Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget 2023: ಆನ್‌ಲೈನ್‌ನಲ್ಲಿ ವಿವಾಹ ನೋಂದಣಿಗೆ ಶ್ರೀರಾಮ ಸೇನೆ ವಿರೋಧ

ರಾಜ್ಯದ 2023-24ನೇ ಸಾಲಿನ ಬಜೆಟ್​ ನಿನ್ನೆ ರಂದು ಮಂಡನೆಯಾಗಿದ್ದು, ಆನ್​ಲೈನ್​ ಮೂಲಕ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಶ್ರೀರಾಮ ಸೇನೆ ವಿರೋಧ ವ್ಯಕ್ತಪಡಿಸಿದೆ.

Karnataka Budget 2023: ಆನ್‌ಲೈನ್‌ನಲ್ಲಿ ವಿವಾಹ ನೋಂದಣಿಗೆ ಶ್ರೀರಾಮ ಸೇನೆ ವಿರೋಧ
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ 
Follow us
Anil Kalkere
| Updated By: ವಿವೇಕ ಬಿರಾದಾರ

Updated on:Jul 08, 2023 | 12:51 PM

ಬೆಂಗಳೂರು: ರಾಜ್ಯದ 2023-24ನೇ ಸಾಲಿನ ಬಜೆಟ್​ (Karnataka Budget 2023) ನಿನ್ನೆ (ಜು.07) ರಂದು ಮಂಡನೆಯಾಗಿದ್ದು, ಆನ್​ಲೈನ್ (Online)​ ಮೂಲಕ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಶ್ರೀರಾಮ ಸೇನೆ (Shriram sene) ವಿರೋಧ ವ್ಯಕ್ತಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚಾಗಿವೆ. ನೂರಾರು ಪ್ರಕರಣಗಳು ಹೊರ ಬರುತ್ತಿವೆ. ಆನ್ ಲೈನ್ ವಿವಾಹ ನೋಂದಣಿ ಲವ್ ಜಿಹಾದ್​ಗೆ ಕುಮ್ಮಕ್ಕು ಕೊಡಲಿದೆ. ತಂದೆ-ತಾಯಿಗೆ, ಸಮಾಜಕ್ಕೆ, ಸಂಘಟನೆಗಳಿಗೆ, ಹಿಂದೂಗಳಿಗೆ ಗೊತ್ತಾಗದ ಹಾಗೆ ಮುಸ್ಲಿಂ, ಕ್ರಿಶ್ಚಿಯನ್ನರು ಸಾರಾಗಟಾಗಿ ಆನ್‌ಲೈನ್​ನಲ್ಲಿ ನೋಂದಣಿ ಮಾಡಿಕೊಳ್ಳುತ್ತಾರೆ. ಆನ್‌ಲೈನ್‌ನಲ್ಲಿ ವಿವಾಹ ನೋಂದಣಿ ಮಾಡುವ ಮೂಲಕ ಆನಂದವಾಗಿ ಲವ್ ಜಿಹಾದ್ ಮಾಡಿಕೊಂಡು ಮೆರೆಯಬಹುದು ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ್​ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈಗಿರುವ, ರಿಜಿಸ್ಟರ್ ಕಚೇರಿಗಳಲ್ಲಿ ಒಂದು ತಿಂಗಳ ಮುಂಚೆ ಮಾಹಿತಿ ಕೊಡುವುದು. ಅವರ ವಿಳಾಸ, ಫೋಟೋಗಳನ್ನ ಹಾಕುವುದು ಯೋಗ್ಯವಾದ ವ್ಯವಸ್ಥೆಯಾಗಿದೆ. ಯಾರೂ ಯಾವುದೇ ರೀತಿಯ ಮೋಸ ವಂಚನೆ ಮಾಡಲು ಸಾಧ್ಯವಿಲ್ಲ. ಈ ಆನ್‌ಲೈನ್ ವಿವಾಹ ನೋಂದಣಿಯನ್ನು ರದ್ದು ಮಾಡಬೇಕು, ಜಾರಿ ಮಾಡಬಾರದು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಡಿಜಿಟಲ್​ ಲೈಬ್ರರಿಗೆ ನೋಂದಾಯಿಸಿಕೊಂಡವರಲ್ಲಿ ಬೆಂಗಳೂರು ಪಸ್ಟ್​​​, ಮೈಸೂರು ಸೆಕೆಂಡ್​​

ಏನಿದು ಆನ್​ಲೈನ್​ ನೋಂದಣಿ

ವಿವಾಹ ನೋಂದಣಿಗಾಗಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸಲು, ವಿವಾಹ ನೋಂದಣಿಯನ್ನು ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Sat, 8 July 23

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ