AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19 Karnataka Update: ಕರ್ನಾಟಕದಲ್ಲಿ 973 ಮಂದಿಗೆ ಸೋಂಕು, 17 ಸಾವು

ರಾಜ್ಯದಲ್ಲಿ ಸೋಮವಾರ ಸೋಂಕಿತರ ಪ್ರಮಾಣ ಒಂದು ಸಾವಿರಕ್ಕಿಂತಲೂ ಕಡಿಮೆ ವರದಿಯಾಗಿರುವುದು ಈಚಿನ ದಿನಗಳಲ್ಲಿ ಗಮನಾರ್ಹ ಬೆಳವಣಿಗೆ ಎನಿಸಿದೆ.

Covid 19 Karnataka Update: ಕರ್ನಾಟಕದಲ್ಲಿ 973 ಮಂದಿಗೆ ಸೋಂಕು, 17 ಸಾವು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Sep 06, 2021 | 8:28 PM

Share

ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ ಒಟ್ಟು 973 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 17 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 1071 ಮಂದಿ ಸೋಂಕಿನಿಂದ ಚೇತರಿಸಿಕೊಂಡು, ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 17,386 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 0.69, ಸೋಂಕಿನಿಂದ ಸಾವನ್ನಪ್ಪುವ ಪ್ರಮಾಣ ಶೇ 1.74 ಇದೆ.

ರಾಜ್ಯದಲ್ಲಿ ಈವರೆಗೆ 29,56,137 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,01,299 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 37,426 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಮವಾರ ಸೋಂಕಿತರ ಪ್ರಮಾಣ ಒಂದು ಸಾವಿರಕ್ಕಿಂತಲೂ ಕಡಿಮೆ ವರದಿಯಾಗಿರುವುದು ಈಚಿನ ದಿನಗಳಲ್ಲಿ ಗಮನಾರ್ಹ ಬೆಳವಣಿಗೆ ಎನಿಸಿದೆ.

ಬೆಂಗಳೂರು ನಗರದಲ್ಲಿ ಸೋಮವಾರ 243 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. 260 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ನಗರದಲ್ಲಿ ಈವರೆಗೆ 12,39,724 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,16,511 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 7180 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಒಟ್ಟು 16,032 ಮಂದಿ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ದಕ್ಷಿಣ ಕನ್ನಡ 258, ಬೆಂಗಳೂರು ನಗರ 243, ಮೈಸೂರು 78, ಹಾಸನ 62, ಉಡುಪಿ 53, ಕೊಡಗು 52, ಶಿವಮೊಗ್ಗ 37, ತುಮಕೂರು, ಉತ್ತರ ಕನ್ನಡ 31, ಚಿಕ್ಕಮಗಳೂರು 30, ಬೆಳಗಾವಿ 14, ಬೆಂಗಳೂರು ಗ್ರಾಮಾಂತರ 12, ಮಂಡ್ಯ 11, ಚಿತ್ರದುರ್ಗ 10, ಕಲಬುರಗಿ 8, ದಾವಣಗೆರೆ 7, ಧಾರವಾಡ, ಬಳ್ಳಾರಿ 6, ಚಿಕ್ಕಬಳ್ಳಾಪುರ 4, ಚಾಮರಾಜನಗರ 3, ಬೀದರ್, ಕೊಪ್ಪಳ, ರಾಯಚೂರು, ರಾಮನಗರ, ವಿಜಯಪುರ 1.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ಬೆಂಗಳೂರು ನಗರ 8, ದಕ್ಷಿಣ ಕನ್ನಡ, ಹಾವೇರಿ 2, ಬಾಗಲಕೋಟೆ, ತುಮಕೂರು, ಉಡುಪಿ, ಉತ್ತರ ಕನ್ನಡ ಹಾಸನ 1.

(Karnataka Covid Numbers 973 infected 17 deaths due to coronavirus on September 6)

ಇದನ್ನೂ ಓದಿ: Coronavirus cases in India: ದೇಶದಲ್ಲಿ 38,948 ಹೊಸ ಕೊವಿಡ್ ಪ್ರಕರಣ ಪತ್ತೆ, 219 ಮಂದಿ ಸಾವು

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿದೆ ನಕಲಿ ಕೊವಿಡ್​ 19 ಲಸಿಕೆಗಳ ಹಾವಳಿ; ಅಸಲಿ..ನಕಲಿ ಪತ್ತೆ ಹಚ್ಚೋದು ಹೇಗೆ? ಇಲ್ಲಿದೆ ಮಾಹಿತಿ

Published On - 8:26 pm, Mon, 6 September 21

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!