ಇದೇ ಕರ್ನಾಟಕ ಪೊಲೀಸ್ ತಾಕತ್ತು: ಇಡೀ ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಖದೀಮ ಬೆಂಗಳೂರಿನಲ್ಲಿ ಲಾಕ್

ಇಡೀ ದೇಶದಲ್ಲಿ ನೂರಕ್ಕೂ ಹೆಚ್ಚು ಕೇಸ್​​​ಗಳನ್ನು ಹೊಂದಿರುವ ಖದೀಮ ಸತ್ತಿ ಬಾಬು ಅಲಿಯಾಸ್​​ ಸ್ಪೈಡರ್ ಸತೀಶ್ ಅನ್ನು ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಕಳ್ಳತನ ಮಾಡಿದ ಬೆನ್ನಲ್ಲೇ ಸತೀಶ್​​ ಪೊಲೀಸರ ಅತಿಥಿ​​ ಆಗಿದ್ದಾನೆ. ಆತನ ಹಿನ್ನೆಲೆ ಕೇಳಿದರೆ ನಿಜಕ್ಕೂ ಶಾಕ್​ ಆಗುತ್ತೀರಾ.

ಇದೇ ಕರ್ನಾಟಕ ಪೊಲೀಸ್ ತಾಕತ್ತು: ಇಡೀ ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಖದೀಮ ಬೆಂಗಳೂರಿನಲ್ಲಿ ಲಾಕ್
ಸತ್ತಿಬಾಬು ಅಲಿಯಾಸ್​​ ಸ್ಪೈಡರ್ ಸತೀಶ್, ನರೇಂದರ್, ಸುನಿಲ್ ಕುಮಾರ್
Image Credit source: tv9 kannada

Updated on: May 26, 2026 | 3:15 PM

ಬೆಂಗಳೂರು, ಮೇ 26: ನಗರದಲ್ಲಿ ಮನೆ ಮತ್ತು ಜ್ಯುವೆಲ್ಲರಿ ಶಾಪ್​​​ನಲ್ಲಿ ಕಳ್ಳತನ (theft) ಮಾಡಿದ್ದ ಮೂವರು ಆರೋಪಿಗಳನ್ನು ವೈಟ್ ಫೀಲ್ಡ್ ಪೊಲೀಸರು (Whitefield police) ಬಂಧಿಸಿದ್ದಾರೆ. ಸುನಿಲ್ ಕುಮಾರ್, ಸತ್ತಿಬಾಬು ಅಲಿಯಾಸ್​​ ಸ್ಪೈಡರ್ ಸತೀಶ್, ನರೇಂದರ್ ಬಂಧಿತರು. ಕಾರಿನಲ್ಲಿ ಬಂದು ಕಳ್ಳತನ ಮಾಡಿ ಗ್ಯಾಂಗ್​ ಎಸ್ಕೇಪ್ ಆಗಿತ್ತು. ಎರಡು ತಿಂಗಳ ಅಂತರದಲ್ಲಿ ಖದೀಮರು ಕೃತ್ಯವೆಸಗಿದ್ದರು. ಸದ್ಯ ಆರೋಪಿಗಳಿಂದ 1 ಕೋಟಿ ರೂ ಮೌಲ್ಯದ 584 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ವೈಟ್ ಫೀಲ್ಡ್‌ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಮುಖ್ಯಾಂಶಗಳು

  • ವೈಟ್‌ಫೀಲ್ಡ್ ಪೊಲೀಸರ ಬಿಗ್ ಆಪರೇಷನ್ ಕುಖ್ಯಾತ ಕಳ್ಳರ ಬಂಧನ
  • ಕರ್ನಾಟಕದಲ್ಲಿ ಮೊದಲ ಬಾರಿಗೆ ಕಳ್ಳತನ ಮಾಡಿ ಸಿಕ್ಕಬಿದ್ದ ಖತರ್ನಾಕ್ ಖದೀಮ
  • ಸ್ಕೋಡಾ ಕಾರಿನಲ್ಲಿ ಬಂದು ಕಳ್ಳತನ ಮಾಡಿ ಎಸ್ಕೇಪ್​ ಆಗುತ್ತಿದ್ದ ಗ್ಯಾಂಗ್​

ಕಾಂಗ್ರೆಸ್​​ ಮಾಜಿ ಅಧ್ಯಕ್ಷನ ಮನೆಗೆ ಕನ್ನ ಹಾಕಿದ್ದ ಆಸಾಮಿ

ಇನ್ನು ಬಂಧಿತ ಮೂವರ ಪೈಕಿ ಸತ್ತಿ ಬಾಬು ಅಲಿಯಾಸ್​​ ಸ್ಪೈಡರ್ ಸತೀಶ್​​​ ಹಿನ್ನೆಲೆ ಭಯಾನಕವಾಗಿದೆ. ಇತನ ಮೇಲೆ ಇಡೀ ದೇಶದಲ್ಲಿ ನೂರಕ್ಕೂ ಹೆಚ್ಚು ಕೇಸ್​​ಗಳಿವೆ. ಒಡಿಶಾ, ಕೇರಳಂ, ತಮಿಳುನಾಡಿನಲ್ಲಿ ಕಳ್ಳತನ ಮಾಡುತ್ತಿದ್ದ. ಪ್ರತಿಷ್ಠಿತರ ಮನೆಗಳನ್ನೇ ಟಾರ್ಗೆಟ್ ಮಾಡಿ ಸತೀಶ್ ಕಳ್ಳತನ ಮಾಡುತ್ತಿದ್ದ. ಒಡಿಶಾ ಕಾಂಗ್ರೆಸ್​​ ಪ್ರದೇಶ ಸಮಿತಿ ಮಾಜಿ ಅಧ್ಯಕ್ಷ ನಿರಂಜನ್ ಪಟ್ನಾಯಕ್​​ ಮನೆಯಲ್ಲೂ ಸತೀಶ್​​ ಕಳ್ಳತನ‌ ಮಾಡಿದ್ದ. ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಬಂದು ಕೃತ್ಯವೆಸಗಿದ್ದ.

ಗೂಗಲ್​ನಲ್ಲಿ ಸರ್ಚ್ ಮಾಡಿ ಸ್ಕೆಚ್ ಹಾಕುತ್ತಿದ್ದ ಖದೀಮ

ಗೂಗಲ್​​ನಲ್ಲಿ ರಿಚೆಸ್ಟ್ ವಿಲ್ಲಾ ಎಂದು ಸರ್ಚ್ ಮಾಡಿ ಸ್ಕೆಚ್ ಹಾಕುತ್ತಿದ್ದ. ಬಳಿಕ ಸ್ಕೋಡಾ ಕಾರಿನಲ್ಲಿ ಬಂದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ. ಇನ್ನು ಈತ ಕಟ್ಟಡದಿಂದ ಕಟ್ಟಡಕ್ಕೆ ಸ್ಟೈಡರ್​ನಂತೆ ಜಂಪ್ ಮಾಡುವುದರಲ್ಲಿ ನಿಸ್ಸಿಮಾ. ಸಾಕ್ಷಿಗಳ ಕೊರತೆಯಿಂದಾಗಿ ಕೇಸ್​​ನಿಂದ ಬಚಾವಾಗುತ್ತಿದ್ದ ಸತೀಶ್​​, ಕರ್ನಾಟಕದಲ್ಲಿ ಮೊದಲ ಬಾರಿಗೆ ಕಳ್ಳತನ ಮಾಡಿ ಪೊಲೀಸರ ಅತಿಥಿ ಆಗಿದ್ದಾನೆ.

ಕಾಶಿಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದವರ ಬಂಧನ

ಮತ್ತೊಂದು ಪ್ರಕರಣದಲ್ಲಿ ಕಾಶಿಯಾತ್ರೆಗೆ ಹೋಗಿದ್ದವರ ಮನೆಯಲ್ಲಿ ಕಳ್ಳತನ ಮಾಡಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್​​ 26 ರಂದು ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಯ ಲಾಕರ್​ ಒಡೆಯಲು ಯತ್ನಿಸಿದ ಗ್ಯಾಂಗ್ ಬಳಿಕ ಹೊತ್ತೊಯ್ದಿದ್ದರು. ಬೆಂಗಳೂರಿನ ಬ್ಯಾಡರಹಳ್ಳಿ ಸಿಂಡಿಕೇಟ್​ ಲೇಔಟ್​ನಲ್ಲಿ ಘಟನೆ ನಡೆದಿದ್ದತ್ತು.

ಇದನ್ನೂ ಓದಿ: ಹಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ: ಸಿನಿಮಾ ಸ್ಟೈಲ್​​ನಲ್ಲಿ ಕಳ್ಳತನ

ಸದ್ಯ ಬಂಧಿತ ಆರೋಪಿ ಗಂದಾಧರ, ಬಸವ ಮತ್ತು ಕಿರಣ್​ರಿಂದ 500 ಗ್ರಾಂ ತೂಕದ 70 ಲಕ್ಷ ರೂ ಮೌಲ್ಯದ ಬಂಗಾರ, 1.43 ಲಕ್ಷ ನಗದು ಮತ್ತು 750 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವಿಕಾಸ್ ಟಿವಿ9 ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us