
ಬೆಂಗಳೂರು, ಅಕ್ಟೋಬರ್ 19: ರಾಜ್ಯದಲ್ಲಿ ಮಳೆಯ ವಾತಾವರಣದ ನಡುವೆ ಇಂದು ಗಾಳಿಯ ಗುಣಮಟ್ಟವು ಬಹುತೇಕ ನಗರಗಳಲ್ಲಿ ಸಮಾಧಾನಕರ ಹಾಗೂ ಸಾಧಾರಣ ಮಟ್ಟದಲ್ಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ನಿರಾಳವಾಗಿ ಉಸಿರಾಡುವಂತಿದೆ. ಹವಾಮಾನ ವೈಪರೀತ್ಯ ಹಾಗೂ ಇತ್ತೀಚಿನ ಮಳೆಯಿಂದಾಗಿ ಧೂಳಿನ ಕಣಗಳ ಪ್ರಮಾಣ ಕಡಿಮೆಯಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಬೆಂಗಳೂರಿನಲ್ಲಿ ಇಂದು ಸರಾಸರಿ ಎಕ್ಯೂಐ ಮಟ್ಟ 76 ದಾಖಲಾಗಿದೆ. ನಗರದ ಪ್ರಮುಖ ಗಾಳಿಯ ಕಲಿಷಿತ ಕಣಗಳಾದ PM2.5 (32 µg/m³) ಹಾಗೂ PM10 (71 µg/m³) ಪ್ರಮಾಣಗಳು ನಿಯಂತ್ರಿತ ಮಟ್ಟದಲ್ಲಿವೆ.
ಸಾಮಾನ್ಯ ಆರೋಗ್ಯವಂತರಿಗೆ ಈ ವಾತಾವರಣದಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಉಸಿರಾಟದ ತೊಂದರೆ ಅಥವಾ ಶ್ವಾಸಕೋಶದ ಕಾಯಿಲೆ ಇರುವವರು ಹೊರಾಂಗಣ ಚಟುವಟಿಕೆಗಳ ಸಮಯದಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ.
ರಾಜ್ಯದ ಇತರೆ ಜಿಲ್ಲೆಗಳು ಹಾಗೂ ಪ್ರಮುಖ ನಗರಗಳಲ್ಲಿಯೂ ಗಾಳಿಯ ಗುಣಮಟ್ಟವು ಉತ್ತಮದಿಂದ ಸಾಧಾರಣ ಮಟ್ಟದಲ್ಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ