ಬೆಂಗಳೂರು, ಡಿಸೆಂಬರ್ 20: ಎಲೆಕ್ಟ್ರಾನಿಕ್ ಸಿಟಿ ಆರ್ಟಿಒಗೆ ಸೇರಿದ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು. KA-51-MY-0001 ನಂಬರ್ 4.35 ಲಕ್ಷ ರೂ.ಗೆ ಹರಾಜಾಗಿದೆ. KA-51-MY-9999 4.35 ಲಕ್ಷ ರೂ.ಗೆ ಹರಾಜಾದರೆ, KA-51-MY-0009 ಅನ್ನು 3 ಲಕ್ಷ ಲಕ್ಷ ರೂ.ಗೆ ಹರಾಜು ಕೂಗಲಾಯಿತು.
ಸುಮಾರು 62 ಫ್ಯಾನ್ಸಿ ನಂಬರ್ಗಳನ್ನು ಹರಾಜಿಗಿಡಲಾಗಿತ್ತು. ಹರಾಜಿನಲ್ಲಿ ಸುಮಾರು 50 ಕ್ಕೂ ಹೆಚ್ಚು ಜನರು ಭಾಗಿಯಾಗಿದರು. ಮಧ್ಯಾಹ್ನ 12 ಗಂಟೆಗೆ ಶಾಂತಿನಗರ ರಾಜ್ಯ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಆರಂಭವಾದ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ, ಸುಮಾರು ಎರಡ್ಮೂರು ಗಂಟೆಗಳ ಕಾಲ ನಡೆಯಿತು.
1, 0001, 0027, 0999, 0099, 0555, 0,333 4444, 6666, 1111, 7777, 8888, 8055, 4444, 2727, 3333 5999, 6999, 0099, 0555, 9999, 9000, 9099, 4599 ಹರಾಜು ಪ್ರಕ್ರಿಯೆಯಲ್ಲಿದ್ದ ಫ್ಯಾನ್ಸಿ ನಂಬರ್ಗಳಾಗಿವೆ. ಈ ಬಾರಿ 0001 ನಂಬರ್ 4,35,000 ರೂ.ಗೆ ಹರಾಜಾಗಿದೆ. ಕಳೆದ ತಿಂಗಳು 0001 ನಂಬರ್ 21.15 ಲಕ್ಷ ರೂ.ಗೆ ಹರಾಜಾಗಿತ್ತು. ಆದರೆ ಈ ಬಾರಿ KA- 51-MY-0001 4.35 ಲಕ್ಷ ರೂ.ಗೆ ಮಾರಾಟವಾಗಿದೆ.
ಈ ಬಾರಿಯ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಸುಮಾರು 80 ಲಕ್ಷ ರುಪಾಯಿ ಆದಾಯ ಬಂದಿದೆ ಎಂದು ರಾಜ್ಯ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಗೂಡ್ಸ್ ವಾಹನಗಳಿಗೆ ನಿರ್ಬಂಧ: ಪರ್ಯಾಯ ಮಾರ್ಗಗಳು ಹೀಗಿವೆ
ಹರಾಜಿಗಿಟ್ಟದ್ದ 62 ಫ್ಯಾನ್ಸಿ ನಂಬರ್ಗಳ ಪೈಕಿ 9 ಫ್ಯಾನ್ಸಿ ನಂಬರ್ಗಳು ಮಾತ್ರ ಹರಾಜಾದವು. ಉಳಿದ ಫ್ಯಾನ್ಸಿ ನಂಬರ್ಗಳನ್ನು ಸಾರಿಗೆ ಇಲಾಖೆ ಮುಖ್ಯ ಕಚೇರಿಗೆ ಭೇಟಿ ನೀಡಿ ತಮ್ಮದಾಗಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ