AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೆನಾಡು, ಕರಾವಳಿ ಭಾಗದಲ್ಲಿ ಭೋರ್ಗರೆವ ಮಳೆ; ಇನ್ನೂ 2 ದಿನಗಳ ಕಾಲ ಕರ್ನಾಟಕದಲ್ಲಿ ವರುಣನ ಅಬ್ಬರ

ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರದೇಶಗಳಲ್ಲಿ ಕಡಿಮೆ ಒತ್ತಡವಿರುವ ಪ್ರದೇಶ ವಿಸ್ತರಿಸಿರುವುದರಿಂದಾಗಿ ಜುಲೈ 23ರ ವೇಳೆಗೆ ವಾಯುಭಾರ ಕುಸಿತ ಆಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಜುಲೈ 24ರವರಗೆ ವ್ಯಾಪಕ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.

ಮಲೆನಾಡು, ಕರಾವಳಿ ಭಾಗದಲ್ಲಿ ಭೋರ್ಗರೆವ ಮಳೆ; ಇನ್ನೂ 2 ದಿನಗಳ ಕಾಲ ಕರ್ನಾಟಕದಲ್ಲಿ ವರುಣನ ಅಬ್ಬರ
ಸಾಂಕೇತಿಕ ಚಿತ್ರ
TV9 Web
| Edited By: |

Updated on:Jul 21, 2021 | 7:46 AM

Share

ಬೆಂಗಳೂರು: ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ (Karnataka Rain). ಕಳೆದ ಹದಿನೈದು ದಿನಗಳಿಂದ ಠಿಕಾಣಿ ಹೂಡಿರುವ ಮಳೆರಾಯ ವಿರಾಮವನ್ನೇ ಪಡೆಯದೆ ನಿರಂತರವಾಗಿ ಸುರಿಯುತ್ತಿದ್ದು, ಶಿವಮೊಗ್ಗ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಅಬ್ಬರವನ್ನು ನೋಡಿ ಜನ ಚಿಂತಾಕ್ರಾಂತರಾಗಿದ್ದಾರೆ. ಆಗುಂಬೆ (Agumbe) ಸುತ್ತಮುತ್ತಲೂ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ಅಡಿಕೆ ಬೆಳೆಗಾರರಿಗೆ (Arecanut) ಈ ಬಾರಿಯೂ ಫಸಲಿನ ಬಗ್ಗೆ ಆತಂಕ ಆರಂಭವಾಗಿದೆ. ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿದ್ದು (Heavy Rain), ಜುಲೈ 23ರ ತನಕವೂ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆ (Weather Forecast) ಇದೆ.

ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆ ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಆ ಪ್ರದೇಶಕ್ಕನುಗುಣವಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಳೆಯ ವಾತಾವರಣವಿದ್ದು ನಿತ್ಯವೂ ಸುರಿವ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಪೂರ್ವ ಅರಬ್ಬಿ ಸಮುದ್ರದ ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರದೇಶಗಳಲ್ಲಿ ಕಡಿಮೆ ಒತ್ತಡವಿರುವ ಪ್ರದೇಶ ವಿಸ್ತರಿಸಿರುವುದರಿಂದಾಗಿ ಜುಲೈ 23ರ ವೇಳೆಗೆ ವಾಯುಭಾರ ಕುಸಿತ ಆಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಜುಲೈ 24ರವರಗೆ ವ್ಯಾಪಕ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಇನ್ನೂ ಎರಡು ಮೂರು ದಿನ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಜುಲೈ 23 ಅಥವಾ 24ರ ತನಕವೂ ಮಳೆಯ ವಾತಾವರಣ ಮುಂದುವರೆಯಲಿದ್ದು, ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮಂಗಳೂರು ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಆರ್ಭಟ ಸದ್ಯಕ್ಕೆ ನಿಲ್ಲುವುದು ಅನುಮಾನ ಎನ್ನಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಂದರೆ ಜುಲೈ 21, 22 ಮತ್ತು 23ರಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಸದರಿ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​​ ಘೋಷಣೆ ಮಾಡಲಾಗಿದೆ. ಇತ್ತ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಂದಿನಿಂದ ಎರಡು ದಿನ ಅಧಿಕ ಪ್ರಮಾಣದ ಮಳೆಯಾಗಲಿದೆ. ಇಂದು ಮತ್ತು ನಾಳೆ (ಜುಲೈ 21 ಮತ್ತು 22) ಈ ಭಾಗಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಜುಲೈ 23ರಂದು ಮಳೆ ಹೆಚ್ಚಾಗುವ ಸಂಭವ ಇರುವುದರಿಂದ ಆರೆಂಜ್​ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ಕಲಬುರ್ಗಿ, ಗದಗ ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗಲಿದ್ದು, ಜುಲೈ 22 ಮತ್ತು 23ರಂದು ಯೆಲ್ಲೋ ಅಲರ್ಟ್​ ನೀಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ನಿನ್ನೆ ಮಧ್ಯಾಹ್ನ ಕೆಲ ಭಾಗಗಳಲ್ಲಿ ಮಳೆಯ ಅಬ್ಬರ ಕೊಂಚ ಹೆಚ್ಚಾಗಿದೆ. ಸದ್ಯದ ಮಾಹಿತಿ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ವಾಹನ ಸವಾರರು, ಸಾರ್ವಜನಿಕರು ರಸ್ತೆಗಿಳಿಯುವ ಮುನ್ನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಜುಲೈ 23 ರವರೆಗೆ ವ್ಯಾಪಕ ಮಳೆಯಾಗಬಹುದು ಎಂದು ಅಂದಾಜಿಸಲಾಗಿದ್ದು, ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಭಾಗಗಳಲ್ಲೂ ಭಾರೀ ಮಳೆ ಸುರಿಯುವ ಸಂಭವವಿದೆ.

(Karnataka Weather Today Monsoon 2021 Heavy rain likely to be continued for another 3 days)

ಇದನ್ನೂ ಓದಿ: ಮಳೆಗಾಲದಲ್ಲಿ ಡೆಂಗ್ಯೂ ರೋಗ ಹರಡಬಹುದು ಎಚ್ಚರ! ರೋಗ ಬಾರದಂತೆ ತಡೆಗಟ್ಟುವ ಕ್ರಮಗಳನ್ನು ತಿಳಿಯಿರಿ 

Karnataka Dam Water Level: ವ್ಯಾಪಕ ಮುಂಗಾರು ಮಳೆ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

Published On - 7:42 am, Wed, 21 July 21

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!