ಜೈ ಶ್ರೀರಾಮ್ ಘೋಷಣೆ ಹಲ್ಲೆ ಕೇಸ್: ಕಾಂಗ್ರೆಸ್ನವರಿಗೆ ಧಮ್ ಇದ್ರೆ ಅವರ ವಿರುದ್ಧ ಗೂಂಡಾಕಾಯ್ದೆ ಹಾಕಿ, ಅಶೋಕ್
ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಿರಂತರವಾಗಿದೆ. ಅವರಿಗೆ ಧಮ್ ಇದ್ದರೆ ಅವರ ವಿರುದ್ಧ ಗೂಂಡಾಕಾಯ್ದೆ ಹಾಕಿ. ಒಂದು ವೇಳೆ ಕೇಸ್ ಹಾಕದಿದ್ದರೆ ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು, ಏಪ್ರಿಲ್ 18: ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ದೇಶದ್ರೋಹದ ಹೇಳಿಕೆ ಕೊಡುತ್ತಾರೆ. ಅಲ್ಪಸಂಖ್ಯಾತ ಮೂಲಭೂತವಾದಿಗಳಿಗೆ ಇದರಿಂದ ಹುರುಪು ಬಂದಿದೆ. ಹೀಗಾಗಿ ನಮ್ಮನ್ನ ಯಾರು ಕೇಳಲ್ಲ ಅಂತಾ ಈ ರೀತಿ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashoka) ವಾಗ್ದಾಳಿ ಮಾಡಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ವಿದ್ಯಾರಣ್ಯಪುರ ಘಟನೆಯಲ್ಲಿ ಕಾಂಗ್ರೆಸ್ನವರಿಗೆ (Congress) ಧಮ್ ಇದ್ದರೆ ಅವರ ವಿರುದ್ಧ ಗೂಂಡಾಕಾಯ್ದೆ ಹಾಕಿ. ಕೇಸ್ ಹಾಕದಿದ್ದರೆ ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.
ನೀವು ಅವರನ್ನು ರಕ್ಷಣೆ ಮಾಡುವುದಕ್ಕೆ ಹೋಗುತ್ತೀರಾ? ಹುಚ್ಚಾಸ್ಪತ್ರೆಯಿಂದ ಬಂದವರು ಅಂತೇಳಿ ಕೇಸ್ ಮುಚ್ಚಿ ಹಾಕುತ್ತೀರಾ? ಮುಸ್ಲಿಂ ಮೂಲಭೂತವಾಗಿರುವ ಸರ್ಕಾರಕ್ಕೆ ಜನರು ಪಾಠ ಕಲಿಸುತ್ತಾರೆ. ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದ ಮೇಲೆ ದರಿದ್ರ ಬಂದು ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ಈ ಬಾರಿ ಕಾಂಗ್ರೆಸ್ಗೆ 20 ಸ್ಥಾನ ದೊರಕಲಿವೆ: ಸಿದ್ದರಾಮಯ್ಯ
ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಿರಂತರವಾಗಿದೆ. ಲಕ್ಷ್ಮಣ ಸವದಿಯವರು ಮಲ್ಲಿಕಾರ್ಜುನ ಖರ್ಗೆ ಕೇಳಿ ಭಾರತ್ ಮಾತಾ ಕೀ ಜೈ ಎನ್ನಬಹುದಾ ಎನ್ನುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರಾಮ ದೇವರೇ ಅಲ್ಲ ಅಂತಾರೆ. ನಾನು ಮನೆಯಲ್ಲಿ ರಾಮನ ಫೋಟೋನೇ ಇಟ್ಟಿಲ್ಲ ಅಂತಾ ಹೇಳ್ತಾರೆ. ಹಿಂದೂಗಳು ಭಯದಿಂದ ಜೀವನ ಮಾಡುವಂತಹ ಪರಿಸ್ಥಿತಿ ಬಂದಿದೆ ಎಂದರು.
ಚಿಕ್ಕಪೇಟೆಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದರು. ಒಂದು ರೀತಿಯಲ್ಲಿ ಇವರಿಗೆ ಕಾಂಗ್ರೆಸ್ನವರು ಬೆಂಬಲ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಈಗ ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಜಾಧವ್ ನಡೆ ಸಮರ್ಥಿಸಿದ ಅಶೋಕ್
PSI ಹಗರಣ ಕಿಂಗ್ಪಿನ್ R.D.ಪಾಟೀಲ್ ಮನೆಗೆ ಉಮೇಶ್ ಜಾಧವ್ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕಿಂಗ್ಪಿನ್ ಜತೆ ಗುರುತಿಸಿಕೊಳ್ಳುವುದು ಬೇರೆ, ಮತ ಕೇಳುವುದು ಬೇರೆ. ಚುನಾವಣೆ ವೇಳೆ ಮತ ಕೇಳುವುದು ಧರ್ಮ, ಎಲ್ಲರನ್ನೂ ಕೇಳುತ್ತೇವೆ ಎಂದು ಸಮರ್ಥನೆ ಮಾಡಿಕೊಂಡರು.
ಇದನ್ನೂ ಓದಿ: Umesh Jadhav: ನಿನ್ನೆ ಆರ್ಡಿ ಪಾಟೀಲ್, ಇಂದು ದಿವ್ಯಾ ಹಾಗರಗಿ ಜೊತೆ ಫೋಟೋಗೆ ಪೋಸ್ ಕೊಟ್ಟ ಉಮೇಶ್ ಜಾಧವ್
ಯಾವುದೇ ಕಾರಣಕ್ಕೂ ಆ ರೀತಿ ವ್ಯಕ್ತಿಗಳಿಗೆ ಪಕ್ಷ ಬೆಂಬಲ ನೀಡಲ್ಲ. ನಾವು ಅವರಿಗೆ ಬೆಂಬಲ ಕೊಡಲ್ಲ, ಅಪರಾಧಿಗಳು ಅಪರಾಧಿಗಳೇ. ಮತಯಾಚನೆ, ದೇವಸ್ಥಾನಕ್ಕೆ ಹೋದಾಗ ಭೇಟಿಯಾಗುವುದು ತಪ್ಪಲ್ಲ. ರೆಡ್ಡಿ ಒಬ್ಬ ಕಳ್ಳ, ಸುಳ್ಳ, ಲೂಟಿಕೋರ ಅಂತಾ ಪಾದಯಾತ್ರೆ ಮಾಡಿದ್ದರು. ರಾಜ್ಯಸಭೆ ಚುನಾವಣೆ ವೇಳೆ ಗಂಟೆಗಟ್ಟಲೆ ಅವರ ಜೊತೆ ಮಾತಾಡಿದ್ದರು. ಇದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರಿಸಲಿ, ನಂತರ ನಾನು ಉತ್ತರಿಸುತ್ತೇನೆ. ಚುನಾವಣೆ ವೇಳೆ ಉಮೇಶ್ ಜಾಧವ್ ಮತ ಕೇಳಿರುವುದು ಸಾಮಾನ್ಯ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:32 pm, Thu, 18 April 24