ಬೆಂಗಳೂರು, (ಡಿಸೆಂಬರ್ 16): ಬೆಂಗಳೂರಿನ ಸಿಲ್ಕ್ ಬೋರ್ಡ್ ಟು ಕೆ.ಆರ್ ಪುರ, ಕೆ.ಆರ್ ಪುರ ಟು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಈ ಮಾರ್ಗದಲ್ಲಿ ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಗಾರಿ ಅಂದುಕೊಂಡಷ್ಟು ವೇಗದಲ್ಲಿ ಕೆಲಸ ನಡೆಯುತ್ತಿರಲಿಲ್ಲ. ಇದಕ್ಕೆ ಇದೀಗ ರಾಜ್ಯ ಸರ್ಕಾರ ವೇಗ ನೀಡಲುಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದು, 2026 ಜೂನ್ ನೊಳಗೆ ಕಾಮಗಾರಿ ಮುಗಿದು ಮೆಟ್ರೋ ರೈಲು ಸಂಚಾರ ಮಾಡಬೇಕೆಂದು ಖಡಕ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಅಧಿಕಾರಿಗಳು ಕಾಮಗಾರಿಯನ್ನು ವೇಗವಾಗಿ ಮುಗಿಸಲು ಮುಂದಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಏರ್ಪೋರ್ಟ್ ಮಾರ್ಗದಲ್ಲಿ ಓಡಾಡುತ್ತಿರುವವರಿಗೆ ಬೇಗ ಮೆಟ್ರೋನಲ್ಲಿ ಸಂಚರಿಸುವ ಕಾಲ ಕೂಡಿಬರಲಿದೆ.
ಇನ್ನೂ ಸಿಲ್ಕ್ ಬೋರ್ಡ್ ಟು ಕೆ.ಆರ್ ಪುರ, ಟು ಏರ್ಪೋರ್ಟ್ ಮೆಟ್ರೋ 58.19 ಕಿಮೀ ವಿಸ್ತೀರ್ಣವಿದ್ದು,ಈ ಮಾರ್ಗದಲ್ಲಿ ಮೂವತ್ತು ಮೆಟ್ರೋ ಸ್ಟೇಷನ್ ಗಳಿರಲಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್ ಪುರ 19.75 ಕಿಮೀ 13 ಸ್ಟೇಷನ್ ಗಳು. ಕೆ.ಆರ್ ಪುರ ಟು ಏರ್ಪೋರ್ಟ್ 38.44 ಕಿಮೀ 17 ಮೆಟ್ರೋ ಸ್ಟೇಷನ್ ಗಳಿರಲಿವೆ.
ಇದನ್ನೂ ಓದಿ: ಚಾಲಕ ರಹಿತ ನಮ್ಮ ಮೆಟ್ರೋ ಆರಂಭಕ್ಕೂ ಮುನ್ನವೇ ಬಂತು ನೂರಾರು ಕೋಟಿ ರೂ. ಆದಾಯ..!
ನೀಲಿ ಮಾರ್ಗವನ್ನು ಬರೋಬ್ಬರಿ 14,788 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗ್ತಿದೆ. ಏರ್ಪೋರ್ಟ್ ನಲ್ಲಿ ಟರ್ಮಿನಲ್ 1 ಮತ್ತು 2 ನಡುವೆ ಮೆಟ್ರೋ ಸ್ಟೇಷನ್ ನಿರ್ಮಾಣವಾಗಲಿದೆ. ಎರಡು ಟರ್ಮಿನಲ್ ಗೆ ಬರುವ ಮತ್ತು ಹೋಗುವಾಗ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಕೆಂಪೇಗೌಡ ಏರ್ಪೋರ್ಟ್ ಎರಡು ಟರ್ಮಿನಲ್ ಗಳ ಮಧ್ಯದಲ್ಲಿ ಮೆಟ್ರೋ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಎರಡು ಟರ್ಮಿನಲ್ ಗಳಿಗೆ ಸಂಪರ್ಕ ಕಲ್ಪಿಸಲು ಫ್ಲೈ ಓವರ್ ಮತ್ತು ಎಸ್ಕಲೇಟರ್ ಮಾಡಲಾಗುತ್ತದೆ.
ಒಟ್ಟಿನಲ್ಲಿ ಬೆಂಗಳೂರು ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಬೇಕು ಅಂದರೆ ಕ್ಯಾಬ್ ನಲ್ಲಿ ಸಾವಿರಾರು ರುಪಾಯಿ ಹಣ ನೀಡಬೇಕು. ಇನ್ನು ಹಣ ನೀಡಿದ್ರು ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡಬೇಕಿತ್ತು. ಆದ್ರೆ, ಬ್ಲೂ ಲೈನ್ ಮೆಟ್ರೋ ಸಂಚಾರ ಆರಂಭದಿಂದ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗುವುದರಂತೂ ಗ್ಯಾರಂಟಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 pm, Mon, 16 December 24