AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ: ಸಿನಿಮಾ ಸ್ಟೈಲ್​​ನಲ್ಲಿ ಕಳ್ಳತನ

ಬೆಂಗಳೂರಿನ ನಾಗರಭಾವಿಯಲ್ಲಿ ಮಾಜಿ ಕಾರು ಚಾಲಕನೊಬ್ಬ ಹಳೆ ಮಾಲೀಕನ ಮನೆಗೆ ನಕಲಿ ಕೀ ಬಳಸಿ ನುಗ್ಗಿ, ₹8 ಲಕ್ಷಕ್ಕೂ ಅಧಿಕ ಮೌಲ್ಯದ 146 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಆರೋಪಿ ಸಿನಿಮಾ ಮಾದರಿಯಲ್ಲಿ ಕಳ್ಳತನ ನಡೆಸಿದ್ದು, ಮನೆಯವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆದರೆ ಪೊಲೀಸರ ಹೆಸರು ಹೇಳುತ್ತಿದ್ದಂತೆ ತಪ್ಪಿಸಿಕೊಂಡು ಆತ ಎಸ್ಕೇಪ್​​ ಆಗಿದ್ದು, ಖದೀಮನಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಹಳೆ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ: ಸಿನಿಮಾ ಸ್ಟೈಲ್​​ನಲ್ಲಿ ಕಳ್ಳತನ
ಸಾಂದರ್ಭಿಕ ಚಿತ್ರImage Credit source: shutterstock.com
ಪ್ರಸನ್ನ ಹೆಗಡೆ
|

Updated on:May 26, 2026 | 2:50 PM

Share

ಬೆಂಗಳೂರು, ಮೇ 26: ಮಾಜಿ ಚಾಲಕನೊಬ್ಬ ಡುಪ್ಲಿಕೇಟ್ ಕೀ ಬಳಸಿ ತನ್ನ ಹಳೆ ಮಾಲೀಕರ ಮನೆಗೆ ನುಗ್ಗಿ, 8 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 146 ಗ್ರಾಂ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಂಗಳೂರಿನ (Bengaluru) ನಾಗರಭಾವಿಯಲ್ಲಿ ನಡೆದಿದೆ. ಆರೋಪಿ ಯೋಗೇಶ್​​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪ್ರಕಾಶ್ ಎ. ಎಂಬುವವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಯೋಗೇಶ್ ಎಂಬಾತ ಸುಮಾರು ಒಂದು ವರ್ಷ ಅವರ ವೈಯಕ್ತಿಕ ಕಾರು ಚಾಲಕರಾಗಿ ಕೆಲಸ ಮಾಡಿ, ಎರಡು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಎನ್ನಲಾಗಿದೆ.

ಏಪ್ರಿಲ್ 25ರಿಂದ ಕುಟುಂಬದವರು ಮನೆಯಿಂದ ಹೊರಗೆ ಹೋದಾಗಲೆಲ್ಲಾ ಮನೆಯಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗುತ್ತಿರುವುದು ಗಮನಕ್ಕೆ ಬಂದಿತ್ತು. ಹೀಗಿದ್ದರೂ ಮನೆಯ ಬಾಗಿಲು ಅಥವಾ ಕಿಡಕಿಗಳು ಸೇರಿ ಎಲ್ಲವೂ ಯಥಾಸ್ಥಿತಿಯಲ್ಲಿದ್ದರೂ ಕಳ್ಳತನ ನಡೆದಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ನಡುವೆ ಮೇ 23ರಂದು ಸಂಜೆ ಸುಮಾರು 4.30ರ ವೇಳೆ ಪ್ರಕರಣಕ್ಕೆ ತಿರುವು ಸಿಕ್ಕಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆರ್ಥಿಕ ಅಪರಾಧಗಳ ಭಾರಿ ಏರಿಕೆ; ಪ್ರತಿ 2.5 ಗಂಟೆಗೆ ದಾಖಲಾಗ್ತಿದೆ ಒಂದು ಆರ್ಥಿಕ ವಂಚನೆ ಕೇಸ್!

ಆರೋಪಿ ಯಾರೆಂಬುದು ಗೊತ್ತಾಗಿದ್ದೇಗೆ?

ಪ್ರಕಾಶ್ ಅವರ ಪತ್ನಿ ಮತ್ತು ಕಿರಿಯ ಪುತ್ರಿ ದಂತ ಚಿಕಿತ್ಸೆಗೆ ತೆರಳಿದ್ದ ವೇಳೆ, ಮನೆಯಲ್ಲಿ ಒಬ್ಬಳೇ ಇದ್ದ ಹಿರಿಯ ಪುತ್ರಿಗೆ ಮಾಸ್ಟರ್ ಬೆಡ್‌ರೂಮ್​​ ಕಡೆಯಿಂದ ಶಬ್ದ ಕೇಳಿಸಿದೆ. ಹೀಗಾಗಿ ಅನುಮಾನಗೊಂಡು ಆಕೆ ಹೋಗಿ ನೋಡಿದಾಗ ಯೋಗೇಶ್ ಮನೆಯ ಮುಖ್ಯ ಬಾಗಿಲಿನ ಡುಪ್ಲಿಕೇಟ್ ಕೀ ಬಳಸಿ ಒಳನುಗ್ಗಿ, ಚಿನ್ನಾಭರಣಗಳಿದ್ದ ಡ್ರಾಯರ್ ತೆರೆಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಪ್ರಕಾಶ್ ಅವರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಯೋಗೇಶ್ ಹೇಳಿದ್ದಾನೆ. ಕುಟುಂಬದವರು ಮನೆಗೆ ಬಂದು ವಿಚಾರಿಸಿದಾಗ ಆತ ಮೌನವಾಗಿದ್ದ. ಆದರೆ ಪೊಲೀಸರಿಗೆ ಕರೆ ಮಾಡುವುದಾಗಿ ಪ್ರಕಾಶ್ ಹೇಳುತ್ತಿದ್ದಂತೆ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕುಟುಂಬದವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಯೋಗೇಶ್ ಡುಪ್ಲಿಕೇಟ್ ಕೀ ಬಳಸಿ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ದೃಶ್ಯಗಳು ಪತ್ತೆಯಾಗಿವೆ. ಕಳುವಾದ ಚಿನ್ನಾಭರಣಗಳಲ್ಲಿ 24 ಗ್ರಾಂ ಹಾರ, 6 ಗ್ರಾಂ ಉಂಗುರ, 24 ಗ್ರಾಂ ಬಳೆಗಳು, 12 ಗ್ರಾಂ ಚಿನ್ನದ ನಾಣ್ಯ, 16 ಗ್ರಾಂ ಸರ ಹಾಗೂ 64 ಗ್ರಾಂ ಮಾಂಗಲ್ಯ ಸರ ಸೇರಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:48 pm, Tue, 26 May 26

Follow Us
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು