ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರ ಒಟ್ಟು 6151 ಜನರಲ್ಲಿ ಕೊರೊನಾವೈರಸ್ (Coronavirus) ಸೋಂಕು ದೃಢಪಟ್ಟಿದೆ. ಕೊವಿಡ್ನಿಂದ ಒಟ್ಟು 49 ಜನರು ಸಾವನಪ್ಪಿದ್ದಾರೆ. ಒಟ್ಟು 16,802 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 87,080 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 6.19, ಸೋಂಕಿತರ ಸಾವಿನ ಸರಾಸರಿ ಶೇ 0.79 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 39,02,309 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 37,75,799 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 39,396 ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರದಲ್ಲಿ 2718 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 6726 ಜನರು ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 35,631 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 15 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 17,60,176 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 17,07,853 ಜನರು ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 35,631 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಒಟ್ಟು 17,60,176 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ಒಟ್ಟು 17,07,853 ಜನರು ಚೇತರಿಸಿಕೊಂಡಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 2718, ಬಾಗಲಕೋಟೆ 60, ಬಳ್ಳಾರಿ 154, ಬೆಳಗಾವಿ 321, ಬೆಂಗಳೂರು ಗ್ರಾಮಾಂತರ 70, ಬೀದರ್ 34, ಚಾಮರಾಜನಗರ 115, ಚಿಕ್ಕಬಳ್ಳಾಪುರ 102, ಚಿಕ್ಕಮಗಳೂರು 51, ಚಿತ್ರದುರ್ಗ 161, ದಕ್ಷಿಣ ಕನ್ನಡ 90, ದಾವಣಗೆರೆ 35, ಧಾರವಾಡ 149, ಗದಗ 31, ಹಾಸನ 219, ಹಾವೇರಿ 102, ಕಲಬುರ್ಗಿ 117, ಕೊಡಗು 195, ಕೋಲಾರ 77, ಕೊಪ್ಪಳ 133, ಮಂಡ್ಯ 182, ಮೈಸೂರು 285, ರಾಯಚೂರು 49, ರಾಮನಗರ 25, ಶಿವಮೊಗ್ಗ 177, ತುಮಕೂರು 210, ಉಡುಪಿ 85, ಉತ್ತರ ಕನ್ನಡ 106, ವಿಜಯಪುರ 73, ಯಾದಗಿರಿ 25.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 15, ಮೈಸೂರು 6, ತುಮಕೂರು, ಉಡುಪಿ 4, ದಕ್ಷಿಣ ಕನ್ನಡ 3, ಧಾರವಾಡ, ಹಾಸನ, ಬೆಳಗಾವಿ 2, ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿತ್ರದುರ್ಗ, ಹಾವೇರಿ, ಮಂಡ್ಯ, ರಾಯಚೂರು, ರಾಮನಗರ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಇಂದಿನ 07/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/h1GQX2ULrc @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/D76sE0rrd8
— K’taka Health Dept (@DHFWKA) February 7, 2022
ಇದನ್ನೂ ಓದಿ: ಭಾರತೀಯ ವಿಜ್ಞಾನಿಗಳಿಂದ ಕೊರೊನಾ ತಡೆಗೆ ತಾಮ್ರ ಆಧಾರಿತ ಆ್ಯಂಟಿವೈರಲ್ ಫೇಸ್ ಮಾಸ್ಕ್ ಅಭಿವೃದ್ಧಿ
ಇದನ್ನೂ ಓದಿ: ಕೊವಿಡ್ ಎರಡನೇ ಅಲೆ ಸಮಯದಲ್ಲಿ ಗಂಗಾ ನದಿಯಲ್ಲಿ ಎಸೆಯಲಾದ ಮೃತದೇಹಗಳ ಕುರಿತು ಮಾಹಿತಿ ಲಭ್ಯವಿಲ್ಲ: ಕೇಂದ್ರ
Published On - 8:38 pm, Mon, 7 February 22