Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Hijab Row: ಹಿಜಾಬ್ ಪ್ರಕರಣ ವಿಚಾರಣೆ ಮುಂದೂಡಿಕೆ; ನಾಳೆ ರಾಜ್ಯ ಸರ್ಕಾರದ ಪರ ವಾದಮಂಡನೆ

ಹಿಜಾಬ್ ಸಂಬಂಧ ಪಿಐಎಲ್ ಹಾಗೂ ರಿಟ್ ಅರ್ಜಿ ವಿಚಾರಣೆ ನಡೆಸಲಾಗಿದೆ. ಬಳಿಕ ಇಂದು ಮತ್ತೆ ವಿಚಾರಣೆಯನ್ನು ಮುಂದೂಡಿ ಆದೇಶ ನೀಡಲಾಗಿದೆ. ಹಿಜಾಬ್ ವಿವಾದದ ವಿಚಾರಣೆ ನಾಳೆ (ಫೆಬ್ರವರಿ 18) ಮಧ್ಯಾಹ್ನ 2.30ಕ್ಕೆ ನಡೆಯಲಿದೆ.

Karnataka Hijab Row: ಹಿಜಾಬ್ ಪ್ರಕರಣ ವಿಚಾರಣೆ ಮುಂದೂಡಿಕೆ; ನಾಳೆ ರಾಜ್ಯ ಸರ್ಕಾರದ ಪರ ವಾದಮಂಡನೆ
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: ganapathi bhat

Updated on:Feb 17, 2022 | 6:37 PM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದ್ದು ಕೆಲ ದಿನಗಳು ಕಳೆದಿವೆ. ಉಡುಪಿಯಲ್ಲಿ ಆರಂಭವಾದ ಸಮವಸ್ತ್ರ (Uniform) ಚರ್ಚೆ ಇಡೀ ದೇಶದಾದ್ಯಂತ ವ್ಯಾಪಿಸಿದೆ. ಹಿಜಾಬ್ ನಮ್ಮ ಹಕ್ಕು ಅಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಹಿಜಾಬ್ ಧರಿಸುವವರೆಗೂ ಕೇಸರಿ ಶಾಲು ಧರಿಸುತ್ತೇವೆ ಅಂತ ವಿದ್ಯಾರ್ಥಿಗಳು ಪಟ್ಟು ಬಿದ್ದಿದ್ದಾರೆ. ಈ ಮಧ್ಯೆ ವಿವಾದದ ಬಗ್ಗೆ ಇಂದು (ಫೆಬ್ರವರಿ 17) ಹೈಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗಿದೆ. ಹಿಜಾಬ್ ಸಂಬಂಧ ಪಿಐಎಲ್ ಹಾಗೂ ರಿಟ್ ಅರ್ಜಿ ವಿಚಾರಣೆ ನಡೆಸಲಾಗಿದೆ. ಬಳಿಕ ಇಂದು ಮತ್ತೆ ವಿಚಾರಣೆಯನ್ನು ಮುಂದೂಡಿ ಆದೇಶ ನೀಡಲಾಗಿದೆ. ಹಿಜಾಬ್ ವಿವಾದದ ವಿಚಾರಣೆ ನಾಳೆ (ಫೆಬ್ರವರಿ 18) ಮಧ್ಯಾಹ್ನ 2.30ಕ್ಕೆ ನಡೆಯಲಿದೆ.

ಇಂದು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಪರ ಜಿ.ಆರ್.ಮೋಹನ್ ವಾದ ಮಂಡಿಸಿದ್ದಾರೆ. ಸರ್ಕಾರದ ಹಿಜಾಬ್ ನಿರ್ದೇಶನ ನಮಗೆ ಅನ್ವಯವಾಗುವುದಿಲ್ಲ. ಈ ಬಗ್ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ರಾಜಿ ಸಂಧಾನಕ್ಕೆ ಪ್ರಕರಣ ಒಪ್ಪಿಸಲು ವಕೀಲೆಯೊಬ್ಬರ ಮನವಿ ಮಾಡಲಾಗಿದೆ. ಈ ಬಗ್ಗೆ ನಾನು ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ. ರಾಜಿ ಸಂಧಾನಕ್ಕೆ ಒಪ್ಪಿಸಿದರೆ ಸಮಸ್ಯೆ ಬಗೆಹರಿಯಬಹುದು ಎಂದು ಮಧ್ಯಂತರ ಅರ್ಜಿದಾರ ವಕೀಲೆಯ ವಾದ ಮಂಡಿಸಲಾಗಿದೆ. ಎರಡೂ ಕಡೆಯವರು ಒಪ್ಪಿದರೆ ಮಾತ್ರ ರಾಜಿ ಸಂಧಾನ ಸಾಧ್ಯ, ಇಲ್ಲಿ ಸಂವಿಧಾನಿಕ ಪ್ರಶ್ನೆಗಳನ್ನು ಉಲ್ಲೇಖಿಸಲಾಗಿದೆ ಎಂದು ಸಿಜೆ ಹೇಳಿದ್ದಾರೆ.

ಮಧ್ಯಂತರ ಅರ್ಜಿದಾರರ ಪರ ಸುಭಾಷ್ ಝಾ ಮನವಿ ಮಾಡಿದ್ದಾರೆ. ನನಗೆ ಅರ್ಧ ಗಂಟೆ ಸಮಯ ಕೊಡಿ, ಒಂದು ಕಡೆಯ ವಾದ ಮಾತ್ರ ಕೇಳಲಾಗಿದೆ. ನನ್ನ ವಾದವನ್ನು ಹೇಳಲು ಅವಕಾಶ ಕೊಡಿ ಎಂದು ವಕೀಲ ಸುಭಾಷ್ ಝಾ ಮನವಿ ಮಾಡಿದ್ದಾರೆ. ಮಧ್ಯಂತರ ಅರ್ಜಿದಾರರ ವಾದ ಕೇಳಬೇಕೇ ಬೇಡವೇ ನಿರ್ಧರಿಸಿಲ್ಲ. ಮೊದಲಿಗೆ ಅರ್ಜಿದಾರರು ಪ್ರತಿವಾದಿಗಳ ವಾದ ಕೇಳುತ್ತೇವೆ, ನಂತರ ಮಧ್ಯಂತರ ಅರ್ಜಿಗಳ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಸಿಜೆ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ಹಾಗೂ ಗಡ್ಡ ಬಿಡುವುದರ ಬಗ್ಗೆ ಕೋರ್ಟ್ ಗಳ ತೀರ್ಪುಗಳಿವೆ. ಇದರ ಬಗ್ಗೆ ನಾನು ಕೋರ್ಟ್ ಗಮನಕ್ಕೆ ತರಬಯಸುತ್ತೇನೆ ಎಂದು ಸುಭಾಷ್ ಝಾ ಹೇಳಿದ್ದಾರೆ.

ಕುಚ್ ಕಾಕರ್ ಕುಚ್ ಪಾನಾ ಹೈ; ಲತಾ ಮಂಗೇಶ್ಕರ್ ಹಾಡು ಉಲ್ಲೇಖಿಸಿದ ಅರ್ಜಿದಾರ

ಈಗ ಖುರಾನ್ ನನ್ನ ಬಳಿ ಇಲ್ಲ. ಹೀಗಾಗಿ ಓದಲಾಗುವುದಿಲ್ಲ. ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿರ್ಬಂಧಿಸಿದಂತೆ ಎಂದು ಕುಲಕರ್ಣಿ ಹೇಳಿದ್ದಾರೆ. ಹಿಜಾಬ್ ಮತ್ತು ಖುರಾನ್ ಎರಡು ಒಂದೇ ಎನ್ನುತ್ತೀರಾ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ನಾನು ಹಿಂದೂ ಬ್ರಾಹ್ಮಣ, ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿರ್ಬಂಧಿಸಿದಂತೆ ಎಂದು ಕುಲಕರ್ಣಿ ಹೇಳೀದ್ದಾರೆ. ಮಧ್ಯಂತರ ಆದೇಶ ನೀಡಲು ಕುಲಕರ್ಣಿ ಮನವಿ ಮಾಡಿದ್ದಾರೆ. ಶುಕ್ರವಾರದಂದು ಹಿಜಾಬ್ ಧರಿಸಲು ಅನುಮತಿ ನೀಡಿ. ಕುಚ್ ಕಾಕರ್ ಕುಚ್ ಪಾನಾ ಹೈ ಎಂದು ಅರ್ಜಿದಾರ ಮತ್ತೆ ಹಾಡು ಹೇಳಿದ್ದಾರೆ. ನಿಮ್ಮ ವಾದ ಮುಗಿದಿದ್ದರೆ ಧನ್ಯವಾದಗಳು ಎಂದು ಸಿಜೆ ತಿಳಿಸಿದ್ದಾರೆ.

ಬಳಿಕ ಹಿರಿಯ ವಕೀಲ ಎ.ಎಂ. ಧರ್ ರಿಂದ ವಾದಮಂಡನೆ ಮಾಡಲಾಗಿದೆ. ಹಿಜಾಬ್ ಇಲ್ಲದೇ ಕಾಲೇಜಿಗೆ ಹೋಗದ ಪರಿಸ್ಥಿತಿ ಇದೆ. ನೀವು ಯಾವ ಕಾಲೇಜಿನಲ್ಲಿ ಓದುತ್ತಿದ್ದೀರಾ, ಈ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದೀರಾ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ನಿಮ್ಮ ಕಾಲೇಜು ನಿಮ್ಮನ್ನು ಪ್ರತಿಬಂಧಿಸಿದೆ ಎಂದು ಹೇಳುತ್ತೀರಾ ಎಂದು ನ್ಯಾ.ಕೃಷ್ಣ ದೀಕ್ಷಿತ್ ಕೇಳಿದ್ದಾರೆ. ಹೌದು ಈ ಅಂಶವನ್ನು ನಾವು ಅರ್ಜಿಯಲ್ಲಿ ಉಲ್ಲೇಖಿಸಿದ್ದೇವೆ ಎಂದು ಎ.ಎಂ.ಧರ್ ಹೇಳಿದ್ದಾರೆ. ಪಿಯುಸಿ ಎಂದು ಉಲ್ಲೇಖಿಸಿದ್ದೇವೆ, ಕ್ಷಮಿಸಿ, ಹೆಸರನ್ನು ಸೇರಿಸಲು ಅನುಮತಿ ಕೋರುತ್ತೇನೆ. ಬೆಂಗಳೂರಿನಲ್ಲಿ ನಾವು ವಿದ್ಯಾಭ್ಯಾಸ ಮಾಡುತ್ತಿದ್ದೇವೆ ಎಂದು ಎ.ಎಂ. ಧರ್ ಹೇಳಿದ್ದು, ಇಂತಹ ಪ್ರಮುಖ ವಿಚಾರಣೆಯಲ್ಲಿ ಹೀಗೆ ಅರ್ಜಿ ಸಲ್ಲಿಸುವುದು ಸೂಕ್ತವೇ ಎಂದು ಅರ್ಜಿದಾರರಿಗೆ ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.

ನಾಳೆ ಈ ಬಗ್ಗೆ ಸೂಕ್ತ ಪ್ರಮಾಣಪತ್ರ ಸಲ್ಲಿಸುತ್ತೇವೆ, ಅವಕಾಶ ಕೊಡಿ ಎಂದು ಎ.ಎಂ.ಧರ್ ಹೇಳಿದ್ದಾರೆ. ಅರ್ಜಿ ಹಿಂಪಡೆಯಲು ಅನುಮತಿ ಕೇಳಿದ್ದಾರೆ. ನಾವು ಈಗ ಅರ್ಜಿ ವಜಾಗೊಳಿಸುತ್ತೇವೆ. ಸರಿಯಾದ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತೇವೆ ಎಂದು ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ.

ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿರ್ಬಂಧಿಸಿದಂತೆ: ಕುಲಕರ್ಣಿ ವಾದ ಮಂಡನೆ

ಈಗ ಖುರಾನ್ ನನ್ನ ಬಳಿ ಇಲ್ಲ. ಹೀಗಾಗಿ ಓದಲಾಗುವುದಿಲ್ಲ. ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿರ್ಬಂಧಿಸಿದಂತೆ ಎಂದು ಕುಲಕರ್ಣಿ ಹೇಳಿದ್ದಾರೆ. ಹಿಜಾಬ್ ಮತ್ತು ಖುರಾನ್ ಎರಡು ಒಂದೇ ಎನ್ನುತ್ತೀರಾ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ನಾನು ಹಿಂದೂ ಬ್ರಾಹ್ಮಣ, ಹಿಜಾಬ್ ನಿರ್ಬಂಧಿಸಿದರೆ ಖುರಾನ್ ನಿರ್ಬಂಧಿಸಿದಂತೆ ಎಂದು ಕುಲಕರ್ಣಿ ಹೇಳೀದ್ದಾರೆ. ಮಧ್ಯಂತರ ಆದೇಶ ನೀಡಲು ಕುಲಕರ್ಣಿ ಮನವಿ ಮಾಡಿದ್ದಾರೆ. ಶುಕ್ರವಾರದಂದು ಹಿಜಾಬ್ ಧರಿಸಲು ಅನುಮತಿ ನೀಡಿ. ಕುಚ್ ಕಾಕರ್ ಕುಚ್ ಪಾನಾ ಹೈ ಎಂದು ಅರ್ಜಿದಾರ ಮತ್ತೆ ಹಾಡು ಹೇಳಿದ್ದಾರೆ. ನಿಮ್ಮ ವಾದ ಮುಗಿದಿದ್ದರೆ ಧನ್ಯವಾದಗಳು ಎಂದು ಸಿಜೆ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಳಿಕೆ ಬರುವಂತೆ ರಸ್ತೆ ದುರಸ್ತಿ ಮಾಡಿ, ಇಲ್ಲವಾದರೆ ಮಿಲಿಟರಿಗೆ ಹೊಣೆ ನೀಡುವುದಾಗಿ ಬಿಬಿಎಂಪಿಗೆ ಎಚ್ಚರಿಕೆ ನೀಡಿದ ಹೈಕೋರ್ಟ್

ಇದನ್ನೂ ಓದಿ: ಕರ್ನಾಟಕದ ಪ್ರಕರಣಗಳ ವಿಚಾರಣೆಗೆಂದೇ ಸುಪ್ರೀಂಕೋರ್ಟ್​ನಲ್ಲಿ ಪ್ರತ್ಯೇಕ ಪೀಠ ರಚನೆ ಮಾಡಬೇಕಾಗುತ್ತದೆ: ವ್ಯಂಗ್ಯ ಮಾಡಿದ ಸಿಜೆಐ ಎನ್​.ವಿ.ರಮಣ

Published On - 4:42 pm, Thu, 17 February 22