ಬೆಂಗಳೂರು: ಡಿಸೆಂಬರ್ ತಿಂಗಳೊಳಗೆ 56 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಕರ್ನಾಟಕ ರಾಜ್ಯ ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ನವೆಂಬರ್ 26ರ ಒಳಗೆ ಮೀಸಲಾತಿ ಒದಗಿಸಲು ಹೈಕೋರ್ಟ್ ಆದೇಶ ನೀಡಿದೆ. ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಈ ಬಗ್ಗೆ ಇಂದು (ನವೆಂಬರ್ 17) ಸೂಚನೆ ಕೊಟ್ಟಿದೆ.
ಡಿಸೆಂಬರ್ 30ರ ಒಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಆದೇಶ ನೀಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಹಿನ್ನೆಲೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಜರಾಗಿದ್ದಾರೆ. ನವೆಂಬರ್ 26ರ ಒಳಗೆ ಮೀಸಲಾತಿ ಅಧಿಸೂಚನೆ ಹೊರಡಿಸುತ್ತೇವೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಹೇಳಿಕೆ ನೀಡಿದೆ.
ನವೆಂಬರ್ 26ರ ಒಳಗೆ ಮೀಸಲಾತಿ ನೀಡಿದರೆ ಶೀಘ್ರ ಚುನಾವಣೆ ನಡೆಸಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗದ ಪರ ವಕೀಲ ಕೆ.ಎನ. ಫಣೀಂದ್ರ ಹೇಳಿಕೆ ನೀಡಿದ್ದಾರೆ. ಹೇಳಿಕೆ ದಾಖಲಿಸಿಕೊಂಡು ಹೈಕೋರ್ಟ್ ನಿರ್ದೇಶನ ನೀಡಿದೆ.
ಕಲಬುರಗಿ: ಮತದಾರರ ಪಟ್ಟಿಗೆ ಎಂಎಲ್ಸಿಗಳನ್ನು ಸೇರಿಸದಂತೆ ರಿಟ್
ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಹಾಗೂ ಮತದಾರರ ಪಟ್ಟಿಗೆ 7 ಎಂಎಲ್‌ಸಿ ಸೇರ್ಪಡೆ ವಿಚಾರವಾಗಿ ಮತದಾರರ ಪಟ್ಟಿಗೆ ಎಂಎಲ್ಸಿಗಳನ್ನು ಸೇರಿಸದಂತೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ಕಲಬುರಗಿ ಹೈಕೋರ್ಟ್‌ಗೆ ಕಲಬುರಗಿ ಪಾಲಿಕೆ ಸದಸ್ಯೆ ವರ್ಷಾ ಜಾನೆರಿಂದ ರಿಟ್ ಅರ್ಜಿ ಸಲ್ಲಿಕೆ ಆಗಿದೆ. ಈ ರಿಟ್ ಅರ್ಜಿಯನ್ನು ಕಲಬುರಗಿ ಹೈಕೋರ್ಟ್ ಪುರಸ್ಕರಿಸಿದೆ. ಪರಿಷತ್ನ 7 ಸದಸ್ಯರಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ನವಂಬರ್ 29ಕ್ಕೆ ರಿಟ್ ಅರ್ಜಿ ವಿಚಾರಣೆ ಮುಂದೂಡಲಾಗಿದೆ. ನ್ಯಾಯಮೂರ್ತಿ ಎಂ.ಐ. ಅರುಣ್ ಪೀಠದಿಂದ ಮುಂದೂಡಿಕೆ ಮಾಡಲಾಗಿದೆ.
ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಕಿಂಗ್ ಮೇಕರ್ ಆಗಿದ್ದ ದಳಪತಿಗಳು ಕಂಗಾಲು; ಬಿಜೆಪಿ ಹೊಸತಂತ್ರಕ್ಕೆ ಬೆಚ್ಚಿಬಿದ್ದ ಜೆಡಿಎಸ್
ಇದನ್ನೂ ಓದಿ: ನನ್ನ ಕುಟುಂಬದಿಂದ ಪರಿಷತ್ ಚುನಾವಣೆಗೆ ಸ್ಪರ್ಧಿಸಲ್ಲ; ಜೆಡಿಎಸ್ ಆಫರ್ ನಿರಾಕರಿಸಿದ ಶಾಸಕ ಜಿಟಿ ದೇವೇಗೌಡ