ನೀರಿಗಾಗಿ ಹಾಹಾಕಾರ: ಟ್ಯಾಂಕರ್ ಮೂಲಕ ಮನೆ-ಮನೆಗೆ ನೀರು ನೀಡ್ತಿರುವ ಯುವಕರು

ಲೋಕಸಭಾ ಸಮರ ಗೆಲ್ಲುವ ರಣ ತಂತ್ರ ಹೆಣೆಯುತ್ತಿರುವ ಕೈ- ಕಮಲ ನಾಯಕರು, ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ ಎನ್ನುವುದನ್ನೇ ಮರೆತು ಬಿಟ್ಟಿದ್ದಾರೆ. ಜನ- ಜಾನುವಾರುಗಳಿಗೆ ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದರೂ ನೋಡದೇ ಬಿಡುವಿಲ್ಲದೇ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಆ ಗ್ರಾಮದ ಯುವಕರು ಗ್ರಾಮದಲ್ಲಿ ಎದುರಾಗಿರುವ ಜಲಕ್ಷಾಮ ಹೋಗಲಾಡಿಸಲು ಪಣ ತೊಟ್ಟು, ಕೈಲಾದ ಸಹಾಯ ಮಾಡುತ್ತಿದ್ದಾರೆ. 

ನೀರಿಗಾಗಿ ಹಾಹಾಕಾರ: ಟ್ಯಾಂಕರ್ ಮೂಲಕ ಮನೆ-ಮನೆಗೆ ನೀರು ನೀಡ್ತಿರುವ ಯುವಕರು
ಹಾನಗಲ್ಲ ತಾಲೂಕಿನ ಬಾಳಂಬಿಡ ಗ್ರಾಮದಲ್ಲಿ ನೀರಿನ ಸಮಸ್ಯೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 05, 2024 | 7:43 AM

ಹಾವೇರಿ, ಏ.05: ರಾಜ್ಯಾದ್ಯಂತ ಈ ಭಾರಿಯ ಬರಗಾಲಕ್ಕೆ ಕುಡಿಯಲು ನೀರು ಸಿಗದೆ(Water Crisis) ಜನ-ಜಾನುವಾರುಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಹಾವೇರಿ(Haveri) ಜಿಲ್ಲೆ ಏನು ಹೊರತಾಗಿಲ್ಲ. ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ 70 ಪ್ರತಿಶತ ಮಳೆ ಕಡಿಮೆಯಾಗಿ ಇರುವ ಪ್ರಮುಖ ನಾಲ್ಕು ನದಿಗಳು ಬತ್ತಿಹೋಗಿದೆ. ಕೆರೆ-ಕಟ್ಟೆಗಳೆಲ್ಲ ಖಾಲಿ-ಖಾಲಿಯಾಗಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಹಳ್ಳಿ-ಹಳ್ಳಿಗಳಲ್ಲಿ ಮಹಿಳೆಯರು ನೀರಿಗಾಗಿ ಕೊಳಾಯ ಮುಂದೆ ದಿನವಿಡಿ ನಿಲ್ಲುತ್ತಿದ್ದಾರೆ. ಇದನ್ನು ಮನಗಂಡ ಹಾನಗಲ್ಲ ತಾಲೂಕಿನ ಬಾಳಂಬಿಡ ಗ್ರಾಮದ ಸಂತೋಷ ದುಂಡಣ್ಣನವರ್ ಮತ್ತು ಅವರ ಸ್ನೇಹಿತರ ಬಳಗ ಇದೀಗ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಮುಂದಾಗಿದೆ.

ಯುವಕರ ಕಾರ್ಯಕ್ಕೆ ಕೈ ಜೋಡಿಸಿದ ಅನ್ನದಾತರು

ಹೌದು, ತಮ್ಮದೇ ಆದ ಟ್ರ್ಯಾಕ್ಟರ್ ತಗೆದುಕೊಂಡು ಅದಕ್ಕೆ ತಾವೇ ಡಿಸೇಲ್ ಹಾಕಿಕೊಂಡು ಅದರಲ್ಲಿ ಸಾವಿರ ಲೀಟರ್‌ನ ಎರಡು ಸಿಂಟ್ಯಾಕ್ಸ್‌ಗಳನ್ನು ಇಟ್ಟುಕೊಂಡು ಗ್ರಾಮದ ಜನರ ಕುಡಿಯುವ ನೀರಿನ ದಾಹ ತೀರಿಸಲು ಈ ಯುವಪಡೆ ಮುಂದಾಗಿದೆ. ಈ ಯುವಕರ ಕಾರ್ಯಕ್ಕೆ ಗ್ರಾಮದ ರೈತರು ಕೈ ಜೋಡಿಸಿದ್ದಾರೆ. ಜಮೀನುಗಳಲ್ಲಿ ಇರುವ ಬೋರ್​ವೇಲ್​ನಿಂದ ಉಚಿತವಾಗಿ ನೀರು ಒದಗಿಸುತ್ತಿದ್ದಾರೆ. ಟ್ರ್ಯಾಕ್ಟರ್‌ನಲ್ಲಿರುವ ಸಿಂಟ್ಯಾಕ್ಸ್‌ಗಳಿಗೆ ನೀರು ತುಂಬಿಕೊಂಡು ಗ್ರಾಮಕ್ಕೆ ಆಗಮಿಸುವ ಯುವಕರು, ಗ್ರಾಮದ ಮನೆ-ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ:Water Crisis: ಬೆಂಗಳೂರಿನಂತೆಯೇ ಸಂಕಷ್ಟಕ್ಕೀಡಾದ ಮಂಡ್ಯ, 38 ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ

ಗ್ರಾಮದ ಪ್ರಮುಖ ಓಣಿಯ ವೃತ್ತದಲ್ಲಿ ಟ್ರ್ಯಾಕ್ಟರ್​ ನಿಲ್ಲಿಸುವ ಯುವಕರು, ಮಹಿಳೆಯರು ತರುವ ಕೊಡಪಾನಗಳಿಗೆ ನೀರು ತುಂಬಿಸುತ್ತಾರೆ. ಒಂದು ದಿನಕ್ಕೆ 10 ಸಾವಿರ ಲೀಟರ್ ನೀರಿನಿಂದ ಹಿಡಿದು 12 ಸಾವಿರ ಲೀಟರ್​ವರೆಗೆ ಈ ಯುವಕರು ಕುಡಿಯುವ ನೀರು ಪೂರೈಸುತ್ತಿದ್ದಾರೆ. ಪ್ರತಿ ಮನೆಗೆ ನಾಲ್ಕು ಕೊಡಪಾನಗಳಂತೆ ಸರತಿಯಲ್ಲಿ ನಿಂತ ಗ್ರಾಮಸ್ಥರು ಕುಡಿಯುವ ನೀರು ಪಡೆಯುತ್ತಾರೆ. ಈ ರೀತಿ ಮುಂಜಾನೆ ಆರಂಭವಾದ ಈ ಯುವಕರ ಕಾರ್ಯಕ್ಕೆ ಊಟದ ಸಮಯ ಸಹ ಸಿಗುವುದಿಲ್ಲ. ಒಟ್ಟಾರೆ ಈ ಯುವಕರ ಕಾರ್ಯ ಉಳಿದ ಗ್ರಾಮದ ಯುವಕರಿಗೂ ಸ್ಪೂರ್ತಿಯಾಗಲಿ ಎನ್ನುವುದು ನಮ್ಮ ಆಶಯ. ಜೊತೆಗೆ ಈ ಯುವಕರು ಈ ಕಾರ್ಯವನ್ನು ಮಳೆಗಾಲ ಆರಂಭವಾಗುವರೆಗೂ ಮುಂದುವರೆಸುವ ಅನಿವಾರ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್