ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಭೀತಿ; ಸೋಂಕಿತರ ಸಂಪರ್ಕದವರನ್ನು ಪತ್ತೆ ಹಚ್ಚುವಲ್ಲಿ ಎಡವಿರುವ ಅಧಿಕಾರಿಗಳು

| Updated By: ಆಯೇಷಾ ಬಾನು

Updated on: Aug 18, 2021 | 1:07 PM

ಕೊರೊನಾ ಸೋಂಕು ಹರಡುವುದನ್ನು ಎದುರಿಸಲು ರಾಜ್ಯ ತಾಂತ್ರಿಕ ಸಲಹಾ ಸಮಿತಿ, ಪ್ರತಿ ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ 20 ಜನರನ್ನಾದರೂ ಪತ್ತೆ ಹಚ್ಚಿ ಕೊರೊನಾ ಟೆಸ್ಟ್ ಮಾಡಲು ಶಿಫಾರಸು ಮಾಡಿತ್ತು. ಆದ್ರೆ ನೀಡಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ಪ್ರತಿ ಕೊರೊನಾ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 7 ಜನರನ್ನು ಮಾತ್ರ ಪತ್ತೆ ಹಚ್ಚಲಾಗಿದೆ.

ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಭೀತಿ; ಸೋಂಕಿತರ ಸಂಪರ್ಕದವರನ್ನು ಪತ್ತೆ ಹಚ್ಚುವಲ್ಲಿ ಎಡವಿರುವ ಅಧಿಕಾರಿಗಳು
ಕೊವಿಡ್​ ಪರೀಕ್ಷೆ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ಮಹಾಮಾರಿ ಕೊರೊನಾ ಎರಡನೇ ಅಲೆ ಮುಗಿದು ಈಗ ಮೂರನೇ ಅಲೆ ಭೀತಿ ಶುರುವಾಗಿದೆ. ಆದ್ರೆ ಇದರ ನಡುವೆ ಈಗ ಸರ್ಕಾರ, ಅಧಿಕಾರಿಗಳು ಮತ್ತೊಮ್ಮೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಿಸಲು ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಿ ಅವರಿಗೆ ಸೋಂಕು ತಗುಲದಂತೆ ಹಾಗೂ ಅವರಿಂದ ಸೋಂಕು ಹರಡದಂತೆ ಅಧಿಕಾರಿಗಳು ಗಮನ ಹರಿಸಬೇಕು. ಆದ್ರೆ ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಎಡವಿದ್ದಾರೆ.

ಕೇವಲ ಉತ್ತರ ಕನ್ನಡ ಜಿಲ್ಲೆ ಮಾತ್ರ ಪ್ರತಿ ಕೊರೊನಾ ಸೋಂಕಿತ ವ್ಯಕ್ತಿಯಿಂದ ಸರಾಸರಿ 20 ಅಥವಾ ಅದಕ್ಕಿಂತ ಹೆಚ್ಚಿನ ಸೋಂಕಿತರ ಸಂಪರ್ಕಗಳನ್ನು ಪತ್ತೆಹಚ್ಚುತ್ತಿದೆ. ಆದ್ರೆ ಕಳೆದ ವಾರದಲ್ಲಿ (ಆಗಸ್ಟ್ 10 ರಿಂದ 16) ಕೋವಿಡ್ -19 ರೋಗಿಗಳ ಸಂಪರ್ಕವನ್ನು ಪತ್ತೆಹಚ್ಚುವಲ್ಲಿ ಕರ್ನಾಟಕ ಎಡವಿದೆ. ಇದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಸೋಂಕು ಹರಡುವುದನ್ನು ಎದುರಿಸಲು ರಾಜ್ಯ ತಾಂತ್ರಿಕ ಸಲಹಾ ಸಮಿತಿ, ಪ್ರತಿ ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ 20 ಜನರನ್ನಾದರೂ ಪತ್ತೆ ಹಚ್ಚಿ ಕೊರೊನಾ ಟೆಸ್ಟ್ ಮಾಡಲು ಶಿಫಾರಸು ಮಾಡಿತ್ತು. ಆದ್ರೆ ನೀಡಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ಪ್ರತಿ ಕೊರೊನಾ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 7 ಜನರನ್ನು ಮಾತ್ರ ಪತ್ತೆ ಹಚ್ಚಲಾಗಿದೆ. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ಒಬ್ಬ ಸೋಂಕಿತರ ಸಂಪರ್ಕದಲ್ಲಿದ್ದ 12 ಮಂದಿಯನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು 14 ಜಿಲ್ಲೆಗಳಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದ 10ಕ್ಕಿಂತ ಕಡಿಮೆ ಜನರನ್ನು ಪತ್ತೆ ಹಚ್ಚಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ತಿಪ್ಪೇಸ್ವಾಮಿ, ಪ್ರತಿ ಪ್ರಕರಣಕ್ಕೆ ಕೊರೊನಾ ಸೋಂಕಿತರ ಜೊತೆ ಸಂಪರ್ಕವಿರುವ 10ರಿಂದ 20 ಮಂದಿಯನ್ನು ಪತ್ತೆ ಮಾಡಲಾಗಿದೆ. ಇದು ಸದ್ಯ ನಮಗೆ ವಾರ್ಡ್ ರೂಮ್ನಿಂದ ಸಿಗುತ್ತಿರುವ ಮಾಹಿತಿ. ಆದರೆ ಇದು ಸುಳ್ಳು ಮಾಹಿತಿ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿರುವವರ ಸಂಖ್ಯೆ ಹೆಚ್ಚಿದೆ. ವಾರ್ಡ್ ರೂಮ್ನಲ್ಲಿ ಸಂಗ್ರಹವಾಗುತ್ತಿರುವ ಮಾಹಿತಿಯಲ್ಲಿ ಏನೂ ಸಮಸ್ಯೆಯಾಗಿದೆ. ಈ ಬಗ್ಗೆ ಈಗಾಗಲೇ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗ ಇದು ಸರಿ ಹೋಗುತ್ತೆ ಎಂದು ತಿಳಿಸಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ ಎಂಕೆ ಸುದರ್ಶನ್ ಹೇಳುವ ಪ್ರಕಾರ, ಒಬ್ಬ ಸೋಂಕಿತನ ಸಂಪರ್ಕದಲ್ಲಿರುವ 10 ಜನರನ್ನು ಪತ್ತೆ ಮಾಡುತ್ತಿರುವುದನ್ನು 20 ಜನರಿಗೆ ಏರಿಕೆ ಮಾಡಬೇಕು. ಆಗ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಆದ್ರೆ ಈ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ ಎಂದು ಅಧಿಕಾರಿಗಳು ಹೇಳುತ್ತಾರೆ. ಏಕೆಂದರೆ ಸೋಂಕಿತರು ತಾವು 14 ದಿನಗಳ ಹಿಂದೆ ಭೇಟಿ ಮಾಡಿದವರ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಸೋಂಕಿತನ ಮನೆಯವರು, ಕುಟುಂಬಸ್ಥರು ಯಾರು ಸಹಕರಿಸುವುದಿಲ್ಲ. ಹೀಗಾಗಿ ಸೋಂಕಿತರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವುದು ಕಷ್ಟು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಆತಂಕ; ಶಾಲೆ ತೆರೆಯದಂತೆ ರಾಜ್ಯ ಸರ್ಕಾರಕ್ಕೆ ಫನಾ ಸಲಹೆ