ಮಳೆ ಬಂದ್ರೆ ಬೆಂಗಳೂರಿನಲ್ಲಾಗುವ ಅವಾಂತರಗಳ ಬಗ್ಗೆ ಸಿಎಂ, ಡಿಸಿಎಂ ಹೇಳಿದ್ದಿಷ್ಟು

ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ತಂಪೆರೆಯುವ ಜೊತೆಗೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಹೀಗಾಗಿ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನಗರದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್​ ಸೂಚನೆ ನೀಡಿದ್ದಾರೆ. ಜೊತೆಗೆ ಸಾರ್ವಜನಿಕರ ಸಮಸ್ಯೆ, ಅಹವಾಲುಗಳನ್ನು ಸ್ವೀಕರಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಾಹಿತಿ ಇಲ್ಲಿದೆ.

ಮಳೆ ಬಂದ್ರೆ ಬೆಂಗಳೂರಿನಲ್ಲಾಗುವ ಅವಾಂತರಗಳ ಬಗ್ಗೆ ಸಿಎಂ, ಡಿಸಿಎಂ ಹೇಳಿದ್ದಿಷ್ಟು
ಮಳೆ ಬಂದ್ರೆ ಬೆಂಗಳೂರಿನಲ್ಲಾಗುವ ಅವಾಂತರಗಳ ಬಗ್ಗೆ ಸಿಎಂ, ಡಿಸಿಎಂ ಹೇಳಿದ್ದಿಷ್ಟು
Follow us
Anil Kalkere
| Updated By: ಗಂಗಾಧರ​ ಬ. ಸಾಬೋಜಿ

Updated on: May 22, 2024 | 5:23 PM

ಬೆಂಗಳೂರು, ಮೇ 22: ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಹಲವು ಏರಿಯಾಗಳಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದವು. ಹೀಗಾಗಿ ಇಂದು ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ನಗರದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ, ಡಿಸಿಎಂ ಜಂಟಿ ಸುದ್ದಿಗೋಷ್ಠಿ ಮಾಡಿದ್ದು, ಬೆಂಗಳೂರಿನ ಹಲವೆಡೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಪೂರ್ವ ಮುಂಗಾರು ಆರಂಭವಾಗಿದೆ, ವಾಡಿಕೆಗಿಂತ ಮಳೆ ಹೆಚ್ಚಾಗಿದೆ. ಮುಂಗಾರು ಆರಂಭಕ್ಕೂ ಮುನ್ನ ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ಮಾಡಿದ್ದೇವೆ. ಕೆಲವು ಕಡೆ ಪ್ರವಾಹ ಬಂದಿದೆ ಎಂದು ವರದಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಸರ್ಕಾರ 195 ಕಿ.ಮೀ. ಒತ್ತುವರಿ ತೆರವು ಮಾಡಿದೆ

ಡಿಸಿಎಂ ಸಹ ಕೆಲವು ಕಡೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಂಗಳೂರಿನಲ್ಲಿ 860 ಕಿ.ಮೀ. ರಾಜಕಾಲುವೆ ಇದೆ. ಹಿಂದೆ ಸಿಎಂ ಆಗಿದ್ದಾಗ 491 ಕಿ.ಮೀ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ. ಬಿಜೆಪಿ ಸರ್ಕಾರ 195 ಕಿ.ಮೀ. ಒತ್ತುವರಿ ತೆರವು ಮಾಡಿದೆ ಎಂದರು.

ಇದು ಮುಂಜಾಗ್ರತಾ ಕ್ರಮವಾಗಿ ಹೋಗುವಂತಹ ರೌಂಡ್ಸ್. ಕೋಡ್ ಆಫ್ ಕಂಡೆಕ್ಟ್ 80 ದಿನಗಳವರೆಗೆ ಇದೆ. ಪ್ರವಾಹ ವಿಚಾರವಾಗಿ ಮಾತ್ರ ಭೇಟಿ ಕಾರ್ಯಕ್ಕೆ ಅವಕಾಶ ಕೊಟ್ಟಿದ್ದಾರೆ. ನಮ್ಮ‌ ಸರ್ಕಾರ ಎಲ್ಲದರಲ್ಲೂ‌ ಸೀರಿಯಸ್. ನೀರು‌ ತುಂಬಿಸುವುದರಲ್ಲಿ, ಹೂಳು‌ ಎತ್ತುವುದರಲ್ಲೂ‌ ಸೀರಿಯಸ್​ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸಿಟಿ ರೌಂಡ್ಸ್​ ಬಳಿಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ

ಬೆಂಗಳೂರಿನಲ್ಲಿ‌ ಒಂದು ಕೋಟಿಗೂ ಅಧಿಕ ಜನರಿದ್ದಾರೆ. 410 ಕೆರೆಗಳಿದ್ದವು, ಅನೇಕ ಕೆರೆಗಳು ಮುಚ್ಚಿ ಹೋಗಿವೆ. ಕೆಲವು ಕರೆಗಳು ಒತ್ತುವರೆಯಾಗಿವೆ. ಬಿಜೆಪಿ ಕಾಲದಿಂದಲೂ‌ ಗುಂಡಿಗಳಿವೆ. ಈಗ ಸರ್ವೇ ಮಾಡಿ‌ ಸೆನ್ಸಾರ್ ಮಾಡಿ ವರದಿ ಕೊಟ್ಟಿದ್ದಾರೆ. ನಮ್ಮ‌ ಅವಧಿಯಲ್ಲೂ ಗುಂಡಿಗಳಾಗಿವೆ. ಹಿಂದಿನ ಸರ್ಕಾರದಿಂದಲೂ ಗುಂಡಿಗಳು ಆಗಿವೆ ಎಂದರು. ಬಿಬಿಎಂಪಿ ಚುನಾವಣೆ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮೊದಲು ಲೋಕಸಭೆ ಚುನಾವಣೆ ಮುಗಿಯಲಿ. ನೀತಿ‌ ಸಂಹಿತೆ ಇದೆ, ಮುಗಿದ ಮೇಲೆ ನೋಡುತ್ತೇವೆ ಎಂದಿದ್ದಾರೆ.

ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳಿಗೆ‌ ಸಿಎಂ ಸೂಚನೆ

ರಸ್ತೆ ಗುಂಡಿಗಳಿಗೆ ಶಾಶ್ವತ ನಿರ್ವಹಣಾ ವ್ಯವಸ್ಥೆ ರೂಪಿಸಲು‌ ತಿಳಿಸಿದ್ದೇವೆ. ರಸ್ತೆ ಗುಂಡಿಗಳು ಒಂದೇ ಸಾರಿ‌ ಮುಚ್ಚುವುದಿಲ್ಲ. ಗುಂಡಿ ಯಾವಾಗ ಬೀಳುತ್ತೋ ಆಗ ದುರಸ್ತಿ ಕೆಲಸ ಮಾಡಬೇಕು. ಈ ಕುರಿತಾಗಿ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳಿಗೆ‌ ಸೂಚನೆ ನೀಡಿದ್ದೇನೆ. ಪ್ರವಾಹ ನೀರು ಮನೆಗೆ ನುಗ್ಗುವ ಪರಿಸ್ಥಿತಿ ತಪ್ಪಿಸಲು ಕ್ರಮ ವಹಿಸುತ್ತೇವೆ.

ಇದನ್ನೂ ಓದಿ: ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲಾಗದು: ಹರೀಶ್ ಪೂಂಜಾ ಬಂಧನ ಯತ್ನಕ್ಕೆ ವಿಜಯೇಂದ್ರ ಕಿಡಿ

ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗದ ರೀತಿ ನೋಡಿಕೊಳ್ಳಬೇಕು. ಲೋಪವಾದ್ರೆ ಇಂಜಿನಿಯರ್, ಚೀಫ್ ಇಂಜಿನಿಯರ್​ಗಳೇ ಹೊಣೆ. ರಾಜಕಾಲುವೆ ಒತ್ತುವರಿ‌ ಆಗಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. 12 ಕೇಸ್ ಕೋರ್ಟ್​ಗಳಿಗೆ ಹೋಗಿವೆ ಎಂದು ತಿಳಿಸಿದರು.

ಮಡಿವಾಳ ಕೆರೆ ಸಮೀಪ ನೀರು ನಿಂತುಕೊಳ್ಳುತ್ತದೆ. ಇನ್ನೊಂದು‌ ಡ್ರೈನೇಜ್ ಮಾಡಿಕೊಡಿ‌ ಅಂತ ಕೇಳಿದ್ದಾರೆ. ಈಜಿಪುರ ಮೇಲ್ಸೇತುವೆ ಬಹಳ ವರ್ಷದಿಂದ ನಿಂತಿದೆ. ನಾವಿದ್ದಾಗಲೇ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ವಿ. ಈಗ ನಾವು ಬೇರೆ ಗುತ್ತಿಗೆದಾರರಿಗೆ ವಹಿಸಿದ್ದೇವೆ. ಈವರೆಗೆ ಕೇವಲ 5-6% ಕೆಲಸ ಮಾತ್ರ ಮಾಡಿದ್ದಾರೆ. ಕೆಲಸ ಶುರು ಮಾಡುವಂತೆ‌ ಸೂಚನೆ ನೀಡಲಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.