AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Corona Cases: ಬೆಂಗಳೂರಲ್ಲಿ ಮತ್ತೆ ನೈಟ್​, ವೀಕೆಂಡ್​ ಕರ್ಫ್ಯೂ ಜಾರಿ ಸಾಧ್ಯತೆ; ಸರ್ಕಾರದ ಹಂತದಲ್ಲಿ ಗಂಭೀರ ಚರ್ಚೆ

ಬೆಂಗಳೂರಿನಲ್ಲಿ ನಿಯಮ ಬಿಗಿಗೊಳಿಸುವ ಅವಶ್ಯಕತೆ ಇರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಂದ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಬಿಬಿಎಂಪಿ ಮನವಿಯನ್ನ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಂಭೀರವಾಗಿ ಪರಿಗಣಿಸಿದ್ದಾರೆ.

Corona Cases: ಬೆಂಗಳೂರಲ್ಲಿ ಮತ್ತೆ ನೈಟ್​, ವೀಕೆಂಡ್​ ಕರ್ಫ್ಯೂ ಜಾರಿ ಸಾಧ್ಯತೆ; ಸರ್ಕಾರದ ಹಂತದಲ್ಲಿ ಗಂಭೀರ ಚರ್ಚೆ
ಕೊರೊನಾ ಕರ್ಫ್ಯೂ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Jul 31, 2021 | 9:41 AM

Share

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ (Corona cases) ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ನೈಟ್​ ಕರ್ಫ್ಯೂ (Night Curfew), ವೀಕೆಂಡ್​ ಕರ್ಫ್ಯೂ (Weekend Curfew) ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಕೆಲ ದಿನಗಳ ಹಿಂದಷ್ಟೇ ಕೊರೊನಾ ನಿಯಮಾವಳಿಗಳನ್ನು ಸಡಿಲಿಸಿ ಸುಸೂತ್ರ ಓಡಾಟಕ್ಕೆ ಅನುವು ನೀಡಲಾಗಿತ್ತಾದರೂ ಈಗ ದಿನೇ ದಿನೇ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು ಮೂರನೇ ಅಲೆ ಭೀತಿ ಶುರುವಾಗಿದೆ. ಬೆಂಗಳೂರಿನಲ್ಲಿ (Bengaluru) ಸೋಂಕಿತರ ಸಂಖ್ಯೆ 500ರ ಗಡಿದಾಟಿದ ಬೆನ್ನಲ್ಲೇ ಸರ್ಕಾರದ ಹಂತದಲ್ಲಿ ಮಹತ್ವದ ಚರ್ಚೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಯಾಗಬಹುದು ಎಂದೆನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ನಿಯಮ ಬಿಗಿಗೊಳಿಸುವ ಅವಶ್ಯಕತೆ ಇರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಂದ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಬಿಬಿಎಂಪಿ ಮನವಿಯನ್ನ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದ್ದು, ನೈಟ್ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಸೇರಿದಂತೆ ಇನ್ನಿತರ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಜಾರಿ ಮಾಡುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಜನರ ಓಡಾಟ ಹೆಚ್ಚಾಗಿದ್ದು, ಕೊರೊನಾ ನಿಯಮಾವಳಿಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಜನರ ನಿರ್ಲಕ್ಷ್ಯ ಹೆಚ್ಚಾಗಿದ್ದು, ಮೂರನೇ ಅಲೆ ಭೀತಿ ಶುರುವಾಗಿರುವುದರಿಂದ ನೈಟ್ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಸೋಂಕಿತರ ಸಂಪರ್ಕಿತರಲ್ಲೂ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವುದು ಕಂಡುಬಂದಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಶೀಘ್ರದಲ್ಲೇ ಕಠಿಣ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ. ಬೆಂಗಳೂರು ನಗರದಲ್ಲೂ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂದು ಟಿವಿ9ಗೆ ಬೆಂಗಳೂರು ನಗರ ಡಿಸಿ ಮಂಜುನಾಥ್ ಹೇಳಿಕೆ ನೀಡಿದ್ದಾರೆ. ಕರ್ನಾಟಕ-ತಮಿಳುನಾಡು ಗಡಿಯಲ್ಲಿ ತಪಾಸಣೆ ನಡೆಯುತ್ತಿದೆ. ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರಿಗೆ ತಪಾಸಣೆ ಮಾಡಲಾಗುತ್ತಿದೆ. ವೀಕೆಂಡ್, ನೈಟ್ ಕರ್ಫ್ಯೂ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಲಿದೆ. ಜನರು ಗುಂಪು ಸೇರದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ. ಕೊರೊನಾ 3ನೇ ಅಲೆ ತಡೆಯಲು ಜನರ ಸಹಕಾರ ಅಗತ್ಯ. ಹೆಚ್ಚು ಬೆಡ್, ಆಕ್ಸಿಜನ್ ಪ್ಲಾಂಟ್​ಗಳ ನಿರ್ಮಾಣ ಮಾಡುವತ್ತ ನಿಗಾ ವಹಿಸಲಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ (ಜುಲೈ 30) 426, ಮೊನ್ನೆ (ಜುಲೈ 29) 506 ಸೋಂಕಿತರು ಪತ್ತೆಯಾಗಿದ್ದು, 300 ರ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ಈಗ ಏಕಾಏಕಿ ಏರಿಕೆಯಾಗಿದೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಹಿನ್ನೆಲೆ ಕೇರಳ ರಾಜ್ಯದಲ್ಲಿ ಲಾಕ್​ಡೌನ್ ಘೋಷಿಸಲಾಗಿದ್ದು, ಬೆಂಗಳೂರಿಗೂ ಕೇರಳದ ಆತಂಕ ಶುರುವಾಗಿದೆ. ಕಳೆದ ನಾಲ್ಕು ದಿನಗಳಿಂದ 400ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಕಂಟೈನ್ಮೆಂಟ್ ಜೋನ್​ಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಕಂಟೈನ್ಮೆಂಟ್ ಜೋನ್​ಗಳ ಸಂಖ್ಯೆ 108ಕ್ಕೆ ಏರಿಕೆಯಾಗಿದ್ದು, ಮಹಾದೇವಪುರ, ಬೊಮ್ಮನಹಳ್ಳಿ, ಯಲಹಂಕ ಭಾಗದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಅಪಾರ್ಟ್ಮೆಂಟ್​ಗಳಲ್ಲೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಂಕಿತರ ಮನೆಗಳನ್ನ ಕಂಟೈನ್ಮೆಂಟ್ ಮಾಡಿ ಬಿಬಿಎಂಪಿ ಘೋಷಿಸಿದೆ. ಮುಖ್ಯ ಗೇಟ್ ಕ್ಲೋಸ್ ಮಾಡಿ, ಟೇಪ್ ಸುತ್ತುವ ಮೂಲಕ ಬಂದ್ ಮಾಡಲಾಗಿದ್ದು, ಇತ್ತ ಕೇರಳದಿಂದ ಬರುವ ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.

ಇದನ್ನೂ ಓದಿ: ಕೊರೊನಾ ಆತಂಕ: ಕೇರಳ-ಕರ್ನಾಟಕ ಗಡಿಯಲ್ಲಿ ಕಠಿಣ ಕ್ರಮ ಜಾರಿ; ಇಂದು ಸಂಜೆ ಜಿಲ್ಲಾಡಳಿತಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ 

Explainer: ಕೇರಳದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿರುವುದೇಕೆ?

(Karnataka Government may Impose Night Curfew and Weekend Curfew in Bengaluru amid spike in Covid 19 cases)

Published On - 8:30 am, Sat, 31 July 21