ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರೇ ಎಚ್ಚರ.. 5 ವರ್ಷದ ಮಗು ದುರಂತ ಸಾವು
ಇತ್ತೀಚೆಗೆ ಕೆಲ ಅವಘಡಗಳಿಂದ ಮಕ್ಕಳು, ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದರಲ್ಲೂ ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗುವ ಪೋಷಕರು ಈ ಸ್ಟೋರಿ ಓದಲೇಬೇಕು. ಸ್ವಲ್ಪ ಯಾಮಾರಿದರೂ ಮಕ್ಕಳನ್ನು ಕಳೆದುಕೊಳ್ಳುವ ಸಂಭವ ಬರುಬಹುದು. ಹೌದು, ಇಂದು ಬೆಂಗಳೂರಿನಲ್ಲಿ 5 ವರ್ಷದ ಮಗುವೊಂದು ದುರಂತ್ಯ ಅಂತ್ಯಗೊಂಡಿದೆ.

ಬೆಂಗಳೂರು, ಮೇ.21: ಸಂಪ್ಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ(Bengaluru) ಅಯ್ಯಪ್ಪ ನಗರದ ವಿಶಾಲ್ ಮಾರ್ಟ್ ಮುಂಭಾಗದಲ್ಲಿ ನಡೆದಿದೆ. ನೇಪಾಳ ಮೂಲದ ದಂಪತಿಯ ಪುತ್ರ ಸುಬೀನ್(5) ಮೃತ ಮಗು. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ದಂಪತಿ, ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಇನ್ನು ಕೆಲಸದಿಂದ ಬಂದು ಮಗು ಕಾಣದೆ ಇದ್ದಾಗ ತಂದೆ-ತಾಯಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಂಪಿನಲ್ಲಿ ಮಗು ಪತ್ತೆಯಾಗಿದೆ. ಕೂಡಲೇ ಕೆಆರ್ ಪುರಂ ಸರ್ಕಾರಿ ಆಸ್ಪತ್ರೆ ಮಗುವನ್ನ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಷ್ಟರವಳೆಗೆ ಮಗು ಕೊನೆಯುಸಿರೆಳೆದಿತ್ತು. ಈ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜಲು ತೆರಳಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವು
ವಿಜಯಪುರ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಅಮಿತ್ ರಾಠೋಡ್(12) ಹಾಗೂ ಸುದೀಪ್ ರಾಠೋಡ್(10) ಮೃತ ಬಾಲಕರು. ಪಟ್ಟಣದ ದೇಶಪಾಂಡೆ ತಾಂಡಾದಲ್ಲಿರುವ ಕೃಷಿಹೊಂಡದಲ್ಲಿ ಇಂದು(ಮೇ.21) ಈಜಲು ತೆರಳಿದ್ದರು. ಈ ವೇಳೆ ಅವಘಡ ಸ.ಭವಿಸಿದೆ. ಈ ಘಟನೆ ಕುರಿತು ಇಂಡಿ ಶಹರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತ್ತ ಮಕ್ಕಳನ್ನು ಕಳೆದುಕೊಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ:ಬೆಂಗಳೂರು ಗ್ರಾಮಾಂತರ: ಹಾವು ಕಚ್ಚಿ 7 ವರ್ಷದ ಮಗು ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಲೈನ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಯುವಕ ದುರ್ಮರಣ
ಚಿಕ್ಕಮಗಳೂರು: ತಾಲೂಕಿನ ಗಂಜಲಗೋಡು ಗ್ರಾಮದಲ್ಲಿ ವಿದ್ಯುತ್ ಕೇಬಲ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಗಂಜಲಗೋಡು ಗ್ರಾಮದ ಜೀವಿತ್ (23) ಮೃತ ರ್ದುದೈವಿ. ನಿನ್ನೆ(ಮೇ.20) ಸುರಿದ ಗಾಳಿ ಮಳೆಯಿಂದ ವೈರ್ ನೇತಾಡುತ್ತಿತ್ತು. ಈ ಹಿನ್ನಲೆ ಲೈನ್ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿ ಈ ಅವಘಡ ನಡೆದಿದೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




