ಹೆಲ್ತ್ ಎಮರ್ಜೆನ್ಸಿಗೆ ಸರ್ಕಾರದಿಂದ ಏರ್ ಆಂಬ್ಯುಲೆನ್ಸ್​​: ವಿಕ್ಟೋರಿಯಾದಲ್ಲಿ ಹೆಲಿಪ್ಯಾಡ್

ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಸಮಸ್ಯೆಯಿಂದ ಆಂಬ್ಯುಲೆನ್ಸ್​​ನಲ್ಲಿ ಅದೆಷ್ಟೋ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದಡೆ ಅಂಗಾಂಗ ದಾನದ ಸಂದರ್ಭದಲ್ಲಿ ಅಂಗಾಂಗವನ್ನು ಈ ಟ್ರಾಫಿಕ್‌ನಲ್ಲಿ ಸಾಗಿಸುವುದು ದೊಡ್ಡ ಸವಾಲಾಗಿದೆ ಹೀಗಾಗಿ ಸರ್ಕಾರ ರಾಜ್ಯದಲ್ಲಿ ಇದೆ ಮೊದಲ ಬಾರಿಗೆ ತುರ್ತು ಆರೋಗ್ಯ ಸೇವೆ ನೀಡಲು ಹೊಸ ಪ್ಲ್ಯಾನ್ ಮಾಡಿದೆ.

ಹೆಲ್ತ್ ಎಮರ್ಜೆನ್ಸಿಗೆ ಸರ್ಕಾರದಿಂದ ಏರ್ ಆಂಬ್ಯುಲೆನ್ಸ್​​: ವಿಕ್ಟೋರಿಯಾದಲ್ಲಿ ಹೆಲಿಪ್ಯಾಡ್
Follow us
Vinay Kashappanavar
| Updated By: ರಮೇಶ್ ಬಿ. ಜವಳಗೇರಾ

Updated on:Dec 11, 2024 | 10:50 PM

ಬೆಂಗಳೂರು, (ಡಿಸೆಂಬರ್ 11): ಬೆಂಗಳೂರಿನಲ್ಲಿ ಆಕ್ಸಿಡೆಂಟ್‌ನಂತಹ ತುರ್ತು ಪರಿಸ್ಥಿತಿಯಲ್ಲಿ ಹಾಗೂ ಅಂಗಾಂಗ ದಾನದ ಸಂದರ್ಭದಲ್ಲಿ ಅಂಗಾಂಗಳನ್ನು ಆಂಬ್ಯುಲೆನ್ಸ್​​ನಲ್ಲಿ ಸಾಗಿಸುವುದು ದೊಡ್ಡ ಸವಾಲಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆಯಲ್ಲಿ ಬೈಕ್ ಆಂಬ್ಯುಲೆನ್ಸ್​​ ಕೂಡ ಪರಿಚಯಿಸಿತ್ತು. ಆದ್ರೆ ಇದು ದೊಡ್ಡ ಮಟ್ಟದ ಉಪಯೋಗವಾಗದೇ ಯೋಜನೆ ಹಳ್ಳ ಹಿಡಿಯಿತು. ಈಗ ರಾಜ್ಯ ಸರ್ಕಾರ ಹೆಲ್ತ್ ಎಮರ್ಜೆನ್ಸಿಗೆ ಏರ್ ಆಂಬ್ಯುಲೆನ್ಸ್​​ ಪರಿಚಯಿಸುವ ಬ್ಲ್ಯೂ ಪ್ರಿಂಟ್ ರೆಡಿ ಮಾಡಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಗಂಭಿರವಾಗಿ ಚಿಂತನೆ ನಡೆಸುತ್ತಿದ್ದು, ಇದೇ ಮೊದಲ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಮುಂದಾಗಿದೆ.

ವಿಕ್ಟೋರಿಯಾದಲ್ಲಿ ಹೆಲಿಪ್ಯಾಡ್

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲಾಂಚ್ ಆಗಲಿದೆ ಹೆಲಿಪ್ಯಾಡ್.. ಹೌದು ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ರೋಗಿಗಳನ್ನ ತುರ್ತು ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿಲ್ಲ. ಹೀಗಾಗಿಯೇ ಸಾಕಷ್ಟು ರೋಗಿಗಳು ಆಸ್ಪತ್ರೆ ತಲುಪುವ ಮುನ್ನವೇ ಸಾಯುತ್ತಿದ್ದಾರೆ. ಅದರಲ್ಲೂ ರಾಜ್ಯದ ಬೇರೆ ಜಿಲ್ಲೆಗಳಿಂದ ಸಾಕಷ್ಟು ತುರ್ತು ಸೇವೆಗಳಿಗೆ ಜನರು ಇದೇ ಆಸ್ಪತ್ರೆಗೆ ಬರಬೇಕಿದೆ ಆಂಬ್ಯುಲೆನ್ಸ್ ನಲ್ಲಿ ಶಿಫ್ಟ್ ಆಗಲು ಸಾಕಷ್ಟು ಸಮಯ ತಗೆದುಕೊಳ್ಳುತ್ತಿದೆ. ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಹೆಲಿಪ್ಯಾಡ್ ಮಾಡಲು ಮುಂದಾಗಿದೆ.

ಇದನ್ನೂ ಓದಿ: ಚಾಲಕ ರಹಿತ ನಮ್ಮ ಮೆಟ್ರೋ ಆರಂಭಕ್ಕೂ ಮುನ್ನವೇ ಬಂತು ನೂರಾರು ಕೋಟಿ ರೂ. ಆದಾಯ..!

ಇದರೊಂದಿಗೆ ಸರ್ಕಾರಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಏರ್ ಆಂಬ್ಯುಲೆನ್ಸ್ ಮೂಲಕ ಸರ್ವಿಸ್ ನೀಡಲು ಮುಂದಾಗಿದೆ. ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಸಮಯದಲ್ಲಿ ತುರ್ತು ಆಸ್ಪತ್ರೆಗೆ ವರ್ಗಾಯಿಸಲು ಈ ಏರ್ ಆಂಬ್ಯುಲೆನ್ಸ್ ಸಾಕಷ್ಟು ಸಹಾಯಕವಾಗಲಿದೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನ ಆಸ್ಪತ್ರೆಗೆ ಈ ಆಂಬ್ಯುಲೆನ್ಸ್ ಮೂಲಕ ಶಿಫ್ಟ್ ಮಾಡಬಹುದಾಗಿದೆ.. ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಒಂದು ಸಾವಿರ ಬೆಡ್ ಆಸ್ಪತ್ರೆ ನಿರ್ಮಾಣಾಗುತ್ತಿದ್ದು,, ಇದರ ಮೇಲೆ ಹೆಲಿಪ್ಯಾಡ್ ಅಳವಡಿಸಿಕೊಳ್ಳಲು ಪ್ಲಾನ್ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಬೆಂಗಳೂರಿಗೆ ಹೆಲ್ತ್ ಎಮರ್ಜೆನ್ಸಿಯಲ್ಲಿ ಏರ್ ಆಂಬ್ಯುಲೆನ್ಸ್ ಸರ್ವಿಸ್ ತುಂಬಾ ಅವಶ್ಯವಾಗಿದೆ. ಸರ್ಕಾರ ಈ ಯೋಜನೆ ರೂಪುರೇಷೆ ಸಿದ್ಧಪಡಿಸುತ್ತಿದ್ದು, ಖಾಸಗಿ ಅಥವಾ ಪಿಪಿಪಿ ಮಾಡೆಲ್ ನಲ್ಲಿ ಏರ್ ಆಂಬ್ಯುಲೆನ್ಸ್ ನೀಡಲು ಚಿಂತನೆ ಮಾಡಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:49 pm, Wed, 11 December 24