ಮುಜರಾಯಿ ದೇಗುಲಗಳಿಗೂ ಬಂತು ಸೆಲ್ಫ್ ಕಿಯೋಸ್ಕ್ ಮಷಿನ್: ರಶೀದಿ ಪಡೆಯಲು ಇನ್ನು ಕ್ಯೂ ನಿಲ್ಲಬೇಕಿಲ್ಲ

ರಾಜ್ಯದ ದೇಗುಲವೊಂದರಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ತಂತ್ರಜ್ಞಾನ ಅಳವಡಿಸಲಾಗಿದೆ. ಇದು ಯಶಸ್ವಿಯಾದರೆ ರಾಜ್ಯದ ಇತರ ದೇಗುಲಗಳಿಗೂ ಈ ವ್ಯವಸ್ಥೆ ವಿಸ್ತರಣೆಯಾಗಲಿದೆ. ಹಾಗಾದರೆ ಭಕ್ತರಿಗೆ ನೆರವಾಗುವ ಈ ವಿನೂತನ ವ್ಯವಸ್ಥೆ ಏನು? ಸೆಲ್ಫ್ ಕಿಯೋಸ್ಕ್ ಮಷಿನ್ ಭಕ್ತರಿಗೆ ಹೇಗೆ ನೆರವಾಗುತ್ತದೆ? ಸರದಿ ನಿಲ್ಲುವ ಸಂಕಷ್ಟ ತಪ್ಪೋದು ಹೇಗೆ? ಎಲ್ಲ ವಿವರಗಳಿಗೆ ಮುಂದೆ ಓದಿ.

ಮುಜರಾಯಿ ದೇಗುಲಗಳಿಗೂ ಬಂತು ಸೆಲ್ಫ್ ಕಿಯೋಸ್ಕ್ ಮಷಿನ್: ರಶೀದಿ ಪಡೆಯಲು ಇನ್ನು ಕ್ಯೂ ನಿಲ್ಲಬೇಕಿಲ್ಲ
ಮುಜರಾಯಿ ದೇಗುಲಗಳಿಗೂ ಬಂತು ಸೆಲ್ಫ್ ಕಿಯೋಸ್ಕ್ ಮಷಿನ್: ರಶೀದಿ ಪಡೆಯಲು ಇನ್ನು ಕ್ಯೂ ನಿಲ್ಲಬೇಕಿಲ್ಲ
Follow us
Vinay Kashappanavar
| Updated By: Ganapathi Sharma

Updated on: May 23, 2024 | 7:51 AM

ಬೆಂಗಳೂರು, ಮೇ 23: ಇತ್ತೀಚೆಗಷ್ಟೇ ಮುಜರಾಯಿ ಇಲಾಖೆ (Department of Hindu Religious and Charitable Endowments) ವ್ಯಾಪ್ತಿಗೆ ಒಳಪಡುವ ದೇಗಲಗಳಲ್ಲಿ (Temples) ಆನ್‌ಲೈನ್ ಸೇವೆ (Online Services) ಆರಂಭ ಮಾಡಲಾಗಿತ್ತು. ಇದರ ಮುಂದುವರಿದ ಯೋಜನೆಯಂತೆ ಈಗ ದೇಗುಲಗಳಲ್ಲಿ ಅರ್ಚನೆಗೆ ಭಕ್ತರು ಸರದಿ ಸಾಲಿನಲ್ಲಿ ನಿಂತು ರಶೀದಿ / ಟೋಕನ್ ಪಡೆಯುವ ಸಮಯವನ್ನು ಕಡಿಮೆ ಮಾಡಲು ಹೊಸ ಯೋಜನೆ ರೂಪಿಸಲಾಗಿದೆ. ಇನ್ಮುಂದೆ ಭಕ್ತರು ಅಭಿಷೇಕ, ಅರ್ಚನೆಗೆ ಕ್ಯೂ ನಿಲ್ಲೋದೇ ಬೇಡ. ನೇರವಾಗಿ ಭಕ್ತರೇ ರಶೀದಿ / ಟೋಕನ್ ಪಡೆಯಬಹುದು. ದೇಗುಲಗಳಲ್ಲಿಯೂ ಹೊಸ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ.‌ ಆನ್‌ಲೈನ್ ಸೇವೆ ಯಶಸ್ವಿಯಾದ ಬೆನ್ನಲ್ಲೇ ಬೆಂಗಳೂರಿನ ಶ್ರೀಮಂತ ದೇಗುಲದಲ್ಲಿ ಅರ್ಚನೆ, ಅಭಿಷೇಕ, ಹಾಗೂ ಇತರೆ ಸೇವೆಗಳಿಗೆ ಭಕ್ತರೇ ಸ್ವಯಂ ರಶೀದಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇಂತಹದೊಂದು ಪ್ರಾಯೋಗಿಕ ಯೋಜನೆ ಆರಂಭಿಸಲಾಗಿದೆ.

ನಗರದ ಬನಶಂಕರಿ ದೇಗುಲಕ್ಕೆ ದಿನನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಬಂದವರು ಸಾಮಾನ್ಯವಾಗಿ ಅರ್ಚನೆಯಂತೂ ಮಾಡಿಸುತ್ತಾರೆ.‌ ಇದಕ್ಕಾಗಿ ದೇಗುಲದ ಆವರಣದಲ್ಲಿ ಅರ್ಚನೆ, ಅಭಿಷೇಕ ಅಥವಾ ಬೇರೆ ಸೇವೆಗಳಿಗೆ ಭಕ್ತರು ಸರದಿ ಸಾಲಿನಲ್ಲಿ ನಿಂತು ಟೋಕನ್ ಪಡೆಯುವ ಪರಿಸ್ಥಿತಿ ಇತ್ತು. ಗಂಟೆಗಟ್ಟಲೆ ಕೇವಲ ಟೋಕನ್ ಪಡೆyಲು ಕಾಯಬೇಕಿತ್ತು. ಇದನ್ನು ತಪ್ಪಿಸುವ ಸಲುವಾಗಿ, ದೇಗುಲದಲ್ಲಿ ಸೆಲ್ಫ್ ಕಿಯೋಸ್ಕ್ ಮಷಿನ್ ಅಳವಡಿಸಲಾಗಿದೆ.‌

ಏನಿದು ಸೆಲ್ಫ್ ಕಿಯೋಸ್ಕ್ ಮಷಿನ್? ಭಕ್ತರಿಗೆ ಹೇಗೆ ನೆರವಾಗುತ್ತದೆ?

ದೇಗುಲದಲ್ಲಿ ಅಳವಡಿಸಿರುವ ಸೆಲ್ಫ್ ಕಿಯೋಸ್ಕ್ ಮಷಿನ್ ಹೋಟೆಲ್‌ಗಳಲ್ಲಿ ಊಟ ತಿಂಡಿಗೆ ಆಯ್ದುಕೊಂಡು ಹಣ ಪಾವತಿಸಿ ಟೋಕನ್ ಪಡೆಯುವ ಮಷಿನ್ ರೀತಿಯೇ ಇದೆ. ಈ ಮಿಷನ್‌ ಮೇಲಿನ ಡಿಸ್‌ಪ್ಲೇಯಲ್ಲಿ ದೇಗುಲಕ್ಕೆ ಸಂಬಂಧಪಟ್ಟ ಅರ್ಚನೆ, ಅಭಿಷೇಕ, ಅನ್ನದಾನ ಸೇವೆ, ಹಾಗೂ ಎಲ್ಲಾ ಬಗೆಯ ಸೇವೆಗಳ ಆಯ್ಕೆಗಳನ್ನು ನೀಡಲಾಗಿರುತ್ತದೆ. ಇದರಲ್ಲಿ ಯಾವ ಸೇವೆಯ ಟೋಕನ್ ಬೇಕೋ ಅದನ್ನು ಆಯ್ಕೆ ಮಾಡಿ, ಹಣವನ್ನನ್ನು ಫೋನ್ ಪೇ ಅಥವಾ ಯುಪಿಐ ಪಾವತಿ ಮಾಡಿದರೆ ಸಾಕು, ಟೋಕನ್ ಬರುತ್ತದೆ.

ದೇಗುಲಗಳಲ್ಲಿ ಇದೇ ಮೊದಲು

ಇದೇ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆ ದೇಗುಲಗಳಲ್ಲಿ ಅಳವಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಎರಡು ಮಷಿನ್​ಗಳನ್ನು ಅಳವಡಿಸಲಾಗ್ತಿದೆ. ಇದರಿಂದ ಬೇಗ ಟೋಕನ್ ಪಡೆಯುಬೇಕಾದವರು ಬಂದು ನೇರವಾಗಿ ಚೀಟಿ ಪಡೆಯಬಹುದು. ಈಗಾಗಲೇ ದೇಗುದಲ್ಲಿ ಮಷಿನ್ ಅಳವಡಿಸಿ, ಸಾಫ್ಟ್‌ವೇರ್ ಕೂಡಾ ಅಪ್‌ಡೇಟ್ ಮಾಡಲಾಗಿದೆ.‌ ಶುಕ್ರವಾರದಿಂದ ಇದನ್ನು ಭಕ್ತರ ಸೇವೆಗೆ ನೀಡಲು ಸಿದ್ಧತೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಪ್ರವಾಸಕ್ಕೆ ತಂದ ಬಸ್ ಸೀಜ್, ಗದಗದಲ್ಲಿ ಆಂಧ್ರ ಪ್ರವಾಸಿಗರ ಪರದಾಟ: ನಿನ್ನೆಯಿಂದಲೇ ಆರ್​​ಟಿಓ ಕಚೇರಿಯಲ್ಲಿ ಠಿಕಾಣಿ

ಮೊದಲ ಹಂತದಲ್ಲಿ ಒಂದು ದೇಗುಲದಲ್ಲಿ‌ ಸೆಲ್ಫ್ ಕಿಯೋಸ್ಕ್ ಮಷಿನ್ ಪರಿಷಚಯ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಮಜರಾಯಿ ವ್ಯಾಪ್ತಿಯ ಇತರ ದೇಗುಲಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ