ನೀರು ಕೊಡುವವರೆಗೂ ವೋಟ್ ಮಾಡಲ್ಲ: ಬಸವೇಶ್ವರ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ

ರಣ ಬಿಸಿಲಿಗೆ ಅಕ್ಷರಶಃ ಜನರು ಬೆಂದು ಹೋಗಿದ್ದಾರೆ. ಇದರಿಂದ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಹನಿ ನೀರಿಗಾಗಿ ಸಂಕಷ್ಟ ಎದುರಾಗಿದೆ. ಈ ಹಿನ್ನಲೆ ಎಚ್ಚೆತ್ತ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಸವೇಶ್ವರ ಲೇಔಟ್(Basaveshwara Layout) ನಿವಾಸಿಗಳು, ಈ ಲೇಔಟ್​ನಲ್ಲಿ 500 ಕ್ಕೂ ಹೆಚ್ಚು ಮನೆಗಳಿದ್ದು, 2000 ಕ್ಕೂ ಹೆಚ್ಚು ಮತಗಳಿವೆ. ನೀರು ಕೊಡದಿದ್ದರೆ ಮತದಾನ ಬಹಿಷ್ಕಾರದ ಎಚ್ಚರಿಕೆ‌ ನೀಡಿದ್ದಾರೆ.

ನೀರು ಕೊಡುವವರೆಗೂ ವೋಟ್ ಮಾಡಲ್ಲ: ಬಸವೇಶ್ವರ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ
ಬಸವೇಶ್ವರ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ
Follow us
Kiran Surya
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 17, 2024 | 4:21 PM

ಬೆಂಗಳೂರು, ಏ.17: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ನೀರಿಗಾಗಿ ಹಾಹಾಕಾರ(Water Crisis) ಶುರುವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ನೀರಿನ ಸಮಸ್ಯೆ ಉದ್ಬವಿಸಿದೆ. ಈ ಹಿನ್ನಲೆ ಎಚ್ಚೆತ್ತ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಸವೇಶ್ವರ ಲೇಔಟ್(Basaveshwara Layout) ನಿವಾಸಿಗಳು ಮತದಾನ ಬಹಿಷ್ಕಾರದ ಎಚ್ಚರಿಕೆ‌ ನೀಡಿದ್ದಾರೆ. ನೀರು ಕೊಡುವವರೆಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವ್ಯಾರು ಮತದಾನ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಕಳೆದ ಎರಡು ವರ್ಷಗಳಿಂದ ಲೇಔಟ್​ಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲವಂತೆ, ಈ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ. ಈ ಬಾರಿ ಬಿರುಬಿಸಿಲಿಗೆ ಏರಿಯಾದಲ್ಲಿರುವ ಎಲ್ಲಾ ಬೋರ್ವೆಲ್​​ಗಳು ಬತ್ತಿ ಹೋಗಿದೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಮನೆಗಳಿಗೆ ನೀರು ಬಂದಿದ್ದು, ಆಮೇಲೆ ನೀರೇ ಬಂದಿಲ್ಲ.

ಇದನ್ನೂ ಓದಿ:ನೀರಿಗಾಗಿ ಹಾಹಾಕಾರ: ಟ್ಯಾಂಕರ್ ಮೂಲಕ ಮನೆ-ಮನೆಗೆ ನೀರು ನೀಡ್ತಿರುವ ಯುವಕರು

ಈ ಲೇಔಟ್​ನಲ್ಲಿ 500 ಕ್ಕೂ ಹೆಚ್ಚು ಮನೆಗಳಿದ್ದು, 2000 ಕ್ಕೂ ಹೆಚ್ಚು ಮತಗಳಿವೆ. ಕುಡಿಯಲು ನೀರಿಲ್ಲದೆ ಬಾಡಿಗೆ ಮನೆ ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಟ್ಯಾಂಕರ್​ಗೆ ಹಣ ಕೊಟ್ಟು ನೀರು ತರಿಸಿಕೊಳ್ಳೋಣಾವೆಂದರೆ, ಒನ್ ಟೂ ಡಬಲ್ ಕೇಳುತ್ತಾರೆ. ಈ ಹಿಂದೆ 500 ರಿಂದ 600 ರುಪಾಯಿ ಕೇಳ್ತಿದ್ದ ಟ್ಯಾಂಕರ್​ನವರು, ಇದೀಗ 1500 ರಿಂದ 2 ಸಾವಿರ ಕೇಳುತ್ತಿದ್ದಾರೆ. ಇತ್ತ ಕೆಟ್ಟು ಹೋಗಿರುವ ಬೋರ್ವೆಲ್ ಕೂಡ ರಿಪೇರಿ ಮಾಡುತ್ತಿಲ್ಲ. ನಿವಾಸಿಗಳೇ ಬೋರ್ವೆಲ್ ರಿಪೇರಿ ಮಾಡಿಸಿಕೊಳ್ಳುತ್ತೇವೆ ಎಂದರೂ ಕೂಡ ಅಧಿಕಾರಿಗಳು ಅನುಮತಿ ಕೊಡುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ