ಮಾಜಿ ದೇವದಾಸಿಯರ ಮಾಸಾಶನ ಪಾವತಿಗೆ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ದೇವದಾಸಿಯರಿಗೆ ಕಳೆದ 5 ತಿಂಗಳುಗಳಿಂದ ಮಾಸಾಶನ ನೀಡದ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸಚಿವ ಗೋವಿಂದ ಕಾರಜೋಳ ನಿನ್ನೆ ಪತ್ರ ಬರೆದಿದ್ದರು.

ಮಾಜಿ ದೇವದಾಸಿಯರ ಮಾಸಾಶನ ಪಾವತಿಗೆ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Jul 12, 2022 | 8:21 PM

ಬೆಂಗಳೂರು: ಮಾಜಿ ದೇವದಾಸಿಯರ ಮಾಸಾಶನ ಪಾವತಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಏಪ್ರಿಲ್, ಮೇ, ಜೂನ್ ತಿಂಗಳ ಮಾಸಾಶನ ಪಾವತಿಗೆ 12,14,59,500 ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ದೇವದಾಸಿಯರಿಗೆ ಕಳೆದ 5 ತಿಂಗಳುಗಳಿಂದ ಮಾಸಾಶನ ನೀಡದ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸಚಿವ ಗೋವಿಂದ ಕಾರಜೋಳ ನಿನ್ನೆ ಪತ್ರ ಬರೆದಿದ್ದರು. ಸಚಿವ ಗೋವಿಂದ ಕಾರಜೋಳ ಪತ್ರದ ಮೂಲಕ ಒತ್ತಾಯ ಹಿನ್ನಲೆ ಇಂದು ಸರ್ಕಾರ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

Published On - 7:29 pm, Tue, 12 July 22