AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ 3.2 ಲಕ್ಷಕ್ಕೂ ಹೆಚ್ಚು BPL ಕಾರ್ಡ್​​ ಅರ್ಜಿಗಳು ಬಾಕಿ: ಬೆಳಗಾವಿಯದ್ದೇ ಹೆಚ್ಚು ಪೆಂಡಿಂಗ್​​

ಕರ್ನಾಟಕದಲ್ಲಿ 3.2 ಲಕ್ಷಕ್ಕೂ ಹೆಚ್ಚು BPL ಕಾರ್ಡ್ ಅರ್ಜಿಗಳು ಬಾಕಿ ಉಳಿದಿವೆ. ಇದರಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ವಿಶೇಷವಾಗಿ ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ವೈದ್ಯಕೀಯ ನೆರವು ಪಡೆಯಲು ತೊಂದರೆಯಾಗಿದೆ. ಅರ್ಜಿಗಳು ಬಾಕಿ ಇರುವ ಸಂಖ್ಯೆಯ ಪೈಕಿ ಗಡಿ ಜಿಲ್ಲೆ ಬೆಳಗಾವಿ ಮೊದಲ ಸ್ಥಾನದಲ್ಲಿದೆ. ರಾಜಧಾನಿ ಬೆಂಗಳೂರಿನ ಹೆಸರು ಕೂಡ ಈ ಪಟ್ಟಿಯಲ್ಲಿದೆ.

ರಾಜ್ಯದಲ್ಲಿ 3.2 ಲಕ್ಷಕ್ಕೂ ಹೆಚ್ಚು BPL ಕಾರ್ಡ್​​ ಅರ್ಜಿಗಳು ಬಾಕಿ: ಬೆಳಗಾವಿಯದ್ದೇ ಹೆಚ್ಚು ಪೆಂಡಿಂಗ್​​
ರೇಷನ್​​ ಕಾರ್ಡ್​​
ಪ್ರಸನ್ನ ಹೆಗಡೆ
|

Updated on:Dec 10, 2025 | 5:21 PM

Share

ಬೆಂಗಳೂರು, ಡಿಸೆಂಬರ್​​ 10: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ BPL ರೇಷನ್​​ ಕಾರ್ಡುಗಳ ಅರ್ಜಿಗಳು ಕರ್ನಾಟಕದಲ್ಲಿ ಬಾಕಿ ಬಿದ್ದಿವೆ. ಸುಮಾರು 3,22,468 ಅರ್ಜಿಗಳು ಹಾಗೇ ಉಳಿದುಕೊಂಡಿದ್ದು, ಆ ಪೈಕಿ ಬಹುತೇಕ ಅರ್ಜಿಗಳು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳದ್ದಾಗಿದ್ದರೆ ಬೆಂಗಳೂರಿನ ಅರ್ಜಿಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ.

ಬೆಳಗಾವಿಯ ಅತಿ ಹೆಚ್ಚು ಅರ್ಜಿಗಳು ಬಾಕಿ

ಅಂಕಿಅಂಶಗಳ ಪ್ರಕಾರ, ಬೆಳಗಾವಿ 39,019 ಬಾಕಿ ಅರ್ಜಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರ ಕಲಬುರಗಿ 36,037, ವಿಜಯಪುರ 24,293, ರಾಯಚೂರು 18,111, ಬೆಂಗಳೂರು 18,035, ಬೀದರ್​ 17,671, ಬಾಗಲಕೋಟೆ 13,658, ಧಾರವಾಡ 12,337, ಕೊಪ್ಪಳ 11,446 ಮತ್ತು ಬಳ್ಳಾರಿಯ 10,709 ಅರ್ಜಿಗಳು ಬಾಕಿ ಉಳಿದಿವೆ.

ಇದನ್ನೂ ಓದಿ: ಅಕ್ರಮವಾಗಿ BPL ಕಾರ್ಡ್​​ ಪಡೆದವರಿಗೆ ಶಾಕ್​; ನೀವೂ ಲಿಸ್ಟ್​ನಲ್ಲಿದ್ದೀರಾ ಪರೀಕ್ಷಿಸಿಕೊಳ್ಳಿ

ಅರ್ಜಿಗಳ ಬಾಕಿಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕಿಡ್ನಿ ಸಂಬಂಧಿ ಸಮಸ್ಯೆಗಳಿರುವ ಫಲಾನುಭವಿಗಳು ಸಹಾಯಧನ ಮತ್ತು ವೈದ್ಯಕೀಯ ನೆರವನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ಯಾವುದಾದರೂ BPL ಕಾರ್ಡ್ NPHH ಸ್ಥಾನಕ್ಕೆ ವರ್ಗಾಯಿಸಲ್ಪಟ್ಟಿದ್ದರೆ, ಯೋಗ್ಯ ಫಲಾನುಭವಿಗಳು 45 ದಿನಗಳ ಒಳಗೆ ತಹಶೀಲ್ದಾರ್‌ಗೆ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು. ಪರಿಶೀಲನೆಯ ನಂತರ ಮೂಲ BPL ಕಾರ್ಡ್ ಸೌಲಭ್ಯವನ್ನು ಅವರಿಗೆ ನೀಡಲಾಗುತ್ತದೆ ಎಂದು ಸಚಿವ ಕೆ. ಹೆಚ್. ಮುನಿಯಪ್ಪ ಈಗಾಗಲೇ ತಿಳಿಸಿದ್ದಾರೆ. ಅಲ್ಲದೆ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸುತ್ತಿರುವವರಿಗಾಗಿ, ತಕ್ಷಣವೇ ಸರ್ಕಾರಿ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಆನ್‌ಲೈನ್ ಮೂಲಕವೂ BPL ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದೆ ಎಂದು ಹೇಳಿದ್ದಾರೆ.

ಯಾರೆಲ್ಲ BPL ಕಾರ್ಡ್​​ ಪಡೆಯಲು ಅರ್ಹರು?

2017ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾನದಂಡಗಳ ಪ್ರಕಾರ, ಬಿಪಿಎಲ್​ ಕಾರ್ಡ್​ ಪಡೆಯಲು ಹಲವು ನಿಬಂಧನೆಗಳನ್ನು ಹೇರಲಾಗಿದೆ. ಸರ್ಕಾರಿ ನೌಕರಿಯಲ್ಲಿರಬಾರದು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಭೂಮಿ, ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ಭೂಮಿ ಹೊಂದಿರಬಾರದು, ನಾಲ್ಕು ಚಕ್ರದ ವಾಹನ ಇರಬಾರದು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮೀರಬಾರದು ಎಂದು ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:18 pm, Wed, 10 December 25