Chennai Rains ಚೆನ್ನೈನಲ್ಲಿ ಮುಂದಿನ 3 ದಿನಗಳವರೆಗೆ ಮಳೆ ಮುಂದುವರಿಕೆ; 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಚೆನ್ನೈನ ಸುತ್ತಮುತ್ತಲಿನ ಕೆರೆಗಳು ಮತ್ತು ಜಲಾಶಯಗಳ ಒಳಹರಿವಿನ ಬಗ್ಗೆ ನಿಗಾ ವಹಿಸಲಾಗಿದೆ ತ್ತು ಅಗತ್ಯವಿದ್ದಲ್ಲಿ ಸುರಕ್ಷತೆಗಾಗಿ ಅವುಗಳನ್ನು ತೆರೆಯಲಾಗುವುದು ಎಂದು ರಾಮಚಂದ್ರನ್ ಹೇಳಿದರು. ನಂದನಂ, ವಡಪಳನಿ ಮತ್ತು ಚೆನ್ನೈ ನಗರದ ಎಂಆರ್‌ಸಿ ನಗರ್ ನಲ್ಲಿ ಹೆಚ್ಚು ಮಳೆಯಾಗಿದೆ.

Chennai Rains ಚೆನ್ನೈನಲ್ಲಿ ಮುಂದಿನ 3 ದಿನಗಳವರೆಗೆ ಮಳೆ ಮುಂದುವರಿಕೆ; 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಚೆನ್ನೈ ಮಳೆ (ಸಂಗ್ರಹ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 31, 2021 | 12:34 PM

ಚೆನ್ನೈ: ಚೆನ್ನೈನಲ್ಲಿ (Chennai ) ಭಾರೀ ಮಳೆಯಿಂದಾಗಿ ವಿದ್ಯುದಾಘಾತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ನಾಲ್ಕು ಸಬ್ ವೇಗಳನ್ನು ಗುರುವಾರ ಮುಚ್ಚಲಾಗಿದೆ. ಚೆನ್ನೈ ನಗರದ ಸುಮಾರು 100 ರಸ್ತೆಗಳು ಜಲಾವೃತವಾಗಿದ್ದು, ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ (Greater Chennai Corporation) ಅಧಿಕಾರಿಗಳು ಮತ್ತು ನೌಕರರು ನೀರನ್ನು ಹರಿಬಿಡುವ ಕಾರ್ಯದಲ್ಲಿ ತೊಡಗಿದ್ದಾರೆ. ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚಿಂಗಲೆಪೇಟ್ ಸೇರಿದಂತೆ 4 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ( KKSSR Ramachandran) ತಿಳಿಸಿದ್ದಾರೆ. ನಗರದ 106 ರಸ್ತೆಗಳು ಜಲಾವೃತವಾಗಿದ್ದು, ಮಳೆ ನಿಂತರೆ ನೀರು ಅಲ್ಲಿಂದ ಹರಿಯಲು ದಾರಿ ಮಾಡಿಕೊಡಬಹುದು ಎಂದು ಮಾಧ್ಯಮಗಳಿಗೆ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಐಎಂಡಿ (IMD) ಉಪ ನಿರ್ದೇಶಕ ಎಸ್ ಬಾಲಚಂದ್ರನ್ “ಕೆಳಮಟ್ಟದಲ್ಲಿ ಪೂರ್ವ ಮಾರುತಗಳು ಮತ್ತು ಮೇಲಿನ ಮಟ್ಟದಲ್ಲಿ ಪಶ್ಚಿಮ ಮಾರುತಗಳ ಪರಸ್ಪರ ಕ್ರಿಯೆಯು ನಗರಕ್ಕೆ ಮಳೆ ತಂದಿದೆ. ನಗರದಲ್ಲಿ ಜನವರಿ 3ರವರೆಗೆ ಮಳೆ ಮುಂದುವರಿಯಲಿದೆ ಎಂದಿದ್ದಾರೆ.ಮುಂದಿನ ಮೂರು ದಿನಗಳಲ್ಲಿ ಉತ್ತರ ಕರಾವಳಿ ತಮಿಳುನಾಡು ಮತ್ತು ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಅಕ್ಕಪಕ್ಕದ ಪ್ರದೇಶಗಳಲ್ಲಿ ಪ್ರತ್ಯೇಕವಾದ ಭಾರೀ ಮತ್ತು ಅತಿ ಹೆಚ್ಚು ಮಳೆಯ ಚಟುವಟಿಕೆಗಳು ಮುಂದುವರಿಯುವ ಸಾಧ್ಯತೆಯಿದೆ ಮತ್ತು ನಂತರ ಕಡಿಮೆಯಾಗುತ್ತದೆ ಎಂದು ಐಎಂಡಿ ತಿಳಿಸಿದೆ.

ಹವಾಮಾನ ತಜ್ಞರು ಸಾಮಾಜಿಕ ಮಾಧ್ಯಮದಲ್ಲಿ ಮಳೆಯ ತೀವ್ರತೆ ಮತ್ತು ಹಿಂದಿನ ದಾಖಲೆಗಳನ್ನು ಮೀರಿಸುವ  ಮಳೆಯ ಬಗ್ಗೆ ಹೇಳಿಕೊಂಡಿದ್ದಾರೆ. ಅಂತಹ ಒಂದು ಹೇಳಿಕೆಯು 2015 ರ ನಂತರ ಡಿಸೆಂಬರ್ ತಿಂಗಳಿನಲ್ಲಿ ಚೆನ್ನೈನಲ್ಲಿ ಗುರುವಾರದ ಮಳೆಯು ಒಂದೇ ದಿನಕ್ಕೆ ಅತಿ ಹೆಚ್ಚು ಎಂದು ಹೇಳಿದೆ. ಆದಾಗ್ಯೂ, ಇಲ್ಲಿನ ಐಎಂಡಿ ಅಧಿಕಾರಿಗಳು ಅಂತಹ ವಾದಗಳನ್ನು ದೃಢೀಕರಿಸಲಿಲ್ಲ.

ಚೆನ್ನೈನ ಸುತ್ತಮುತ್ತಲಿನ ಕೆರೆಗಳು ಮತ್ತು ಜಲಾಶಯಗಳ ಒಳಹರಿವಿನ ಬಗ್ಗೆ ನಿಗಾ ವಹಿಸಲಾಗಿದೆ ತ್ತು ಅಗತ್ಯವಿದ್ದಲ್ಲಿ ಸುರಕ್ಷತೆಗಾಗಿ ಅವುಗಳನ್ನು ತೆರೆಯಲಾಗುವುದು ಎಂದು ರಾಮಚಂದ್ರನ್ ಹೇಳಿದರು. ನಂದನಂ, ವಡಪಳನಿ ಮತ್ತು ಚೆನ್ನೈ ನಗರದ ಎಂಆರ್‌ಸಿ ನಗರ್ ನಲ್ಲಿ ಹೆಚ್ಚು ಮಳೆಯಾಗಿದೆ. ತೀವ್ರ ಮಳೆಯ ಕಾರಣ ಮತ್ತು ಪ್ರಯಾಣಿಕರು ಸುರಕ್ಷಿತವಾಗಿ ತಮ್ಮ ಮನೆಗಳನ್ನು ತಲುಪಲು ಅನುವು ಮಾಡಿಕೊಡಲು, ಸಿಎಂಆರ್​​ಎಲ್ ತನ್ನ ಸೇವಾ ಸಮಯವನ್ನು ಡಿಸೆಂಬರ್ 30 ರಂದು 12 ರವರೆಗೆ ವಿಸ್ತರಿಸಿದೆ.

ಭಾರೀ ಮಳೆಯಿಂದಾಗಿ ಚೆನ್ನೈನ ಮೌಂಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಮಳೆಯಿಂದಾಗಿ ನಗರ ಮತ್ತು ಉಪನಗರಗಳಲ್ಲಿ ಸಂಚಾರ ದಟ್ಟಣೆಗೆ ಕಾರಣವಾದಾಗ ವಾಹನ ಸವಾರರು ಪ್ರವಾಹಕ್ಕೆ ಸಿಲುಕಿದ ರಸ್ತೆಗಳು ಮತ್ತು ಸಬ್ ವೇಗಳಲ್ಲಿ ತಮ್ಮ ವಾಹನಗಳನ್ನು ನಡೆಸಲು ಹೆಣಗಾಡುತ್ತಿರುವ ದೃಶ್ಯಗಳು ಕಳೆದ ತಿಂಗಳು ಇಲ್ಲಿ ಪುನರಾವರ್ತನೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಇಲ್ಲಿನ ಎಂಆರ್‌ಸಿ ನಗರದಲ್ಲಿ ಅತಿ ಹೆಚ್ಚು 17.65 ಸೆಮಿ ಮಳೆ ದಾಖಲಾಗಿದೆ. ನುಂಗಂಬಾಕ್ಕಂ ಮತ್ತು ಮೀನಂಬಾಕ್ಕಂನಲ್ಲಿ ಕ್ರಮವಾಗಿ 14.65 ಸೆಮಿ ಮತ್ತು 10 ಸೆಮಿ ಮಳೆಯಾಗಿದೆ. ನೆರೆಯ ತಿರುವಳ್ಳೂರು ಮತ್ತು ಕಾಂಚೀಪುರಂ ಜಿಲ್ಲೆಗಳು ಸೇರಿದಂತೆ ಇತರ ಪ್ರದೇಶಗಳಲ್ಲಿ, 1 ಸೆಮಿಗಿಂತ (ಮಾಧವರಂ)  10 ಸೆಮಿ (ನಂದನಂ) ವರೆಗೆ ಮಳೆಯಾಗಿದೆ. ಇಂದು ಬೆಳಗ್ಗೆ 8.30ರಿಂದ ಸಂಜೆ 6.15ರವರೆಗೆ ಮಳೆಯ ಮಾಹಿತಿ ದಾಖಲಾಗಿದೆ.

ಇದನ್ನೂ ಓದಿ: Karnataka Weather Today: ಇನ್ನೊಂದು ವಾರ ಕರ್ನಾಟಕದಲ್ಲಿ ವಿಪರೀತ ಚಳಿ; ಅಕಾಲಿಕ ಮಳೆಗೆ ತಮಿಳುನಾಡು ತತ್ತರ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್