. ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮಧ್ಯಾಹ್ನ 2.30ಕ್ಕೆ ಕಲಾಪ ಮುಂದೂಡಿದರು.
ಇದೇ ವೇಳೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನೂ (Regional Forensic Science Laboratory – RFSL) ಸಿಐಡಿ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು. ಒಎಂಆರ್ ಪುಟಗಳು ಬದಲಾಗಿರುವ ಕುರಿತೂ ಮಾಹಿತಿ ಸಲ್ಲಿಸಲಾಯಿತು. ಸಿಐಡಿ ತನಿಖಾಧಿಕಾರಿಗಳು ಸಿದ್ಧಪಡಿಸಿರುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಲಾಗಿದೆ.
Published On - 1:29 pm, Thu, 14 July 22