ಒಂದೇ ದಿನದಲ್ಲಿ 50 ತೀರ್ಪುಗಳನ್ನು ಪ್ರಕಟಿಸಿ ದಾಖಲೆ ಬರೆದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ ನಾಗಪ್ರಸನ್ನ
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಬುಧವಾರ ಒಂದೇ ದಿನದಲ್ಲಿ 50 ತೀರ್ಪುಗಳನ್ನು ಪ್ರಕಟಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕದ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ಒಂದೇ ದಿನದಲ್ಲಿ 50 ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಕಳೆದ ವರ್ಷ ಒರಿಸ್ಸಾದ ಹೈಕೋರ್ಟ್‌ನ ನ್ಯಾಯಾಧೀಶರು 32 ತೀರ್ಪುಗಳನ್ನು ಮತ್ತು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರು ಈ ವರ್ಷದ ಜೂನ್‌ನಲ್ಲಿ ಒಂದೇ ದಿನದಲ್ಲಿ 65 ತೀರ್ಪುಗಳನ್ನು ಪ್ರಕಟಿಸಿದ್ದರು.
ಬೆಂಗಳೂರು, ಡಿ.21: ಇದೇ ಮೊದಲ ಬಾರಿಗೆ ಕರ್ನಾಟಕ ಹೈಕೋರ್ಟ್‌ನ (Karnataka High Court) ನ್ಯಾಯಮೂರ್ತಿ ಎಂ ನಾಗಪ್ರಸನ್ನ (Justice M Nagaprasanna) ಅವರು ಬುಧವಾರ 50 ತೀರ್ಪುಗಳನ್ನು ಪ್ರಕಟಿಸಿದ್ದು, ಒಂದೇ ದಿನದಲ್ಲಿ ಅತ್ಯಧಿಕ ತೀರ್ಪು ನೀಡಿದ್ದಾರೆ. ಈ 50 ತೀರ್ಪುಗಳಲ್ಲಿ ಬೆಂಗಳೂರಿನ ಪ್ರಧಾನ ಪೀಠದಲ್ಲಿ ಕೇಳಿದ ಮತ್ತು ಕಾಯ್ದಿರಿಸಿದ ಪ್ರಕರಣಗಳ 25 ತೀರ್ಪುಗಳು ಮತ್ತು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಕೇಳಿದ ಮತ್ತು ಕಾಯ್ದಿರಿಸಿದ ಪ್ರಕರಣಗಳ 25 ತೀರ್ಪುಗಳು ಸೇರಿವೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಬುಧವಾರ ಒಂದೇ ದಿನದಲ್ಲಿ 50 ತೀರ್ಪುಗಳನ್ನು ಪ್ರಕಟಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕದ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ಒಂದೇ ದಿನದಲ್ಲಿ 50 ತೀರ್ಪುಗಳನ್ನು ಪ್ರಕಟಿಸಿದ್ದಾರೆ. ಎಂಎಲ್ಸಿ ಸೂರಜ್ ರೇವಣ್ಣ ಅವರ ಆಯ್ಕೆ ವಿರುದ್ಧದ ಅರ್ಜಿಗಳ ತೀರ್ಪುಗಳು ಮತ್ತು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಲಂಚ ಆರೋಪದ ಪ್ರಕರಣಗಳ ತೀರ್ಪುಗಳು ಕೂಡ ಇದರಲ್ಲಿ ಸೇರಿವೆ.
ಇದನ್ನೂ ಓದಿ: Srirangapatna: ಮತ್ತೆ ಭುಗಿಲೆದ್ದ ಜಾಮಿಯಾ ಮಸೀದಿ ವಿವಾದ, 108 ಹನುಮ ಭಕ್ತರಿಂದ ಹೈ ಕೋರ್ಟ್ ನಲ್ಲಿ ಅಪೀಲ್
ಕಳೆದ ವರ್ಷ ಒರಿಸ್ಸಾದ ಹೈಕೋರ್ಟ್‌ನ ನ್ಯಾಯಾಧೀಶರು 32 ತೀರ್ಪುಗಳನ್ನು ಮತ್ತು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರು ಈ ವರ್ಷದ ಜೂನ್‌ನಲ್ಲಿ ಒಂದೇ ದಿನದಲ್ಲಿ 65 ತೀರ್ಪುಗಳನ್ನು ಪ್ರಕಟಿಸಿದ್ದರು. ಅದೇ ರೀತಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಕಳೆದ ವರ್ಷ ಒಂದೇ ದಿನದಲ್ಲಿ 20 ತೀರ್ಪುಗಳನ್ನು ಪ್ರಕಟಿಸಿದ್ದರು. ಸದ್ಯ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ 50 ತೀರ್ಪುಗಳನ್ನು ಪ್ರಕಟಿಸಲಾಗಿದೆ.
ನ್ಯಾಯಮೂರ್ತಿ ನಾಗಪ್ರಸನ್ನ ಅವರು ಬೆಂಗಳೂರಿನ ಪ್ರಧಾನ ಪೀಠದಲ್ಲಿ ತೀರ್ಪು ಪ್ರಕಟಿಸಿದರು. ಧಾರವಾಡ ಪೀಠಕ್ಕೆ ಸಂಬಂಧಿಸಿದ ಪ್ರಕರಣಗಳ ವ್ಯಾಜ್ಯಗಳನ್ನು ಪ್ರತಿನಿಧಿಸಲು ವಕೀಲರಿಗೆ ಅನುವು ಮಾಡಿಕೊಡಲು ವೀಡಿಯೊ ಕಾನ್ಫರೆನ್ಸ್ ಸೌಲಭ್ಯವನ್ನು ಒದಗಿಸಲಾಗಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:05 am, Thu, 21 December 23