ಚುನಾವಣೆಯಲ್ಲಿ ಟೇಬಲ್ ಹಾಕದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ; ಕಾಂಗ್ರೆಸ್ ಮುಖಂಡ ಸೇರಿದಂತೆ 6 ಮಂದಿ ವಿರುದ್ದ FIR

ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಎಂಬುವವರು ಚುನಾವಣೆಯಲ್ಲಿ ಟೇಬಲ್ ಹಾಕದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಧಮ್ಕಿ ಹಾಕಿದ ಆರೋಪ ಬೆಂಗಳೂರು ದಕ್ಷಿಣ ವಿಧಾನಸಭಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ಕೇಳಿಬಂದಿದೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಸೇರಿದಂತೆ 6 ಮಂದಿ ವಿರುದ್ದ ಎಫ್​ಐಆರ್​ ದಾಖಲಿಸಲಾಗಿದೆ.

ಚುನಾವಣೆಯಲ್ಲಿ ಟೇಬಲ್ ಹಾಕದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ; ಕಾಂಗ್ರೆಸ್ ಮುಖಂಡ ಸೇರಿದಂತೆ 6 ಮಂದಿ ವಿರುದ್ದ FIR
ಚುನಾವಣೆಯಲ್ಲಿ ಟೇಬಲ್ ಹಾಕದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 18, 2024 | 5:59 PM

ಬೆಂಗಳೂರು, ಏ.18: ಬೆಂಗಳೂರು ದಕ್ಷಿಣ ವಿಧಾನಸಭಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿ(Kammanahalli) ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಎಂಬುವವರು ಚುನಾವಣೆಯಲ್ಲಿ ಟೇಬಲ್ ಹಾಕದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಧಮ್ಕಿ ಹಾಕಿದ ಆರೋಪ ಕೇಳಿಬಂದಿದೆ. ದೊಡ್ಡ ಕಮ್ಮನಹಳ್ಳಿ ವಾಸಿಗಳಾದ ಅಭಿಷೇಕ್ ಗೌಡ ಹಾಗೂ ಮಂಜುನಾಥ್ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ ಹಲ್ಲೆ ದೃಶ್ಯಗಳು ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ನಿನ್ನೆ(ಏ.17) ರಾತ್ರಿ 8:50 ರ ಸುಮಾರಿಗೆ ತನ್ನ ಪಟಾಲಂ ಜೊತೆ ಶ್ರೀನಿವಾಸ್  ದೊಡ್ಡ ಕಮ್ಮನಹಳ್ಳಿ ಬಿಜೆಪಿ ಕಛೇರಿ ಬಳಿ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಟೇಬಲ್ ಹಾಕದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಸೇರಿದಂತೆ 6 ಮಂದಿ ವಿರುದ್ದ ಎಫ್​ಐಆರ್​ ದಾಖಲಿಸಲಾಗಿದೆ.

ಇದನ್ನೂ ಓದಿ:ಜೈ ಶ್ರೀರಾಮ್ ಘೋಷಣೆ ಹಲ್ಲೆ ಕೇಸ್​​: ಕಾಂಗ್ರೆಸ್​ನವರಿಗೆ ಧಮ್​ ಇದ್ರೆ ಅವರ ವಿರುದ್ಧ ಗೂಂಡಾಕಾಯ್ದೆ ಹಾಕಿ, ಅಶೋಕ್

ಕದ್ದ ಬೈಕ್​​ನಲ್ಲಿ ಬಂದು ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ

ಬೆಂಗಳೂರು: ಕದ್ದ ಬೈಕ್​​ನಲ್ಲಿ ಬಂದು ಸುಲಿಗೆ ಮಾಡುತ್ತಿದ್ದ ಆರೋಪಿಯನ್ನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀಧರ್ ಬಂಧಿತ ಆರೋಪಿ. ವಾಲ್ಮೀಕಿ ನಗರದಲ್ಲಿ ವಾಟರ್ ಪಾಯಿಂಟ್ ಬಳಿ ನಿಂತಿದ್ದ ವ್ಯಕ್ತಿಯ ಸುಲಿಗೆ ಮಾಡಿದ್ದ ಇತ, ನೀರು ತುಂಬಿಸಿಕೊಳ್ಳುವಾಗ ಬೈಕ್​​ನಲ್ಲಿ ಬಂದು ವ್ಯಕ್ತಿಯ 13 ಗ್ರಾಂ ಚಿನ್ನದ ಸರ ಕಿತ್ತು ಎಸ್ಕೇಪ್ ಆಗಿದ್ದ. ಇದೀಗ ಮತ್ತೋರ್ವನಿಗಾಗಿ  ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Thu, 18 April 24