ಗೃಹ ಖರೀದಿದಾರರಿಗೆ ಹೈಕೋರ್ಟ್ ಬಿಗ್ ರಿಲೀಫ್: ಬಿಲ್ಡರ್ ತಪ್ಪಿಗೆ ಸಾಲಗಾರರ ಮೇಲೆ ಕ್ರಿಮಿನಲ್ ಕೇಸ್ ಹಾಕುವಂತಿಲ್ಲ, ಎಚ್ಚರಿಕೆ ನೀಡಿದ ಹೈಕೋರ್ಟ್

ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಬಿಲ್ಡರ್ ವಂಚನೆಯಿಂದ ಫ್ಲಾಟ್ ಮರುಮಾರಾಟವಾದಾಗ, ಸಾಲ ಮರುಪಾವತಿಯಾಗದಿದ್ದರೂ ಸಾಲಗಾರರನ್ನು ಕ್ರಿಮಿನಲ್ ಮೊಕದ್ದಮೆಗೆ ಒಳಪಡಿಸುವಂತಿಲ್ಲ ಎಂದು ಹೇಳಿದೆ. ತ್ರಿಪಕ್ಷೀಯ ಒಪ್ಪಂದವಿದ್ದರೂ, ಸಾಲಗಾರ ವಂಚನೆಯಲ್ಲಿ ಭಾಗಿಯಾಗಿಲ್ಲದಿದ್ದರೆ ಅವರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲಾಗುತ್ತದೆ. ಈ ತೀರ್ಪು ಮನೆ ಸಾಲಗಾರರ ಹಕ್ಕುಗಳನ್ನು ರಕ್ಷಿಸುತ್ತದೆ.

ಗೃಹ ಖರೀದಿದಾರರಿಗೆ ಹೈಕೋರ್ಟ್ ಬಿಗ್ ರಿಲೀಫ್: ಬಿಲ್ಡರ್ ತಪ್ಪಿಗೆ ಸಾಲಗಾರರ ಮೇಲೆ ಕ್ರಿಮಿನಲ್ ಕೇಸ್ ಹಾಕುವಂತಿಲ್ಲ, ಎಚ್ಚರಿಕೆ ನೀಡಿದ ಹೈಕೋರ್ಟ್
ಹೈಕೋರ್ಟ್

Updated on: Oct 15, 2026 | 10:30 AM

ಬೆಂಗಳೂರು, ಅ.15: ಮನೆ ಸಾಲ ಪಡೆದ ಬಳಿಕ ಬಿಲ್ಡರ್ ಆ ಫ್ಲಾಟ್ ಅನ್ನು ಬೇರೆಯವರಿಗೆ ಮಾರಾಟ ಮಾಡಿದ ಕಾರಣಕ್ಕಾಗಿ, ಸಾಲ ಮರುಪಾವತಿಯಾಗಿಲ್ಲ ಎಂಬ ಮಾತ್ರಕ್ಕೆ ಸಾಲಗಾರನನ್ನು ಕ್ರಿಮಿನಲ್ ಮೊಕದ್ದಮೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅರ್ಜಿದಾರ ಸಾಲಗಾರನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠವು ರದ್ದುಗೊಳಿಸಿದೆ.

ಏನಿದು ಪ್ರಕರಣ?:

‘ಗ್ರ್ಯಾಂಡರ್ ಪಾರ್ಕ್’ ಯೋಜನೆಯ ಬಿ-306 ಫ್ಲಾಟ್ ಖರೀದಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (SBI) 39.92 ಲಕ್ಷ ರೂಪಾಯಿಗಳ ಗೃಹ ಸಾಲವನ್ನು ಪಡೆಯಲಾಗಿತ್ತು. ಸಾಲಗಾರ, ಡೆವಲಪರ್ (ಬಿಲ್ಡರ್) ಹಾಗೂ ಬ್ಯಾಂಕ್ ನಡುವೆ ಫೆಬ್ರವರಿ 8, 2020 ರಂದು ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಪ್ರಾಜೆಕ್ಟ್ ಅಪೂರ್ಣಗೊಂಡರೆ ಅಥವಾ ರದ್ದಾದರೆ ಬ್ಯಾಂಕ್‌ನಿಂದ ಪಡೆದ ಹಣವನ್ನು ಡೆವಲಪರ್ ಮರುಪಾವತಿಸಬೇಕು ಮತ್ತು ಬ್ಯಾಂಕ್‌ನ ಪೂರ್ವಾನುಮತಿಯಿಲ್ಲದೆ ಫ್ಲಾಟ್ ಅನ್ನು ಇತರರಿಗೆ ಹಸ್ತಾಂತರಿಸಬಾರದು ಎಂಬ ನಿಯಮವಿತ್ತು.

ಆದರೆ ಪ್ರಾಜೆಕ್ಟ್ ಪೂರ್ಣಗೊಳ್ಳಲಿಲ್ಲ ಮತ್ತು ಸಾಲಗಾರನ ಪರವಾಗಿ ಯಾವುದೇ ಮಾರಾಟ ದಸ್ತಾವೇಜು ಕಾರ್ಯರೂಪಕ್ಕೆ ತರುಲು ಆಗಲಿಲ್ಲ. ಬದಲಿಗೆ ಡೆವಲಪರ್ ಮಾರ್ಚ್ 27, 2023 ರಂದು ನೋಂದಾಯಿತ ಮಾರಾಟ ದಸ್ತಾವೇಜು ಮೂಲಕ ಆ ಫ್ಲಾಟ್ ಅನ್ನು ಎಂ/ಎಸ್ ಬನಕಾ ಎಂಟರ್‌ಪ್ರೈಸಸ್ ಸಂಸ್ಥೆಗೆ ಮಾರಾಟ ಮಾಡಿದ್ದನು. ಈ ಮರುಮಾರಾಟದಲ್ಲಿ ತಾನು ಭಾಗಿಯಾಗಿಲ್ಲ ಮತ್ತು ಯಾವುದೇ ಲಾಭ ಪಡೆದಿಲ್ಲ ಎಂದು ಸಾಲಗಾರ ಸ್ಪಷ್ಟಪಡಿಸಿದ್ದರೂ, ಬ್ಯಾಂಕ್ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ಆದೇಶದಂತೆ ಶಂಕರಪುರ ಪೊಲೀಸ್ ಠಾಣೆಯಲ್ಲಿ (ಕ್ರೈಮ್ ನಂ. 55/2024) ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಇದನ್ನೂ ಓದಿ: ರೈಲ್ವೆ ಪ್ರಯಾಣಿಕರ ಗಮನಕ್ಕೆ: ರೈಲು ಸಂಖ್ಯೆ 16377, 16378, 16596, 16536 ವೇಳಾಪಟ್ಟಿಯಲ್ಲಿ ಬದಲಾವಣೆ

ಹೈಕೋರ್ಟ್‌ನ ಮಹತ್ವ ಆದೇಶ:

ಸಾಲಗಾರನ ವಿರುದ್ಧದ ಆರೋಪಗಳು ಯಾವುದೇ ಕ್ರಿಮಿನಲ್ ಕೃತ್ಯದ ಅಂಶಗಳನ್ನು ಹೊಂದಿಲ್ಲ ಎಂದು ಕೋರ್ಟ್ ಗಮನಿಸಿದೆ. ಸಾಲ ಬಾಕಿ ಇದೆ ಎಂಬ ಮಾತ್ರಕ್ಕೆ ಆತನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು ಸರಿಯಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಾಲಗಾರ (ಮೊದಲ ಆರೋಪಿ) ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ಹಾಗೂ ಎಲ್ಲಾ ಪ್ರಕ್ರಿಯೆಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅದೇ ವೇಳೆ, ಬಿಲ್ಡರ್ ಅಥವಾ ಅದರ ಪಾಲುದಾರರ ಹೊಣೆಗಾರಿಕೆಯ ಕುರಿತು ಈ ಆದೇಶವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us