ಕಲಬುರಗಿ ಪಾಲಿಕೆಯಲ್ಲಿ ಕಿಂಗ್ ಮೇಕರ್ ಆಗಿದ್ದ ದಳಪತಿಗಳು ಕಂಗಾಲು; ಬಿಜೆಪಿ ಹೊಸತಂತ್ರಕ್ಕೆ ಬೆಚ್ಚಿಬಿದ್ದ ಜೆಡಿಎಸ್

ಜೆಡಿಎಸ್ ಬೆಂಬಲ ಪೆಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸಾಕಷ್ಟು ರೀತಿಯ ಕಸರತ್ತು ನಡೆಸಿದ್ದರು. ಸ್ವತಃ ಜೆಡಿಎಸ್ ನಾಯಕರು, ತಮ್ಮ ಪಕ್ಷದ ನಾಲ್ವರು ಸದಸ್ಯರನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸೆಳೆಯುವ ಭೀತಿಯಿಂದ ಅನೇಕ ದಿನಗಳ ಕಾಲ ರೆಸಾರ್ಟ್​ನಲ್ಲಿ ಇರಿಸಿದ್ದರು.

ಕಲಬುರಗಿ ಪಾಲಿಕೆಯಲ್ಲಿ ಕಿಂಗ್ ಮೇಕರ್ ಆಗಿದ್ದ ದಳಪತಿಗಳು ಕಂಗಾಲು; ಬಿಜೆಪಿ ಹೊಸತಂತ್ರಕ್ಕೆ ಬೆಚ್ಚಿಬಿದ್ದ ಜೆಡಿಎಸ್
ಕಲಬುರಗಿ ಪಾಲಿಕೆ
Follow us
TV9 Web
| Updated By: preethi shettigar

Updated on:Nov 15, 2021 | 2:17 PM

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆ ನಡೆದು, ಮತ ಎಣಿಕೆ ನಡೆದ ಮೇಲೆ ಅತಿ ಹೆಚ್ಚು ಸಂಭ್ರಮಿಸುತ್ತಿರುವುದು ಜೆಡಿಎಸ್ ಪಕ್ಷ. 55 ವಾರ್ಡ್​ಗಳಲ್ಲಿ ಕೇವಲ ನಾಲ್ಕು ವಾರ್ಡ್​ಗಳಲ್ಲಿ ಗೆದ್ದರು ಕೂಡಾ ಜೆಡಿಎಸ್ ಸಂಭ್ರಮ ಹೆಚ್ಚಾಗಿತ್ತು. ಇದಕ್ಕೆ ಕಾರಣ ನಾಲ್ಕೇ ಸ್ಥಾನ ಗೆದ್ದರು ಕೂಡಾ ಪಾಲಿಕೆಯಲ್ಲಿ ಜೆಡಿಎಸ್(JDS) ಕಿಂಗ್ ಮೇಕರ್ ಆಗಿತ್ತು. ಆದರೆ ಇದೀಗ ಬಿಜೆಪಿಯವರು (BJP) ಕಿಂಗ್ ಮೇಕರ್ ಕನಸು ಕಾಣುತ್ತಿದ್ದ ದಳಪತಿಗಳಿಗೆ ಶಾಕ್ ನೀಡಿದ್ದಾರೆ. ಜೆಡಿಎಸ್ ಬೆಂಬಲವಿಲ್ಲದೆ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಬೇರೆ ತಂತ್ರ ರೂಪಿಸಿದ್ದು, ಜೆಡಿಎಸ್ ನಾಯಕರಿಗೆ ಆಶಾಭಂಗವಾಗಿದೆ. ಹೌದು ನವಂಬರ್ 20 ರಂದು ಕಲಬುರಗಿ ಪಾಲಿಕೆಯ ಮೇಯರ್, ಉಪ ಮೇಯರ್ ಆಯ್ಕೆಗೆ ದಿನಾಂಕ ನಿಗದಿಯಾಗಿದೆ. ದಿನಾಂಕ ನಿಗದಿಯಾದ ಬೆನ್ನಲ್ಲೆ ಕಿಂಗ್ ಮೇಕರ್​ಗಳಿಗೆ ಬಿಜೆಪಿ ನಾಯಕರು ಚೆಕ್ ಮೇಟ್ ನೀಡಿದ್ದಾರೆ.

ಕಿಂಗ್ ಮೇಕರ್ ಆಗಿದ್ದ ಜೆಡಿಎಸ್ 55 ವಾರ್ಡ್​ಳಿರುವ ಕಲಬುರಗಿ ಮಹಾನಗರ ಪಾಲಿಕೆಗೆ ಕಳೆದ ಆಗಸ್ಟ್ ಮೂವತ್ತರಂದು ಚುನಾವಣೆ ನಡೆದಿತ್ತು. ಸೆಪ್ಟಂಬರ್ ಮೂರರಂದು ಮತ ಎಣಿಕೆ ನಡೆದಿತ್ತು. 55 ವಾರ್ಡ್​ಗಳ ಪೈಕಿ, ಬಿಜೆಪಿ 23 ವಾರ್ಡ್​ಗಳಲ್ಲಿ ಗೆದ್ದರೆ, ಕಾಂಗ್ರೆಸ್ 27 ವಾರ್ಡ್​ಗಳಲ್ಲಿ ಗೆದ್ದಿತ್ತು. ಓರ್ವ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಿದ್ದರೆ, 45 ವಾರ್ಡ್​ಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ನಾಲ್ಕು ವಾರ್ಡ್​ಗಳಲ್ಲಿ ಜಯಗಳಿಸಿತ್ತು. ಕಲಬುರಗಿ ನಗರದ ಜನರು ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದೇ ಇದ್ದಿದ್ದರಿಂದ ಪಾಲಿಕೆ ಅತಂತ್ರವಾಗಿತ್ತು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇದ್ದಿದ್ದರಿಂದ ಜೆಡಿಎಸ್ ಕಿಂಗ್ ಮೇಕರ್ ಆಗಿತ್ತು.

ಕಲಬುರಗಿ ಪಾಲಿಕೆಯಲ್ಲಿ ಪಾಲಿಕೆಯ ಸದಸ್ಯರು, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರ ಮತಗಳು ಲೆಕ್ಕಕ್ಕೆ ಬರೋದರಿಂದ ಪಾಲಿಕೆಯಲ್ಲಿ ಮತದಾರರ ಸಂಖ್ಯೆ 63 ಕ್ಕೆ ಮುಟ್ಟಿತ್ತು. ಹೀಗಾಗಿ ಮ್ಯಾಜಿಕ್ ಸಂಖ್ಯೆ 32 ಇತ್ತು. ಮ್ಯಾಜಿಕ್ ಸಂಖ್ಯೆ 32 ನ್ನು ತಲುಪಲು ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಬಹುಮತ ಇರಲಿಲ್ಲ. ಬಿಜೆಪಿಗೆ ಓರ್ವ ಪಕ್ಷೇತರ ಸದಸ್ಯನ ಬೆಂಬಲ ಮತ್ತು ಆರು ಜನ ಶಾಸಕರು, ಸಂಸದ, ವಿಧಾನಪರಿಷತ್ ಸದಸ್ಯರ ಮತಗಳು ಸೇರಿದರೆ ಮೂವತ್ತು ಆಗುತ್ತಿತ್ತು. ಇತ್ತ 27 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್​ಗೆ ಓರ್ವ ಶಾಸಕಿ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರ ಮತ ಸೇರಿ 29ಕ್ಕೆ ಮುಟ್ಟಿತ್ತು. ಆದರು ಮ್ಯಾಜಿಕ್ ಸಂಖ್ಯೆ ತಲುಪಲು ಎರಡು ಪಕ್ಷಕ್ಕೆ ಆಗಿರಲಿಲ್ಲ. ಹೀಗಾಗಿ ಜೆಡಿಎಸ್ ಬೆಂಬಲ ಪೆಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸಾಕಷ್ಟು ರೀತಿಯ ಕಸರತ್ತು ನಡೆಸಿದ್ದರು. ಸ್ವತಃ ಜೆಡಿಎಸ್ ನಾಯಕರು, ತಮ್ಮ ಪಕ್ಷದ ನಾಲ್ವರು ಸದಸ್ಯರನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸೆಳೆಯುವ ಭೀತಿಯಿಂದ ಅನೇಕ ದಿನಗಳ ಕಾಲ ರೆಸಾರ್ಟ್​ನಲ್ಲಿ ಇರಿಸಿದ್ದರು.

ಇನ್ನು ಜೆಡಿಎಸ್ ಬೆಂಬಲ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ನಾನಾ ರೀತಿಯ ಕಸರತ್ತು ನಡೆಸಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಜೊತೆ ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರಾದ ಅಶೋಕ್ ಸೇರಿದಂತೆ ಅನೇಕರು ಮಾತಕತೆ ನಡೆಸಿ, ಕಲಬುರಗಿ ಪಾಲಿಕೆಯಲ್ಲಿ ಮೇಯರ್ ಚುನಾವಣೆಗೆ ತಮಗೆ ಬೆಂಬಲ ನೀಡಬೇಕು ಅಂತ ಮನವಿ ಮಾಡಿದ್ದರು. ಇತ್ತ ಕಾಂಗ್ರೆಸ್​ನಿಂದ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಮಾಜಿ ಪ್ರಧಾನಿ ದೇವೇಗೌಡರ ಜೊತೆ ಮಾತನಾಡಿ, ಜ್ಯಾತ್ಯಾತೀತ ತತ್ವದ ಹಿನ್ನೆಲೆಯಲ್ಲಿ ತಮ್ಮ ಪಕ್ಷಕ್ಕೆ ಬೆಂಬಲಿಸಬೇಕು. ಕಲಬುರಗಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡುವ ಮಾತುಗಳನ್ನು ಹೇಳಿದ್ದರು.

ಎರಡು ಪಕ್ಷದ ನಾಯಕರು ಜೆಡಿಎಸ್ ಪಕ್ಷದ ನಾಯಕರಿಗೆ ಮನವಿ ಮಾಡಿದ್ದರೂ ಕೂಡಾ ಜೆಡಿಎಸ್ ನಾಯಕರು ಮಾತ್ರ ತಮ್ಮ ಬೆಂಬಲ ಯಾರಿಗೆ ಅನ್ನೋ ಗುಟ್ಟು ಬಿಟ್ಟು ಕೊಟ್ಟಿರಲ್ಲಲ್ಲಾ. ಬದಲಾಗಿ ಜೆಡಿಎಸ್ ನಾಯಕರು, ನಾವು ಬೇರೆಯವರಿಗೆ ಬೆಂಬಲಿಸೋದಿಲ್ಲಾ. ಬದಲಾಗಿ ಮೊದಲ ಅವಧಿಗೆ ಮೇಯರ್ ತಮ್ಮ ಪಕ್ಷಕ್ಕೆ ಯಾವ ಪಕ್ಷದವರು ಬಿಟ್ಟು ಕೊಡ್ತಾರೋ ಅವರ ಜೊತೆಗೆ ಹೋಗುತ್ತೇವೆ ಅಂತ ಹೇಳಿದ್ದರು. ಆದರೆ ನಾಲ್ಕು ಸ್ಥಾನಗಳನ್ನು ಗೆದ್ದಿರೋ ಜೆಡಿಎಸ್​ಗೆ ಮೇಯರ್ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ನಿರಾಕರಿಸಿದ್ದರು.

ಕಿಂಗ್​ಗೆ ಚೆಕ್ ಮೇಟ್ ನೀಡಿದ ಬಿಜೆಪಿ ಇಲ್ಲಿವರಗೆ ಜೆಡಿಎಸ್ ನಾಯಕರು ಮತ್ತು ನಾಲ್ವರು ಪಾಲಿಕೆ ಸದಸ್ಯರು, ತಮ್ಮ ಬೆಂಬಲವಿಲ್ಲದೆ, ಪಾಲಿಕೆಯಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಾರರು ಅಂತ ಅಂದುಕೊಂಡಿದ್ದರು. ಆದರೆ ಬಿಜೆಪಿ ಇದೀಗ ಕಿಂಗ್ ಮೇಕರ್​ಗಳಿಗೆ ಚೆಕ್ ಮೇಟ್ ನೀಡಿ, ಗೆಲ್ಲವು ತಂತ್ರ ರೂಪಿಸಿದ್ದಾರೆ. ಆ ಮೂಲಕ ಸ್ವತಃ ಜೆಡಿಎಸ್‌ ಪಾಲಿಕೆಯ ಸದಸ್ಯರು ಮತ್ತು ನಾಯಕರು ಕಂಗಾಲಾಗುವಂತೆ ಮಾಡಿದೆ. ಹೌದು ಕಲಬುರಗಿ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ತನ್ನ ಭತ್ತಳಕೆಯಲ್ಲಿರುವ ವಿಧಾನಪರಿಷತ್ ಸದಸ್ಯರ ಅಸ್ತ್ರವನ್ನು ಬಳಸಲು ಮುಂದಾಗಿದೆ. ಹೌದು ಕಲಬುರಗಿ ನಗರದ ಮತದಾರರ ಪಟ್ಟಿಯಲ್ಲಿ ಏಳು ವಿಧಾನಪರಿಷತ್ ಸದಸ್ಯರ ಹೆಸರನ್ನು ಸೇರಿಸಲು ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ.

ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಣ್ ಸವದಿ, ಲೆಹರಸಿಂಗ್, ರಘುನಾಥ್ ಮಲ್ಕಾಪುರೆ, ಭಾರತಿ ಶೆಟ್ಟಿ ಸೇರಿದಂತೆ ಏಳು ಜನರು ಕಲಬುರಗಿ ನಗರದ ನಿವಾಸಿಗಳಾಗಿದ್ದಾರೆ ಅಂತ ಹೇಳಿ ಅನೇಕರ ಮನೆಯಲ್ಲಿ ರೆಂಟ್ ಅಗ್ರಿಮೆಂಟ್ ಮಾಡಿಸಿ, ಇದೀಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆನ್​ಲೈನ್​ ಅರ್ಜಿ ಹಾಕಿದ್ದಾರೆ. ಜಿಲ್ಲೆಯವರು ಅಲ್ಲದೇ ಇದ್ದರು ಕೂಡ, ಏಳು ಪರಿಷತ್ ಸದಸ್ಯರು, ಕಲಬುರಗಿ ನಗರದಲ್ಲಿಯೇ ವಾಸವಾಗಿದ್ದಾರೆ ಅಂತ ತೋರಿಸಿ, ಪಾಲಿಕೆಯ ಮೇಯರ್ ಆಯ್ಕೆ ದಿನ ಮತಹಾಕಿಸಲು ಮುಂದಾಗಿದ್ದಾರೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಬಿಜೆಪಿ ನಾಯಕರು ತೆರೆಮರೆಯಲ್ಲಿ ಮಾಡುತ್ತಿದ್ದಾರೆ.

ಜೆಡಿಎಸ್ ಗೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ತಮ್ಮ ಜೊತೆ ಮೈತ್ರಿ ಮಾಡಿಕೊಂಡರೆ, ಉಪ ಮೇಯರ್ ಮತ್ತು ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ನೀಡೋದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಜೆಡಿಎಸ್​ಗೆ ಆಪರ್ ನೀಡಿದ್ದರು. ಆದರೆ ತಮಗೆ ಮೇಯರ್ ಸ್ಥಾನ ಬಿಟ್ಟುಕೊಡಬೇಕು ಅಂತ ಜೆಡಿಎಸ್ ನಾಯಕರು ಹೇಳಿದ್ದರು. ಜೊತೆಗೆ ಯಾರ ಜೊತೆಗೆ ತಮ್ಮ ಮೈತ್ರಿ ಅನ್ನೋ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲಾ. ಒಂದು ವೇಳೆ ಮೇಯರ್ ಆಯ್ಕೆ ದಿನ, ಜೆಡಿಎಸ್ ಸದಸ್ಯರು ಬಿಜೆಪಿ ಬೆಂಬಲಿಸದೇ, ಕಾಂಗ್ರೆಸ್​ಗೆ ಜೈ ಅಂದರೆ ಅಧಿಕಾರ ಕೈ ಬಿಟ್ಟು ಹೋಗುತ್ತದೆ ಅಂತ ಮುಂದಾಲೋಚನೆ ಮಾಡಿರುವ ನಾಯಕರು, ಇದೀಗ ಜೆಡಿಎಸ್ ಸದಸ್ಯರ ಬೆಂಬಲ ಇಲ್ಲದೆನೆ ಅಧಿಕಾರ ಹಿಡಿಯಲು ತಂತ್ರ ರೂಪಿಸಿದ್ದಾರೆ. ಹೀಗಾಗಿ ಇಲ್ಲಿವರಗೆ ನಾವೇ ಕಿಂಗ್ ಮೇಕರ್ ಅಂತಿದ್ದ ದಳಪತಿಗಳಿಗೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಬಿಜೆಪಿ ಲೆಕ್ಕಾಚಾರವೇನು? ಸದ್ಯ ಪಾಲಿಕೆಯ ಸದಸ್ಯರು, ಓರ್ವ ಪಕ್ಷೇತರ ಸದಸ್ಯ, ಶಾಸಕರು, ಸಂಸದ, ವಿಧಾನಪರಿಷತ್ ಸದಸ್ಯರ ಮತಗಳು ಸೇರಿ ಬಿಜೆಪಿ ಬಳಿ ಮೂವತ್ತು ಮತಗಳಿವೆ. ಬಿಜೆಪಿಯ ಹೊಸ ಲೆಕ್ಕಾಚಾರದ ಪ್ರಕಾರ , ಏಳು ಜನ ಬಿಜೆಪಿ ಪರಿಷತ್ ಸದಸ್ಯರ ಹೆಸರು ಸೇರಿಸಿದರೆ, ಒಟ್ಟು ಮತದಾರರು 70 ಆಗಲಿದ್ದಾರೆ. ಆಗ ಮ್ಯಾಜಿಕ್ ಸಂಖ್ಯೆ 36 ಆಗುತ್ತದೆ. ಬಿಜೆಪಿ ಬಳಿ ಮೂವತ್ತೇಳು ಮತಗಳು ಇರೋದರಿಂದ ಸುಲಭವಾಗಿ ಮೇಯರ್, ಉಪ ಮೇಯರ್ ಹುದ್ದೆ ಪಡೆಯಬಹುದು. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದರು ಕೂಡಾ ಬಹುಮತ ಪಡೆಯಲಾರರು. ಜೊತೆಗೆ ಜೆಡಿಎಸ್​ಗೆ ಉಪ ಮೇಯರ್, ಎರಡು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕೂಡ ಬಿಟ್ಟು ಕೊಡುವ ಪ್ರಮೇಯ ಬರುವುದಿಲ್ಲ. ಹೀಗಾಗಿ ಇದೇ ಸುಲಭ ಉಪಾಯ ಎಂದು ಏಳು ವಿಧಾನ ಪರಿಷತ್ ಸದಸ್ಯರ ಹೆಸರನ್ನು ಕಲಬುರಗಿ ನಗರದ ಮತದಾರರ ಪಟ್ಟಿಯಲ್ಲಿ ಸೇರಿಸಲು ಮುಂದಾಗಿದ್ದಾರೆ.

ಕಲಬುರಗಿ ಪಾಲಿಕೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಜೆಡಿಎಸ್ ಗೆದ್ದಿತ್ತು. ಕಲಬುರಗಿ ನಗರದ ಅಭಿವೃದ್ದಿ ದೃಷ್ಟಿಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪೈಕಿ ಒಂದು ಪಕ್ಷಕ್ಕೆ ಬೆಂಬಲ ನೀಡುವ ಚಿಂತೆನೆ ನಡೆದಿತ್ತು. ಆದರೆ ಇದೀಗ ಬಿಜೆಪಿಯವರು ವಾಮಮಾರ್ಗದ ಮೂಲಕ ನಗರದಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಇದು ಸರಿಯಾದ ಮಾರ್ಗವಲ್ಲ. ಈ ಬಗ್ಗೆ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸಬೇಕು. ಏಳು ಜನ ಪರಿಷತ್ ಸದಸ್ಯರಿಗೆ ಪಾಲಿಕೆಯ ಚುನಾವಣೆಯಲ್ಲಿ ಮತ ಹಾಕಲು ಅವಕಾಶ ನೀಡಬಾರದು. ಅವರು ಕಲಬುರಗಿ ಜಿಲ್ಲೆಯವರು ಅಲ್ಲ ಎಂದು ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಹೇಳಿದ್ದಾರೆ.

ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಯಾವುದೇ ಅಕ್ರಮ ಮಾಡಿ ಅಲ್ಲ. ಸಕ್ರಮವಾಗಿಯೇ ಅಧಿಕಾರ ಹಿಡಿಯುತ್ತೇವೆ ಎಂದು ಕಲಬುರಗಿ ನಗರ ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್ ತಿಳಿಸಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೂತನ ಸದಸ್ಯರು ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡ್ತಾರಾ, ಇಲ್ವಾ!?

ಮೈಸೂರು ಪಾಲಿಕೆ ಮೇಯರ್ ಫೈಟ್ ಮೆಗಾ ಟ್ವಿಸ್ಟ್; ಜೆಡಿಎಸ್ ಅಭ್ಯರ್ಥಿಗೆ ಮೇಯರ್ ಗಿರಿ ದಯಪಾಲಿಸಿದ ಕಾಂಗ್ರೆಸ್!

Published On - 2:01 pm, Mon, 15 November 21

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ