ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕರವೇ ಅಧ್ಯಕ್ಷ ನಾರಾಯಣಗೌಡ

ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕರವೇ ಅಧ್ಯಕ್ಷ ನಾರಾಯಣಗೌಡ
ಕರವೇ ಅಧ್ಯಕ್ಷ ನಾರಾಯಣಗೌಡ

ರಾಜಭವನಕ್ಕೆ ಕರವೇ ಅಧ್ಯಕ್ಷ ನಾರಾಯಣಗೌಡ ಭೇಟಿ ನೀಡಿ ರಾಜ್ಯಪಾಲರ ಬಳಿ ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಮನವಿ ಸಲ್ಲಿಸಿದ್ದಾರೆ.

TV9kannada Web Team

| Edited By: Ayesha Banu

Dec 31, 2021 | 1:41 PM


ಬೆಂಗಳೂರು: ಕರವೇ ಅಧ್ಯಕ್ಷ ನಾರಾಯಣಗೌಡ ರಾಜಭವನಕ್ಕೆ ಆಗಮಿಸಿದ್ದು ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಮಾಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬಳಿ ಮನವಿ ಸಲ್ಲಿಸಿದ್ದಾರೆ. ತಮ್ಮ ಮನವಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಬಂದ್ ಮಾಡುವಂತೆ ಕರೆ ನೀಡಿದ್ದರು. ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಡಕ್ಕೆ ಮಣಿದು ಇಂದಿನ ಬಂದ್ ಹಿಂಪಡೆದಿದ್ದಾರೆ. ಆದ್ರೆ ಇಂದು ರಾಜ್ಯದ ಕೆಲ ಕಡೆ ಪ್ರತಿಭಟನೆ, ರ್ಯಾಲಿ ನಡೆಯುತ್ತಿದೆ. ಟೌನ್ಹಾಲ್ನಿಂದ ಫ್ರೀಡಂಪಾರ್ಕ್ ತನಕ ಸಾಂಕೇತಿಕವಾಗಿ ಱಲಿ ನಡೆಸಲಾಗುತ್ತಿದೆ. ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಮಧ್ಯೆ ರಾಜಭವನಕ್ಕೆ ಕರವೇ ಅಧ್ಯಕ್ಷ ನಾರಾಯಣಗೌಡ ಭೇಟಿ ನೀಡಿ ರಾಜ್ಯಪಾಲರ ಬಳಿ ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಮನವಿ ಸಲ್ಲಿಸಿದ್ದಾರೆ.

ಇನ್ನು ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ನಾರಾಯಣಗೌಡ, ಸುಮಾರು ಇಪ್ಪತ್ತು ವರ್ಷಗಳಿಂದ ನಾವು ಹೋರಾಟ ಮಾಡ್ತಿದ್ದೀವಿ. ಕರ್ನಾಟದಲ್ಲಿ ಎಂಇಎಸ್ ಮತ್ತು ಶಿವಸೇನೆ ಪುಂಡಾಟ ಮಾಡ್ತಾ ಇದೆ. ವಿರೋಧಿಸಿ ನಿನ್ನೆ ರ್ಯಾಲಿ ಮಾಡಿದ್ವಿ, ರಾಜ್ಯಪಾಲರ ಭೇಟಿ ಸಾಧ್ಯವಾಗಿರ್ಲಿಲ್ಲ. ಆದ್ದರಿಂದ ಇವತ್ತು ಮಾನ್ಯ ರಾಜ್ಯಪಾಲರನ್ನ ಭೇಟಿಯಾಗಿ ಮನವಿ ಮಾಡಿದ್ದೇವೆ. ಎಂಇಎಸ್ ಮತ್ತು ಶಿವಸೇನೆಯವನ್ನು ನಿಷೇಧ ಮಾಡಬೇಕು ಅಂತಾ ಮನವಿ ಮಾಡಿದ್ವಿ. ರಾಜ್ಯಪಾಲರು ಕೂಡ ನಮಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಲ್ಲವನ್ನ ತಾವೂ ಸಹ ನೋಡುತ್ತಿರೋದಾಗಿ ಹೇಳಿದ್ದಾರೆ. ನಮ್ಮ ಮನವಿಯನ್ನು ಕೇಂದ್ರಕ್ಕೆ ತಲುಪಿಸುವ ಭರವಸೆ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ಎಂಇಎಸ್ ನಿಷೇಧದ ವಿಚಾರದಲ್ಲಿ ಕಾನೂನಿನ ತೊಡಕಿದೆ ಎಂದು‌ ಸಿಎಂ ಹೇಳಿದಾರೆ. ಕರ್ನಾಟಕದ ಜನರ ಭಾವನೆಗಳನ್ನ ಅರ್ಥೈಸಿಕೊಂಡು ಸರ್ಕಾರ ತಕ್ಷಣ ನಿರ್ಧಾರ ಕೈಗೊಳ್ಳಬೇಕು. ಸರ್ಕಾರಕ್ಕೆ ಒಂದು ವಾರಗಳ ಗಡುವು ನೀಡ್ತಿದ್ದೇವೆ. ಎಂಇಎಸ್ ನಿಷೇಧವಾಗದಿದ್ದರೆ ರಾಜ್ಯ ವ್ಯಾಪಿ ದೊಡ್ಡ ಮಟ್ಟದಲ್ಲಿ‌ ಹೋರಾಟ ಮಾಡಲಿದ್ದೇವೆ. ಎಲ್ಲೆಲ್ಲಿ ಸರ್ಕಾರದ ಕಾರ್ಯಕ್ರಮಗಳಿರತ್ತೋ ಅಲ್ಲಿ‌ ಮುತ್ತಿಗೆ ಹಾಕ್ತೀವಿ, ಘೋಷಣೆ ಮೊಳಗಿಸ್ತೀವಿ. ಕರ್ನಾಟಕದ ಎಲ್ಲಾ ಲೋಕಸಭಾ ಸದಸ್ಯರ ಮೇಲೆ ಒತ್ತಡ ಹಾಕ್ತೀವೆ. ಲೋಕಸಭಾ ಸದಸ್ಯರ ಮೌನ ಸರಿಯಲ್ಲ. ಜ.22ರ ಬಂದ್ ವಿಚಾರದಲ್ಲಿ ನಮ್ಮ ಬೆಂಬಲವಿಲ್ಲ ಎಂದು‌ ಈಗಾಗಲೇ ಹೇಳಿದ್ದೇನೆ. ಎಲ್ಲದಕ್ಕೂ ಬಂದ್ ಒಂದೇ ಪರಿಹಾರವಲ್ಲ ಎಂದು ಮಾಧ್ಯಮಗಳ ಬಳಿ ತಿಳಿಸಿದ್ದಾರೆ.

ಎಂಇಎಸ್ ನಿಷೇಧಕ್ಕೆ ಜನವರಿ 22ರ ಡೆಡ್ಲೈನ್
ಬಂದ್ ನಿರ್ಧಾರ ಕೈ ಬಿಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ನಿನ್ನೆ ವಾಟಾಳ್ ನಾಗರಾಜ್ರನ್ನ ಕರೆಸಿ ಮಾತನಾಡಿದ್ರು. ಗೃಹ ಕಚೇರಿ ಕೃಷ್ಣದಲ್ಲಿ ಚರ್ಚೆ ನಡೆಸಿದ ಅವ್ರು, ಪುಂಡರ ವಿರುದ್ಧ ಕ್ರಮದ ಭರವಸೆ ಕೊಟ್ರು. ಹಾಗೆ, ಇಂದಿನ ಹೋರಾಟದಿಂದ ಹಿಂದೆ ಸರಿಯುವಂತೆ ವಾಟಾಳ್ರನ್ನ ಒಪ್ಪಿಸಿದ್ರು. ಇಂದಿನ ಬಂದ್ ರದ್ದಾಗಿದ್ರೂ, ಎಂಇಎಸ್ ನಿಷೇಧಕ್ಕೆ ಜನವರಿ 22ರ ಡೆಡ್ಲೈನ್ ನೀಡಲಾಗಿದೆ.

ಇದನ್ನೂ ಓದಿ: Chennai Rains ಚೆನ್ನೈನಲ್ಲಿ ಮುಂದಿನ 3 ದಿನಗಳವರೆಗೆ ಮಳೆ ಮುಂದುವರಿಕೆ; 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್


Follow us on

Most Read Stories

Click on your DTH Provider to Add TV9 Kannada