ಬೆಂಗಳೂರು, ಸೆ.15: ಕೋವಿಡ್ಗಿಂತ(Coronavirus) ಭೀಕರ ಎಂದೇ ಹೇಳ್ಪಡುವ ನಿಫಾ ವೈರಸ್(Nipah Virus) ಮತ್ತೆ ಕೇರಳದಲ್ಲಿ ಕಾಣಿಸಿಕೊಂಡಿದೆ. ಬಾವಲಿಗಳಿಂದ ಹರಡುವ ಈ ವೈರಸ್ ಈಗಾಗಲೇ ಇಬ್ಬರ ಜೀವ ಬಲಿ ಪಡೆದಿದೆ. ನಿಫಾ ರಾಜ್ಯದಲ್ಲಿ ಕಾಲಿಡದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಶಂಕಿತ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಆರೋಗ್ಯಾಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದು, ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಸ್ಥಾಪನೆಗೆ ಮುಂದಾಗಿದೆ. ಕೇರಳದಲ್ಲಿ ನಿಫಾ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ರೋಗ ಹರಡದಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಗಡಿಯಿಂದ ಜಿಲ್ಲೆಗಳಿಗೆ ಪ್ರವೇಶಿಸುವ ಸರಕು ವಾಹನಗಳನ್ನು ಪರೀಕ್ಷಿಸಲು ಆರೋಗ್ಯ ಇಲಾಖೆಯ ರಾಜ್ಯ ಪೊಲೀಸರಿಗೆ ಸೂಚಿಸಿದೆ. ಇದರ ಜೊತೆಗೆ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರ ಸಮೀಕ್ಷೆಯನ್ನು ತ್ವರಿತವಾಗಿ ನಡೆಸುವಂತೆ ತಿಳಿಸಲಾಗಿದೆ.
In view of Nipah cases in Kerala, Karnataka Govt issued a circular and has advised the general public to avoid unnecessary travel to affected areas of Kerala; intensify surveillance in the bordering districts to Kerala ( Kodagu, Dakshin Kannada, Chamrajanagara & Mysore) and at… pic.twitter.com/41whQrTgx2
— ANI (@ANI) September 15, 2023
ಇದನ್ನೂ ಓದಿ: Nipah Virus: ನಿಫಾ ವೈರಸ್ನಿಂದ ಸಾವುಗಳು ಹೆಚ್ಚುತ್ತಿವೆ.. ದೇಶದಲ್ಲಿ ಕೊರೊನಾ ಪರಿಸ್ಥಿತಿ ಮತ್ತೆ ಬರುತ್ತಿದೆಯಾ?
ಜ್ವರ, ಮೈ ಕೈ ನೋವು, ಸುಸ್ತು, ತಲೆನೋವು ನಿಫಾದ ಗುಣಲಕ್ಷಣಗಳಾಗಿದೆ. ಗಡಿ ಜಿಲ್ಲೆಗಳಲ್ಲಿ ಇಂತಹ ಶಂಕಿತ ವ್ಯಕ್ತಿಗಳು ಪತ್ತೆಯಾದರೆ ತಕ್ಷಣ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನಿಫಾ ಚಿಕಿತ್ಸೆಗೆ ಪ್ರತ್ಯೇಕ 10 ಬೆಡ್ ನ ವಾರ್ಡ್ ಸ್ಥಾಪಿಸಲಾಗಿದೆ. ರೋಗದ ಲಕ್ಷಣ ಕಂಡು ಬಂದ್ರೆ ತಕ್ಷಣಕ್ಕೆ ಈ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತೆ. ನಿಫಾ ಪ್ರತ್ಯೇಕ ವಾರ್ಡ್ ನಲ್ಲಿ ಆಕ್ಸಿಜನ್ ಮತ್ತು ಔಷಧಿಗಳನ್ನು ಒಳಗೊಂಡಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. ನಿಫಾ ರೋಗ ಲಕ್ಷಣಗಳ ಕುರಿತು ಸಿಬ್ಬಂದಿಗಳಿಗೆ ತರಬೇತಿ ನೀಡಲು ಸೂಚಿಸಲಾಗಿದೆ. ಯಾವುದೇ ಶಂಕಿತ ಪ್ರಕರಣಗಳ ಮಾದರಿಯನ್ನು ಪುಣೆಯ ಎನ್ ಐ ವಿ ಲ್ಯಾಬ್ ಗೆ ಕಳುಹಿಸಲು ತೀರ್ಮಾನಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ