AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Umesh Jadhav: ನಿನ್ನೆ ಆರ್​ಡಿ ಪಾಟೀಲ್​, ಇಂದು ದಿವ್ಯಾ ಹಾಗರಗಿ ಜೊತೆ ಫೋಟೋಗೆ ಪೋಸ್ ಕೊಟ್ಟ ಉಮೇಶ್ ಜಾಧವ್

ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ನಿನ್ನೆ ಪಿಎಸ್​ಐ ಕಿಂಗ್ ಪಿನ್​​ ಆರ್​ಡಿ ಪಾಟೀಲ್ ನಿವಾಸಕ್ಕೆ ತೆರಳಿ ಮತಯಾಚಿಸಿ, ಬೆಂಬಲ ಕೇಳಿದ್ದಾರೆ. ಅದೇ ರೀತಿಯಾಗಿ ಇಂದು ಪಿಎಸ್​ಐ ಕೇಸ್​​ನಲ್ಲಿ ಅರೆಸ್ಟ್ ಆಗಿದ್ದ ದಿವ್ಯಾ ಹಾಗರಗಿ ಜೊತೆ ಉಮೇಶ್ ಜಾಧವ್ ಫೋಟೋಗೆ ಪೋಸ್​ ನೀಡಿದ್ದಾರೆ. ಸದ್ಯ ಬಿಜೆಪಿ ಸಂಸದರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Umesh Jadhav: ನಿನ್ನೆ ಆರ್​ಡಿ ಪಾಟೀಲ್​, ಇಂದು ದಿವ್ಯಾ ಹಾಗರಗಿ ಜೊತೆ ಫೋಟೋಗೆ ಪೋಸ್ ಕೊಟ್ಟ ಉಮೇಶ್ ಜಾಧವ್
ದಿವ್ಯಾ ಹಾಗರಗಿ ಜೊತೆ ಉಮೇಶ ಜಾದವ್
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Apr 18, 2024 | 11:29 AM

Share

ಕಲಬುರಗಿ, ಏಪ್ರಿಲ್​ 18: ನಿನ್ನೆ ಪಿಎಸ್​ಐ ಕಿಂಗ್ ಪಿನ್​​ ಆರ್​ಡಿ ಪಾಟೀಲ್ (RD Patil) ನಿವಾಸಕ್ಕೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ (Umesh Jadhav) ಭೇಟಿ ನೀಡಿ ಊಟೋಪಚಾರ ಮಾಡಿದ್ದರು. ಆದರೆ ಇಂದು ಮತ್ತೋರ್ವ ಆರೋಪಿ ಜೊತೆ ಉಮೇಶ ಜಾದವ್ ಅವರ ಫೋಟೋ ವೈರಲ್ ಆಗಿದೆ. ಪಿಎಸ್​ಐ ಕೇಸ್​​ನಲ್ಲಿ ಅರೆಸ್ಟ್ ಆಗಿದ್ದ ದಿವ್ಯಾ ಹಾಗರಗಿ ಜೊತೆ ಉಮೇಶ್ ಜಾಧವ್ ಫೋಟೋಗೆ ಪೋಸ್​ ನೀಡಿದ್ದಾರೆ. ರಾಮನವಮಿ ಮೆರವಣಿಗೆ ವೇಳೆ ತೆಗೆಸಿಕೊಂಡ ಫೋಟೋವನ್ನು ಜಾದವ್​ ಫೇಸ್ ಬುಕ್​ನಲ್ಲಿ ಹಾಕಿಕೊಂಡಿದ್ದಾರೆ.

ನಿನ್ನೆ ಕಿಂಗ್ ಪಿನ್​​ ಆರ್.ಡಿ.ಪಾಟೀಲ್ ಬೆಂಬಲಯಾಚಿಸಿದ್ದ ಬಿಜೆಪಿ ಸಂಸದರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನೆಲೆ ಇದೀಗ ಮತ್ತೋರ್ವರ ಜೊತೆ ಫೋಟೋ ವೈರಲ್​ ಆಗಿದೆ. ಸದ್ಯ ದಿವ್ಯಾ ಹಾಗರಗಿ ಬೇಲ್ ಮೇಲೆ‌ ಹೊರಗಡೆ ಇದ್ದಾರೆ. ಲಕ್ಷಾಂತರ ಯುವಕರ ಭವಿಷ್ಯಕ್ಕೆ ಕೊಳ್ಳಿಯಿಟ್ಟ ಆರೋಪಿಗಳ ಜೊತೆ ಉಮೇಶ ಜಾದವ್ ಪೋಸ್ ಕೊಡುತ್ತಿರುವುದು ಆಕ್ರೋಶಕ್ಕೆ ಗುರಿಯಾಗಿದೆ.

ಇದನ್ನೂ ಓದಿ: PSI ಕಿಂಗ್ ಪಿನ್ RD ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಭೇಟಿ: ಜಾಧವ್ ವಿರುದ್ಧ ಭುಗಿಲೆದ್ದ ಆಕ್ರೋಶ

PSI ನೇಮಕಾತಿಯಲ್ಲಿ ಹಗರಣ ನಡೆಸಿ, ಪರೀಕ್ಷೆಯಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಿ 58,000ಕ್ಕೂ ಹೆಚ್ಚು ಯುವಕರ ಭವಿಷ್ಯದ ಪಾಲಿಗೆ ಶಾಪವಾಗಿ ಪರಿಣಮಿಸಿ RD ಪಾಟೀಲ್ ಈಗ ಜೈಲುಪಾಲಾಗಿದ್ದಾನೆ. ಪಿಎಎಸ್​ ಪರೀಕ್ಷೆ ಮಾತ್ರವಲ್ಲ ವಿವಿಧ ಬೋರ್ಡ್​ ಪರೀಕ್ಷೆಗಳಲ್ಲೂ ಈ ಆರ್​ಡಿ ಪಾಟೀಲ್​ ಕಿಂಗ್ ಪಿನ್ ಆಗಿದ್ದಾನೆ. ಆದರೆ ನಿನ್ನೆ RD ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತೆರಳಿ ಮತಯಾಚಿಸಿ, ಬೆಂಬಲ ಕೇಳಿರುವುದು ಅವರಿಗೆ ತಿರುಗುಬಾಣವಾಗಿದೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್​ರಿಂದ ಟೆಂಪಲ್ ರನ್

ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್​ರಿಂದ ಟೆಂಪಲ್ ರನ್ ಮಾಡಲಾಗುತ್ತಿದೆ. ಕಾಳಗಿ ತಾಲ್ಲೂಕಿನ ರಟಕಲ್ ರೇವಣಸಿದ್ದೆಶ್ವರ, ಬಳಿಕ ಕಲಬುರಗಿ ನಗರದ ಶರಣಬಸವೇಶ್ವರರ ದೇವಸ್ಥಾನ ದಲ್ಲಿ‌ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮಲ್ಲಿಕಾರ್ಜುನ್​ ಖರ್ಗೆ ಅಳಿಯ ಕೂಡ ಕೋಟ್ಯಾಧೀಶ; ಆಸ್ತಿವಿವರ ಇಲ್ಲಿದೆ

ಶರಣಬಸವೇಶ್ವರರ ದರ್ಶನ ಬಳಿಕ ರುಕ್ಮಿಣಿ ವಿಠಲ್ ಮಂದಿರಕ್ಕೆ ತೆರಳಿ ಪೂಜೆ ಮಾಡಿದ್ದು, ಬಳಿಕ ರೋಡ್ ಶೋ ಮುಖಾಂತರ ಆಗಮಿಸಿ ಉಮೇಶ್ ಜಾಧವ್ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗಮಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:27 am, Thu, 18 April 24