Coronavirus cases in India: ದೇಶದಲ್ಲಿ 38,948 ಹೊಸ ಕೊವಿಡ್ ಪ್ರಕರಣ ಪತ್ತೆ, 219 ಮಂದಿ ಸಾವು
Covid 19: ಕಳೆದ 24 ಗಂಟೆಗಳಲ್ಲಿ 219 ಮಂದಿ ಸಾವಿಗೀಡಾಗಿದ್ದು ಇದು ಐದು ತಿಂಗಳಿಗಿಂತಲೂ ಕಡಿಮೆ. ಯಾವುದೇ ರಾಜ್ಯವು ಭಾನುವಾರ 100 ಕ್ಕಿಂತ ಹೆಚ್ಚು ಸಾವುಗಳನ್ನು ವರದಿ ಮಾಡಿಲ್ಲ. ಆರೋಗ್ಯ ಸಚಿವಾಲಯದ ಪ್ರಕಾರ 43,903 ಮಂದಿ ಚೇತರಿಸಿಕೊಂಡಿದ್ದಾರೆ.
ದೆಹಲಿ: ಭಾರತದಲ್ಲಿ ಭಾನುವಾರ 38,948 ಹೊಸ ಕೊರೊನಾವೈರಸ್ (Coronavirus) ಪ್ರಕರಣ ಪತ್ತೆಯಾಗಿದೆ. ಕೇರಳದಲ್ಲಿ 26,701 ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 3.3 ಕೋಟಿಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 219 ಮಂದಿ ಸಾವಿಗೀಡಾಗಿದ್ದು ಇದು ಐದು ತಿಂಗಳಿಗಿಂತಲೂ ಕಡಿಮೆ. ಯಾವುದೇ ರಾಜ್ಯವು ಭಾನುವಾರ 100 ಕ್ಕಿಂತ ಹೆಚ್ಚು ಸಾವುಗಳನ್ನು ವರದಿ ಮಾಡಿಲ್ಲ. ಆರೋಗ್ಯ ಸಚಿವಾಲಯದ ಪ್ರಕಾರ 43,903 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ದಾಖಲಾಗಿರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,04,874 ಆಗಿದ್ದು ಭಾರತವು ಒಟ್ಟು 3,21,81,995 ಚೇತರಿಕೆ ಪ್ರಕರಣಗಳನ್ನು ಕಂಡಿದೆ. ಸಾವಿನ ಸಂಖ್ಯೆ 4,40,752 ಕ್ಕೆ ತಲುಪಿದೆ. ಕೊವಿಡ್ -19 ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ಈ ವರ್ಷದ ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಭಾನುವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ನಡೆಸುತ್ತಿದೆ ಮತ್ತು ಇಲ್ಲಿಯವರೆಗೆ 69 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ಹಾಕಿದೆ.ಇದು ಸ್ವತಃ ಒಂದು ದೊಡ್ಡ ಸಾಧನೆಯಾಗಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ತಮಿಳುನಾಡು ಸರ್ಕಾರವು ಒಂದು ದಿನದಲ್ಲಿ 20 ಲಕ್ಷ ಜನರಿಗೆ ಲಸಿಕೆ ಹಾಕುವ ಸಲುವಾಗಿ ರಾಜ್ಯಾದ್ಯಂತ 10,000 ಲಸಿಕೆ ಶಿಬಿರಗಳನ್ನು ಸ್ಥಾಪಿಸಲು ಯೋಜಿಸಿದೆ ಎಂದು ರಾಜ್ಯ ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾ ಸುಬ್ರಮಣಿಯನ್ ಹೇಳಿದರು. ವೈದ್ಯಕೀಯ ಇಲಾಖೆ ಶನಿವಾರದ ವೇಳೆಗೆ 3.50 ಕೋಟಿ ಲಸಿಕೆಗಳನ್ನು ಪೂರೈಸಿದ್ದು, ದಾಖಲೆಯ 6.20 ಲಕ್ಷ ಜನರು ಲಸಿಕೆಗಳನ್ನು ಪಡೆದಿದ್ದಾರೆ.
India reports 38,948 new #COVID19 cases, 43,903 recoveries and 219 deaths in the last 24 hours, as per Health Ministry
Active cases: 4,04,874 Total cases: 3,30,27,621 Total recoveries: 3,21,81,995 Death toll: 4,40,752
Total vaccination: 68,75,41,762 pic.twitter.com/lo0wQdgsNS
— ANI (@ANI) September 6, 2021
ಕೇರಳದಲ್ಲಿ ಭಾನುವಾರ 26,701 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 74 ಹೊಸ ಸಾವುಗಳೊಂದಿಗೆ, ರಾಜ್ಯದಲ್ಲಿ ಸಾವಿನ ಸಂಖ್ಯೆ 21,496 ಕ್ಕೆ ಏರಿದೆ. ಪರೀಕ್ಷಾ ಪಾಸಿಟಿವಿಟಿ ದರವು 17.17 ಶೇಕಡಾ ದಾಖಲಾಗಿದೆ. 28,900 ಚೇತರಿಕೆಗಳು ಸಹ ವರದಿಯಾಗಿದ್ದು, ಒಟ್ಟು 39,37,996 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ, ರಾಜ್ಯದಲ್ಲಿ 2,47,791 ಸಕ್ರಿಯ ಪ್ರಕರಣಗಳಿವೆ.
A total of 53,14,68,867 samples tested for #COVID19 up to 5th September 2021. Of which, 14,10,649 samples were tested yesterday: Indian Council of Medical Research (ICMR) pic.twitter.com/jjht1JDHKr
— ANI (@ANI) September 6, 2021
ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಶನ್ ಪ್ರದೇಶದಲ್ಲಿ ಭಾಗಶಃ ಲಾಕ್‌ಡೌನ್ ಅನ್ನು ವಿಸ್ತರಿಸಲಾಗಿದೆ ಮತ್ತು ಅದೇ ರೀತಿ ರಾಜ್ಯದ ಇತರ ಭಾಗಗಳಿಗೆ ಸೆಪ್ಟೆಂಬರ್ 18 ರವರೆಗೆ ವಿಸ್ತರಿಸಲಾಗಿದೆ. ಕೊವಿಡ್ ಮುಕ್ತ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳು ತೆರೆಯಲ್ಪಟ್ಟಿವೆ. ಕೊವಿಡ್ ನಿರ್ಬಂಧವಿರುವ ಪ್ರದೇಶಗಳಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ದೇವಸ್ಥಾನಗಳನ್ನು ಮುಚ್ಚಲಾಗಿದೆ. ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಶನ್ ಪ್ರದೇಶದ ಶಿಕ್ಷಣ ಸಂಸ್ಥೆಗಳನ್ನೂ ಮುಚ್ಚಲಾಗಿದೆ. ಭಾನುವಾರ ಐಜ್ವಾಲ್ 967 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು, ಮಿಜೋರಾಂನಲ್ಲಿ ಒಟ್ಟು 63,784 ಪ್ರಕರಣಗಳಿವೆ.
ಇದನ್ನೂ ಓದಿ: 30 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ; ವಸ್ತ್ರ ಕುಟುಂಬದಿಂದ ಸಿದ್ಧವಾಗಿದೆ ಪರಿಸರ ಸ್ನೇಹಿ ಗಣಪ
ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಸಾದುದ್ದೀನ್ ಓವೈಸಿ ಅಭ್ಯರ್ಥಿಗೆ ಗೆಲುವು; ಉಳಿದ ಪಾಲಿಕೆಗಳ ತಾಜಾ ಫಲಿತಾಂಶ ಇಲ್ಲಿದೆ
(India records 219 Covid-19 deaths 38,948 new cases of coronavirus infections in last 24 hours)