AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಜೆಸ್ಟಿಕ್​ನಲ್ಲಿರುವ ಟಾಯ್ಲೆಟ್‌ನಲ್ಲಿ ಮಹಿಳೆಯ ನಂಬರ್ ಬರೆದ, ನಂತರ ಆಗಿದ್ದೇ ಬೇರೆ..!

ಹೇಳಿದಂತೆ ಕೇಳಲಿಲ್ಲ, ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ, ಬೇಡಿಕೆ ಈಡೇರಲಿಲ್ಲ ಎಂದಾಗ ಪರಿಚಯಸ್ಥರೆ ತಮ್ಮ ಗೆಳೆತಿಯರ ಮೊಬೈಲ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಉದಾಹರಣೆಗಳು ಸಾಕಷ್ಟು ನಮ್ಮ ಕಣ್ಣ ಮುಂದೆ ಇವೆ. ಹೀಗೆ ಪರಿಚಯಸ್ಥರೊಬ್ಬರ ಮಹಿಳೆಯ ಫೋನ್ ನಂಬರ್‌ನ್ನು ಬೆಂಗಳೂರಿನ ಮೆಜೆಸ್ಟಿಕ್ ಬಸ್‌ಸ್ಟಾಂಡ್ ಬಳಿ ಇರುವ ಶೌಚಾಲಯದಲ್ಲಿ ಈಕೆಯ ಫೋನ್ ನಂಬರ್ ಬರೆದು ಕಾಲ್ ಗರ್ಲ್ ಎಂದು ಉಲ್ಲೇಖಿಸಿದ್ದಾನೆ.

ಮೆಜೆಸ್ಟಿಕ್​ನಲ್ಲಿರುವ ಟಾಯ್ಲೆಟ್‌ನಲ್ಲಿ ಮಹಿಳೆಯ ನಂಬರ್ ಬರೆದ, ನಂತರ ಆಗಿದ್ದೇ ಬೇರೆ..!
ಮೆಜೆಸ್ಟಿಕ್ ಬಸ್‌ಸ್ಟಾಂಡ್
ರಮೇಶ್ ಬಿ. ಜವಳಗೇರಾ
|

Updated on: Jun 19, 2024 | 10:50 PM

Share

ಬೆಂಗಳೂರು, (ಜೂ.19): ವ್ಯಕ್ತಿಯೋರ್ವ ತನ್ನ ಮಹಿಳಾ ಸಹೋದ್ಯೋಗಿಯ ಫೋನ್ ನಂಬರ್‌ನ್ನು ಬೆಂಗಳೂರಿನ(Bengaluru) ಮೆಜೆಸ್ಟಿಕ್ ಬಸ್​ ನಿಲ್ದಾಣದಲ್ಲಿರುವ  ಶೌಚಾಲಯದಲ್ಲಿ (Majestic Bus Stand toilet) ಬರೆದಿದ್ದಾರೆ. ಅಲ್ಲದೇ ಈಕೆಯ ಫೋನ್ ನಂಬರ್ ಬರೆದು ಕಾಲ್ ಗರ್ಲ್ ಎಂದು ಉಲ್ಲೇಖಿಸಿದ್ದಾನೆ. ಹೌದು… ಸತತ ಕರೆಗಳಿಂದ ಮಹಿಳೆಗೆ ಆಘಾತವಾಗಿದ್ದು, ಕೊನೆಗೆ ಮಹಿಳೆ , ಅಲ್ಲಾಬಕ್ಷ್ ಪಾಟೀಲ್ ಎನ್ನುವವರ ದೂರು ಪೊಲೀಸ್​ ಠಾಣೆಗೆ ನೀಡಿದ್ದಾರೆ. ಇತ್ತ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗೆ ಹಿನ್ನಡೆಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್, ಆರೋಪಿ ಅರ್ಜಿಯನ್ನು ತಿರಸ್ಕರಿಸಿದೆ.

ಚಿತ್ರದುರ್ಗದ ಆರೋಗ್ಯ ಕೇಂದ್ರದಲ್ಲಿನ ಮಹಿಳಾ ಸಿಬ್ಬಂದಿ ಪ್ರತಿ ದಿನ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿದ್ದರು. ಇದರ ನಡುವೆ ಮೇಲಾಧಿಕಾರಿ ಸೂಚನೆ ಮೇರೆಗೆ ಫೋನ್ ನಂಬರ್‌ನ್ನು ಅಧಿಕಾರಿಗೆ ನೀಡಿದ್ದಳು. ಇದಾದ ಕೆಲ ದಿನಗಳಲ್ಲಿ ಮಹಿಳೆಗೆ ಸತತ ಕರೆಗಳು ಬರಲಾರಂಭಿಸಿವೆ. ಅಷ್ಟೇ ಅಲ್ಲದೇ ಫೋನ್ ಮಾಡಿದ ಹಲವರು ದಿನಕ್ಕೆಷ್ಟು? ರಾತ್ರಿಗೆಷ್ಟು ಎಂದು ಅಸಭ್ಯವಾಗಿ ಮಾತನಾಡಿದ್ದಾರೆ. ಪ್ರತಿ ದಿನ ಕರೆಗಳ ಸಂಖ್ಯೆ ಹೆಚ್ಚಾಗಿದೆ. ಹೀಗೆ ಕರೆ ಮಾಡಿದವರಲ್ಲೇ ಈ ನಂಬರ್ ಎಲ್ಲಿ ಸಿಕ್ಕಿತ್ತು ಎಂದು ಮಹಿಳೆ ಪ್ರಶ್ನಿಸಿದಾಗ ಅಲ್ಲಾಬಕ್ಷ್ ಪಾಟೀಲ್ ಕರಾಮತ್ತು ಬಯಲಾಗಿದೆ. ಮೆಜೆಸ್ಟಿಕ್ ಶೌಚಾಲಯದಲ್ಲಿ ಕಾಲ್ ಗರ್ಲ್ ನಂಬರ್ ಎಂದು ಈ ಸಂಖ್ಯೆ ಹಾಕಲಾಗಿದೆ ಎಂದು ಕರೆ ಮಾಡಿದವರು ಹೇಳಿದ್ದಾರೆ.

ಇದನ್ನೂ ಓದಿ: ಸಾರಿಗೆ ಇಲಾಖೆಯಲ್ಲಿ 24/7 ಕಾಲ್ ಸೆಂಟರ್: ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಹೊಸ ಪ್ಲಾನ್​

ಈ ಮಾಹಿತಿ ಆಧಾರದ ಮೇಲೆ ಮಹಿಳೆ ದೂರು ದಾಖಲಿಸಿದ್ದಾಳೆ. ಆರೋಪಿ ಅಲ್ಲಾಬಕ್ಷ್ ಪಾಟೀಲ್ ವಿರುದ್ಧ ಸೆಕ್ಷನ್ 501, 504, 507 ಹಾಗೂ 509ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ, ಇತ್ತ ಅಲ್ಲಾಬಕ್ಷ್ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು, ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಮನವಿ ಮಾಡಿದ್ದ. ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್, ಆರೋಪಿ ಅಲ್ಲಾಬಕ್ಷ್ ಪಾಟೀಲ್ ಅರ್ಜಿಯನ್ನು ತಿರಸ್ಕರಿಸಿದೆ.

ಇದು ಗಂಭೀರ ಪ್ರಕರಣವಾಗಿದೆ. ಮಹಿಳೆಗೆ ದೈಹಿಕ ಹಾನಿಗಿಂತ ಮಾನಸಿಕವಾಗಿ ನೀಡುವ ಹಾನಿ ಗಂಭೀರವಾಗಿದೆ. ಈ ಮಹಿಳೆಯ ಫೋಟೋ, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದು, ನಂಬರ್ ಬಹಿರಂಪಡಿಸವುದು ಆಕೆಯ ಘತನೆಗೆ ಧಕ್ಕೆಯಾಗಲಿದೆ. ಇಂತಹ ಪ್ರಕರಣಗಳು ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹೀಗಾಗಿ ಪ್ರಕರಣ ರದ್ದುಕೋರಲು ಸಾಧ್ಯವಿಲ್ಲ. ವಿಚಾರಣೆ ಎದುರಿಸಿ, ತನಿಖೆಗೆ ಸಹಕರಿಸುವಂತೆ ಆರೋಪಿ ಅಲ್ಲಾಬಕ್ಷ್ ಪಾಟೀಲ್​ಗೆ ಸೂಚಿಸಿ ಹೈಕೋರ್ಟ್ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ