
ಮೈಸೂರು: ಹಲವು ಪ್ರಕರಣಗಳಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ (Police Department) ಬೇಕಾಗಿರುವ ಸ್ಯಾಂಟ್ರೋ ರವಿ (Santro Ravi) ರಾಜ್ಯ ಸರ್ಕಾರಕ್ಕೆ (Karnataka Government) ಮತ್ತು ಪೊಲೀಸ್ ಇಲಾಖೆ ತೆಲೆನೋವಾಗಿ ಪರಿಣಮಿಸಿದ್ದಾನೆ. ಪೊಲೀಸ್ ಇಲಾಖೆ ಸ್ಯಾಂಟ್ರೋ ರವಿಗಾಗಿ ಹುಡುಕಾಟ ನಡೆಸುತ್ತಿದ್ದು, ಇಂದು (ಜ.13) 11ನೇ ದಿನವೂ ಶೋಧ ಕಾರ್ಯ ಮುಂದುವರೆದಿದೆ. ಆದರೆ ಸ್ಯಾಂಟ್ರೋ ರವಿ ಪೊಲೀಸರ ಕೈಗೆ ಸಿಗದಂತೆ ಸ್ಥಳ ಬದಲಾವಣೆ ಮಾಡುತ್ತಿದ್ದಾನೆ. ಇದು ಪೊಲೀಸ್ ಇಲಾಖೆ ಸಂಕಷ್ಟ ತಂದಿದೆ. ಇನ್ನು ಸ್ಯಾಂಟ್ರೋ ರವಿ ಸ್ಥಳ ಬದಲಾವಣೆಗಾಗಿ ಫೋನ್ ಮೂಲಕ ಯಾರನ್ನೂ ಸಂಪರ್ಕಿಸುತ್ತಿಲ್ಲ, ಜೊತೆಗೆ ನಾಪತ್ತೆಯಾದ ದಿನದಿಂದ ಕುಟುಂಬಸ್ಥರನ್ನೂ ಸಂಪರ್ಕಿಸಿಲ್ಲ.
ಇದನ್ನೂ ಓದಿ: ಸ್ಯಾಂಟ್ರೋ ರವಿಗೆ ಸದ್ಯಕ್ಕಿಲ್ಲ ಜಾಮೀನು, ಕಾರು ಚಾಲಕ ಪೊಲೀಸರ ವಶಕ್ಕೆ
ಪೊಲೀಸರು ಆರೋಪಿ ಸ್ಯಾಂಟ್ರೋ ರವಿಗಾಗಿ ಹಲವು ಆಯಾಮಗಳಲ್ಲಿ ಹುಡುಕಾಟ ನಡೆಸುತ್ತಿದ್ದು, ವಾಟ್ಸಾಪ್ ಸ್ಟೇಟಸ್ನಲ್ಲಿದ್ದ ಯುವತಿಯರ ವಿಳಾಸ ಪತ್ತೆಗೆ ಮುಂದಾಗಿದ್ದಾರೆ. ಸದ್ಯ ಪೊಲೀಸರು ಹೊರ ರಾಜ್ಯದ ಯುವತಿಯರ ವಿಳಾಸವನ್ನು ಕಲೆ ಹಾಕುತ್ತಿದ್ದಾರೆ. ಹೀಗೆ ಸಂಪರ್ಕ ಸಿಕ್ಕ ಯುವತಿರನ್ನು ಪ್ರತ್ಯೇಕ ವರ್ಗ ಮಾಡಿದ್ದಾರೆ. ರವಿ ಯುವತಿಯರ ಸಂಪರ್ಕಕ್ಕೆ ಹೋಗಿರಬಹುದೆಂಬ ಅನುಮಾನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸ್ಯಾಂಟ್ರೋ ರವಿ ರಾಜ್ಯ ಸರ್ಕಾರದ ಹಲವು ಸಚಿವರ ಜೊತೆ ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರು ಪ್ರತಿಭಟನೆಗೆ ಸ್ಯಾಂಟ್ರೋ ಕಾರ್ ತರಿಸಿ, ಕಾರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಲೀಲೆಗಳು ಬಗೆದಷ್ಟು ಬೆಚ್ಚಿ ಬೀಳಿಸುವ ಕಥೆ: ಸ್ಯಾಂಟ್ರೋ ‘ಸರ್ವೀಸ್’ ಜಾಲದಲ್ಲಿ ನಟಿ, ಮಾಡೆಲ್ಗಳು..!
ಪ್ರತಿಭಟನೆಯಲ್ಲಿ ಸ್ಯಾಂಟ್ರೋ ರವಿ ಮತ್ತು ಬಿಜೆಪಿ ಸರ್ಕಾರಕ್ಕೆ ಲಿಂಕ್ ಇದೆ ಎಂದು ಆರೋಪಿಸಿದ್ದಾರೆ. ಹಾಗೇ ಸ್ಯಾಂಟ್ರೋ ಕಾರ್ ಮೇಲೆ ಸ್ಯಾಂಟ್ರೋ ರವಿ ಮುಖವಾಡ ಧರಿಸಿದ ವ್ಯಕ್ತಿಯನ್ನು ಕೂರಿಸಿ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ