ಬಿಜೆಪಿ ಶಾಸಕ ಉದಯ್ ಗರುಡಾಚಾರ್ಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್, ಏನಿದು ಕೇಸ್?
ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್ಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅಲ್ಲದೇ ದಂಡದ ಹಣವನ್ನು ಶಾಸಕರಿಗೆ ಹಿಂದಿರುಗಿಸುವಂತೆ ಹೈಕೋರ್ಟ್ ಆದೇಶದಲ್ಲಿ ಸೂಚಿಸಿದೆ.
ಬೆಂಗಳೂರು, (ಏಪ್ರಿಲ್ 24): ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ವಿರುದ್ಧದ ಪ್ರಕರಣವನ್ನು (BJP MLA uday garudachar) ಕರ್ನಾಟಕ ಹೈಕೋರ್ಟ್(Karnataka High Court) ರದ್ದುಗೊಳಿಸಿದೆ. ಪ್ರಕರಣ ರದ್ದುಪಡಿಸಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ರಿದ್ದ ಹೈಕೋರ್ಟ್ ಪೀಠ ಇಂದು (ಏಪ್ರಿಲ್ 24) ಆದೇಶ ಹೊರಡಿಸಿದೆ. ಅಲ್ಲದೇ ದಂಡದ ಹಣವನ್ನು ಶಾಸಕರಿಗೆ ಹಿಂದಿರುಗಿಸಲು ಆದೇಶದಲ್ಲಿ ಸೂಚಿಸಿದೆ. ಇದರಿಂದ ಶಾಸಕ ಉದಯ್ ಗರುಡಾಚಾರ್ಗೆ ಬಿಗ್ ರಿಲಿಫ್ ಸಿಕ್ಕಂತಾಗಿದೆ.
2018 ರಲ್ಲಿ ಚಿಕ್ಕಪೇಟೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಪ್ರಮಾಣಪತ್ರದಲ್ಲಿ ಕ್ರಿಮಿನಲ್ ಕೇಸ್ ಗಳ ಮಾಹಿತಿ ನೀಡಿರಲಿಲ್ಲ ಎಂದು ಪ್ರಕಾಶ್ ಎಂ ಶೆಟ್ಟಿ ಎಂಬುವರು ಉದಯ್ ಗರುಡಾಚಾರ್ ವಿರುದ್ಧ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರ್‌ಒಸಿಯಿಂದ ಉದಯ್ ಗರುಡಾಚಾರ್ ಹಾಗೂ ಪತ್ನಿ ಅನರ್ಹಗೊಂಡಿದ್ದರು. ಈ ಮಾಹಿತಿಯನ್ನು ಪ್ರಮಾಣಪತ್ರದಿಂದ ಮುಚ್ಚಿಟ್ಟಿದ್ದರು. ಮೆವರಿಕ್ ಹೋಲ್ಡಿಂಗ್ಸ್ ನಲ್ಲಿ ಎಂಡಿ ಆಗಿದ್ದರೂ ಹೂಡಿಕೆದಾರ ಎಂದು ನಮೂದು. ಪತ್ನಿ ನಿರ್ದೇಶಕರಾಗಿರುವುದನ್ನು ನಮೂದಿಸಿಲ್ಲ. ಪತ್ನಿಯ ಬ್ಯಾಂಕ್ ವಿವರ ನೀಡದೇ ಮುಚ್ಚಿಟ್ಟ ಆರೋಪ. ಈ ಎಲ್ಲದರ ಬಗ್ಗೆ ಹೆಚ್.ಜಿ.ಪ್ರಶಾಂತ್ ಅವರು ದೂರು ದಾಖಲಿಸಿದ್ದರು.
ಇದನ್ನೂ ಓದಿ: ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ಆರೋಪ: ಶಾಸಕ ಉದಯ್ ಗರುಡಾಚಾರ್ಗೆ ಜಾಮೀನು
ಈ ಎಲ್ಲಾ ಆರೋಪಗಳು ಸಾಬೀತಾಗಿರುವುದರಿಂದ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಉದಯ್ ಗರುಡಾಚಾರ್ ಗೆ 2 ತಿಂಗಳು ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು. ಬಳಿಕ ಜಾಮೀನು ಸಹ ನೀಡಿತ್ತು. ಬಳಿಕ ಉದಯ್ ಗರುಡಾಚಾರ್ ಅವರು ತಮ್ಮ ವಿರುದ್ಧ ಈ ಪ್ರಕರಣವನ್ನು ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಉದಯ್ ಗರುಡಾಚಾರ್ ವಿರುದ್ಧ ಪ್ರಕರಣವನ್ನು ರದ್ದುಗೊಳಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ