ಪ್ರವಾಸಕ್ಕೆ ತಂದ ಬಸ್ ಸೀಜ್, ಗದಗದಲ್ಲಿ ಆಂಧ್ರ ಪ್ರವಾಸಿಗರ ಪರದಾಟ: ನಿನ್ನೆಯಿಂದಲೇ ಆರ್​​ಟಿಓ ಕಚೇರಿಯಲ್ಲಿ ಠಿಕಾಣಿ

ಬಸ್ ಡಾಕ್ಯುಮೆಂಟ್ಸ್ ಸರಿಯಾಗಿಲ್ಲದ ಕಾರಣ ಮಕ್ಕಳು, ಮಹಿಳೆಯರು ಸೇರಿದಂತೆ 49 ಆಂಧ್ರಪ್ರದೇಶ ಪ್ರವಾಸಿಗರು ಪರದಾಡಿರುವಂತಹ ಘಟನೆ ಗದಗನಲ್ಲಿ ಕಂಡುಬಂದಿದೆ. ಹೈದರಾಬಾದ್​​ನಿಂದ ರಾಯಚೂರು ಮಾರ್ಗವಾಗಿ ಗದಗ ನಗರಕ್ಕೆ ಎಂಟ್ರಿಯಾಗಿದ್ದ ಬಸ್​ ಅನ್ನು ಹೆದ್ದಾರಿಯಲ್ಲೇ ಗದಗ ಆರ್​ಟಿಒ ಅಧಿಕಾರಿಗಳು ಸೀಜ್ ಮಾಡಿದ್ದರು. ಹೀಗಾಗಿ ಆರ್​ಟಿಓ ಕಚೇರಿಯಲ್ಲಿ ಆಂಧ್ರ ಪ್ರವಾಸಿಗರು ವಾಸ್ತವ್ಯ ಹೂಡಿದ್ದಾರೆ.

ಪ್ರವಾಸಕ್ಕೆ ತಂದ ಬಸ್ ಸೀಜ್, ಗದಗದಲ್ಲಿ ಆಂಧ್ರ ಪ್ರವಾಸಿಗರ ಪರದಾಟ: ನಿನ್ನೆಯಿಂದಲೇ ಆರ್​​ಟಿಓ ಕಚೇರಿಯಲ್ಲಿ ಠಿಕಾಣಿ
ಪ್ರವಾಸಕ್ಕೆ ತಂದ ಬಸ್ ಸೀಜ್, ಗದಗನಲ್ಲಿ ಆಂಧ್ರ ಪ್ರವಾಸಿಗರ ಪರದಾಟ: ನಿನ್ನೆಯಿಂದಲೇ ಆರ್​​ಟಿಓ ಕಚೇರಿಯಲ್ಲಿ ಠಿಕಾಣಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Digi Tech Desk

Updated on:May 22, 2024 | 5:12 PM

ಗದಗ, ಮೇ 22: ಅವರೆಲ್ಲರೂ ಬೇಸಿಗೆ ರಜೆಯಲ್ಲಿ ಮಜಾ ಮಾಡಲು ಪ್ರವಾಸ ಕೈಗೊಂಡಿದ್ದರು. ಅಂತರರಾಜ್ಯ ಪ್ರವಾಸ ಮಾಡುವ ವೇಳೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಬಾಡಿಗೆ ಪಡೆದಿದ್ದ ಬಸ್ (bus) ಡಾಕ್ಯುಮೆಂಟ್ಸ್​​ ನಕಲಿರುವುದರಿಂದ ಆಂಧ್ರ (Andhra) ಪ್ರದೇಶದ ಪ್ರವಾಸಿಗರು ರಾಜ್ಯದಲ್ಲಿ ವಿಲವಿಲ ಅಂತಿದ್ದಾರೆ.‌ ಆಂಧ್ರ ಸಿಎಂ ಜಗನ್ ಕ್ಷೇತ್ರದ ಜನರು ಇಡೀ ರಾತ್ರಿ ಆರ್​​ಟಿಓ ಕಚೇರಿಯಲ್ಲಿ ಕಾಲ ಕಳೆದಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ 49 ಪ್ರವಾಸಿಗರು ಗೋಳಾಡಿರುವಂತಹ ಘಟನೆ ನಡೆದಿದೆ.

ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂದುಲಾ ಮೂಲದ 49 ಜನರು ಆಂಧ್ರ, ಕರ್ನಾಟಕ, ಗೋವಾ ಪ್ರವಾಸ ಕೈಕೊಂಡಿದ್ದರು. ಸ್ಥಳೀಯವಾಗಿ ವೆಂಕಟಲಕ್ಷ್ಮೀನಾಯಾರಣ ಅನ್ನೋರ ಬಳಿ ಇದ್ದ AP03 TE8520 ನಂಬರಿನ ಬಸ್ ಬುಕ್ ಮಾಡಲಾಗಿತ್ತು. ಒಟ್ಟು 1 ಲಕ್ಷ 70 ಸಾವಿರ ರೂಪಾಯಿಗೆ ಪ್ರವಾಸ ಮಾಡಿಸೋದಾಗಿ ಬಸ್ ಮಾಲೀಕ ಒಪ್ಪಿಕೊಂಡಿದ್ದರು. ಮುಂಗಡವಾಗಿ 70 ಸಾವಿರ ರೂ. ಪಡೆದು ಹೈದ್ರಾಬಾದ್ ಪ್ರವಾಸ ಮಾಡಿಸಿ ಕರ್ನಾಟಕ ಮಾರ್ಗವಾಗಿ ಗೋವಾಕ್ಕೆ ಹೊರಟಿದ್ದರು.

ಆರ್​ಟಿಓ ಕಚೇರಿಯಲ್ಲಿ ವಾಸ್ತವ್ಯ ಹೂಡಿದ 49 ಪ್ರವಾಸಿಗರು

ಗದಗ ನಗರ ಎಂಟ್ರಿಯಾಗ್ತಿದ್ದಂತೆ ಆರ್​ಟಿಒ ಅಧಿಕಾರಿಗಳ ಕಣ್ಣಿಗೆ ಆಂಧ್ರ ಪಾಸಿಂಗ್ ಬಸ್ ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ಮಾಡಿದಾಗ ಚೆಸ್ಸಿ ನಂಬರ್ ಟ್ಯಾಂಪರ್ ಮಾಡಿರೋದು ಗೊತ್ತಾಗಿದೆ. ಸೀದಾ ಕಚೇರಿಗೆ ಬಸ್ ಕರೆಸಿ, ಇಂಜಿನ್ ನಂಬರ್ ಪರಿಶೀಲಿಸಲಾಗಿದೆ. ಇಂಜಿನ್ ನಂಬರ್ ಕೂಡ ತಿರುಚಿರೋದು ಬೆಳಕಿಗೆ ಬಂದಿದೆ. ಹೀಗಾಗಿ ಅನುಮಾನಗೊಂಡು ಬಸ್ ಸೀಜ್ ಮಾಡಲಾಗಿದೆ.‌ ಹೀಗಾಗಿ ಮಕ್ಕಳು ‌ಮಹಿಳೆಯರು ಸೇರಿದಂತೆ 49 ಪ್ರವಾಸಿಗರು ರಾತ್ರಿಯಿಂದ ಆರ್​ಟಿಓ ಕಚೇರಿಯಲ್ಲಿ ವಾಸ್ತವ್ಯ ಹೊಡೆದಿದ್ದಾರೆ. ಬಸ್​ನ ಅಸಲಿಯತ್ತು ಗೋತ್ತಾಗುತ್ತಿದ್ದಂತೆ ಪ್ರವಾಸಿಗಳು ಚಾಲಕ, ಬಸ್ ಮಾಲೀಕರ ವಿರುದ್ಧ ಕಿಡಿಕಾರಿದ್ದಾರೆ. ಬಸ್ ಚಾಲಕ ಕೂಡ ಇಂಜೀನ್ ಬೇರೆ, ಬಸ್ ಬೇರೆ ಅನ್ನೋದು ಒಪ್ಪಿಕೊಂಡು ತಗ್ಲಾಕಿಕೊಂಡಿದ್ದಾನೆ.

ಇದನ್ನೂ ಓದಿ: ಸರ್ಕಾರದಲ್ಲಿ ಹಣವಿಲ್ಲ ಅಂತಾ ಕೆಲಸ ನೀಡದ ಪಿಡಿಓ: ಬೆಳ್ಳಂಬೆಳಗ್ಗೆ ರೊಚ್ಚಿಗೆದ್ದ ಜನ್ರಿಂದ ಪ್ರತಿಭಟನೆ, ಆಕ್ರೋಶ

ಹೈದರಾಬಾದ್​ನಿಂದ ರಾಜ್ಯಕ್ಕೆ ಎಂಟ್ರಿ ನೀಡಿ, ಗದಗ ಜಿಲ್ಲೆಯ ಮಾರ್ಗವಾಗಿ ಗೋವಾಕ್ಕೆ ಹೋಗ್ತಾಯಿದ್ರು. ಆದ್ರೆ ಗೋವಾ ಬೀಚ್ ನಲ್ಲಿ ಎಂಜಾಯ್ ಮಾಡ್ಬೇಕಾದ ಪ್ರವಾಸಿಗರು ಗದಗ‌ನಲ್ಲಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು, ಮಹಿಳೆಯರು ಸೇರಿದಂತೆ 49 ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರು, ಶೌಚಾಲಯ ವ್ಯವಸ್ಥೆ ಇಲ್ಲದೆ ರಾತ್ರಿಯಿಡೀ ಆರ್​ಟಿಓ ಕಚೇರಿ ಮುಂಭಾಗದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲೇ ಅಡುಗೆ ಮಾಡಿ ಊಟ ಮಾಡಿದ್ದಾರೆ.

ಆರ್​ಟಿಒ ಲಕ್ಷ್ಮೀಕಾಂತ ಹೇಳಿದ್ದಿಷ್ಟು 

ಇನ್ನೂ ಕರ್ನಾಟಕ ಮೋಟಾರ್ ವೈಹಿಕಲ್ ಟ್ಯಾಕ್ಸೇಷನ್ ಆ್ಯಕ್ಟ್ ಅಡಿ ಬಸ್ ಸೀಜ್ ಮಾಡಲಾಗಿದೆ. ಬಸ್ ಸೇಫ್ಟಿ ಹಿನ್ನೆಲೆ ಸಂಚಾರ ಮಾಡಲು ಯೋಗ್ಯವಾಗಿಲ್ಲ. ಒಂದ್ವೇಳೆ ಬಸ್ ಆ್ಯಕ್ಸಿಡೆಂಟ್ ಆದಲ್ಲಿ ಬಸ್ ಪತ್ತೆಗೆ ಕಷ್ಟವಾಗಲಿದೆ. ಅಲ್ದೆ, ಚಸ್ಸಿ ನಂಬರ್ ಬದಲು ಮಾಡಿರೋದ್ರಿಂದ ಒಂದೇ ನಂಬರಿನ ಎರಡು ಬಸ್ ಓಡಾಡ್ತಿರೋ ಸಾಧ್ಯತೆಗಳಿವೆ. ಹೀಗಾಗಿ ಪರಿಶೀಲನೆ ಮಾಡಿ, ಕರ್ನಾಟಕ ಮೋಟಾರ್ ವೈಹಿಕಲ್ ಟ್ಯಾಕ್ಸೇಷನ್ ಆ್ಯಕ್ಟ್ ಅಡಿ ಬಸ್ ಸೀಜ್ ಮಾಡಲಾಗಿದೆ ಎಂದು ಆರ್​ಟಿಒ ಲಕ್ಷ್ಮೀಕಾಂತ ಹೇಳಿದ್ದಾರೆ.

ಇನ್ನೂ ಭಾಷೆ ಬಾರದೇ ವೇದನೆ ಹೇಳಿಕೊಳ್ಳಲಾಗದೇ ಮೂಕ ಪರದಾಟ ನಡೆಸಿರೋ ಪ್ರಯಾಣಿಕರಿಗೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಡೋದಕ್ಕೂ ಮುಂದಾಗಿದ್ದಾರೆ. ಆದರೆ ಈಗಾಗ್ಲೆ ಹಣ ಪಾವತಿಸಿರೋ ಪ್ರಯಾಣಿಕರು ಮತ್ತೆ ಹಣ ಕೊಟ್ಟು ಮರಳಿ ಹೋಗೋದಕ್ಕೆ ಒಪ್ಪಿಲ್ಲ. ಇದೇ ವಿಚಾರವಾಗಿ ಬಸ್ ಡ್ರೈವರ್ ಹಾಗೂ ಪ್ರಯಾಣಿಕರ ಮಧ್ಯೆ ಜಟಾಪಟಿ ನಡೆದಿದೆ.

ಇದನ್ನೂ ಓದಿ: ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ, ಯಾವ ಸಮಸ್ಯೆ ಇಲ್ಲವೆನ್ನುತ್ತಿರು ಜಿಮ್ಸ್: ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು

ಈ ಮಧ್ಯ ಮಹಿಳೆಯರು, ಮಕ್ಕಳು ಆರ್​ಟಿಒ ಕಚೇರಿ ಅಂಗಳದಲ್ಲೇ ಅಡುಗೆ ಮಾಡಿ ಊಟ ಮಾಡಿಕೊಳ್ತಿದ್ದಾರೆ. ಬಸ್ ಡಾಕ್ಯುಮೆಂಟ್ ಪರಿಶೀಲನೆ ಮಾಡದೇ ಬಂದ ತಪ್ಪಿಗೆ ಕಚೇರಿಯಲ್ಲೇ ಪರದಾಡುವಂತಾಗಿದೆ. ಇನಾದ್ರು ಪ್ರವಾಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:36 pm, Wed, 22 May 24

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ