ಚಾಲಕ ರಹಿತ ನಮ್ಮ ಮೆಟ್ರೋ ಆರಂಭಕ್ಕೂ ಮುನ್ನವೇ ಬಂತು ನೂರಾರು ಕೋಟಿ ರೂ. ಆದಾಯ..!
ಆರ್ ವಿ ರೋಡ್ ಟು ಬೊಮ್ಮಸಂದ್ರ ಹಳದಿ ಮೆಟ್ರೋ ಇದು ಬೆಂಗಳೂರು ನಿವಾಸಿಗಳ ಹಲವು ವರ್ಷಗಳ ಕನಸು. ಎಲ್ಲಾ ಅಂದುಕೊಂಡಂತೆ ಆದರೆ ಜನವರಿಯಲ್ಲಿ ಚೀನಾ ಡ್ರೈವರ್ಲೆಸ್ ರೈಲು ಟ್ರ್ಯಾಕ್ ಮೇಲೆ ಸಂಚಾರ ಮಾಡಲಿದೆ.. ಆದರೆ ಆರಂಭಕ್ಕೂ ಮುನ್ನವೇ ಮೆಟ್ರೋ ಸ್ಟೇಷನ್ ಗಳ ಹೆಸರಿನಿಂದಲೇ ಬರೋಬ್ಬರಿ 230 ಕೋಟಿ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಆದಾಯದ ಮೂಲ ಹುಡುಕುತ್ತಿರುವ ಬಿಎಂಆರ್ಸಿಎಲ್ ಫುಲ್ ಖುಷ್ ಆಗಿದೆ.
ಬೆಂಗಳೂರು, (ಡಿಸೆಂಬರ್ 11): ಆರ್ವಿ ರೋಡ್ ಟು ಬೊಮ್ಮಸಂದ್ರ 19.15 ಕಿಮೀ ಹಳದಿ ಮಾರ್ಗದ ಮೆಟ್ರೋ ಜನವರಿಯಲ್ಲಿ ಆರಂಭವಾಗುವ ಎಲ್ಲಾ ಸಾಧ್ಯತೆಗಳಿವೆ. ಆದರೆ ಚೀನಾದ ಡ್ರೈವರ್ಲೆಸ್ ಮೆಟ್ರೋ ಸಂಚಾರ ಆರಂಭಕ್ಕೂ ಮೊದಲೇ ನಮ್ಮ ಮೆಟ್ರೋ ಮೂರು ಐಟಿಬಿಟಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳವ ಮೂಲಕ ಬರೋಬ್ಬರಿ 230 ಕೋಟಿ ರುಪಾಯಿ ಆದಾಯಗಳಿಸಿದೆ. ನಮ್ಮ ಮೆಟ್ರೋ ಈಗಾಗಲೇ ಆರ್ಥಿಕ ಸಂಕಷ್ಟದಿಂದ ಹೊರ ಬರಲು ಪರದಾಡುತ್ತಿತ್ತು, ಈ ಒಪ್ಪಂದಿಂದ ಆರ್ಥಿಕವಾಗಿ ನಮ್ಮ ಮೆಟ್ರೋಗೆ ಸಹಾಯವಾಗಿದೆ.
ಆರ್ ವಿ ರೋಡ್ ಟು ಬೊಮ್ಮಸಂದ್ರ ಮಾರ್ಗ ಬರೋ ತಿಂಗಳು ಓಪನ್ ಆಗಲಿದ್ದು, ಈ ಹಿನ್ನೆಲೆಯಲ್ಲಿ ಮೂರು ಮೆಟ್ರೋ ಸ್ಟೇಷನ್ ಗಳಿಗೆ ಮೂರು ಐಟಿಬಿಟಿ ಕಂಪನಿಗಳ ಹೆಸರಿಡಲು ನಮ್ಮ ಮೆಟ್ರೋ ಮುಂದಾಗಿದೆ. ಕೊನ್ನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್ ಗೆ ಇನ್ಪೋಸಿಸ್ ಕೊನ್ನಪ್ಪನ್ನ ಅಗ್ರಹಾರ ಮೆಟ್ರೋ ಎಂದು, ಹೆಬ್ಬಗೋಡಿ ಮೆಟ್ರೋ ಸ್ಟೇಷನ್ ಅನ್ನು ಬಯೋಕಾನ್ ಹೆಬ್ಬಗೋಡಿ ಮೆಟ್ರೋ ಸ್ಟೇಷನ್ ಎಂದು, ಬೊಮ್ಮಸಂದ್ರ ಮೆಟ್ರೋ ಸ್ಟೇಷನ್ ಗೆ ಡೆಲ್ಟಾ ಬೊಮ್ಮಸಂದ್ರ ಮೆಟ್ರೊ ಸ್ಟೇಷನ್ ಎಂದು ಹೆಸರಿಡಲು ಮೂವತ್ತು ವರ್ಷಕ್ಕೆ ಬರೋಬ್ಬರಿ 65 ಕೋಟಿ ರುಪಾಯಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಾರೆ.
ಇನ್ನೂ ಇನ್ಫೋಸಿಸ್ ಮೆಟ್ರೋ ಎಂದು ಹೆಸರಿಡಲು ಮೂವತ್ತು ವರ್ಷಕ್ಕೆ 65 ಕೋಟಿ ರುಪಾಯಿ, ಇನ್ಫೋಸಿಸ್ ಕಂಪನಿ ಒಳಗೆ ಮೆಟ್ರೋ ಸ್ಕೈವಾಕ್ ಮಾರ್ಗಕ್ಕಾಗಿ 25 ಕೋಟಿ ರೂ., ಜಾಹೀರಾತಿಗಾಗಿ 10 ಕೋಟಿ ರೂ. ಸೇರಿದಂತೆ ಒಟ್ಟು ಇನ್ಫೋಸಿಸ್ ನಿಂದಲೇ ನಮ್ಮ ಮೆಟ್ರೋಗೆ ನೂರು ಕೋಟಿ ರುಪಾಯಿ ಒಪ್ಪಂದ ಮಾಡಿಕೊಂಡಿದ್ರೆ, ಬಯೋಕಾನ್ ಎಂದು ಮೆಟ್ರೋ ಗೆ ಹೆಸರಿಡಲು 30 ವರ್ಷಕ್ಕೆ 65 ಕೋಟಿ ರುಪಾಯಿ ಪಡೆದುಕೊಳ್ಳಲಾಗಿದೆ.
ಮೆಟ್ರೋ ಸಂಚಾರಕ್ಕೂ ಮುನ್ನವೇ 230 ಕೋಟಿ ರುಪಾಯಿ ಒಪ್ಪಂದ ಮಾಡಿಕೊಂಡಿದ್ದು, ಈ ತಿಂಗಳು ಮತ್ತು ಜನವರಿ ಒಳಗೆ ಮತ್ತಷ್ಟು ಮೆಟ್ರೋ ಸ್ಟೇಷನ್ ಗಳಿಗೆ ಬೇರೆಬೇರೆ ಕಂಪನಿಗಳ ಹೆಸರನ್ನು ಹಾಕಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಾಕಷ್ಟು ಐಟಿಬಿಟಿ ಕಂಪನಿಗಳ ಜೊತೆಗೆ ಈ ಬಗ್ಗೆ ಮಾತುಕತೆ ಕೂಡ ನಡಿತಿದ್ಯಂತೆ. ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರು, ಪ್ರಯಾಣಿಕರ ಮೇಲೆ ಹೊರ ಕಮ್ಮಿ ಆಗುತ್ತದೆ ಟಿಕೆಟ್ ಹೆಚ್ಚಳ ಮಾಡದಿದ್ರೆ ಸಾಕು ಅಂತಾರೇ.
ಒಟ್ಟಿನಲ್ಲಿ ಈ ಮಾರ್ಗಕ್ಕಾಗಿ ಸಾವಿರಾರು ಕೋಟಿ ರುಪಾಯಿ ಸಾಲ ಮಾಡಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ನಮ್ಮ ಮೆಟ್ರೋ ಈ ಒಪ್ಪಂದಗಳಿಂದ ಬಿಎಂಆರ್ಸಿಎಲ್ ಹೊರೆ ತಗ್ಗಿದಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 pm, Wed, 11 December 24