ಬೆಂಗಳೂರು, ನ.11: ಹಿಂದೆಲ್ಲಾ ಹೆಣ್ಣುಮಕ್ಕಳಿಗೆ 22 ದಾಟ್ತು ಅಂದ್ರೆ ಸಾಕು ಮದುವೆ ಮಾಡಿ ಕಳಿಸಿಬಿಡುತ್ತಿದ್ದರು. ಹುಡುಗರಿಗೆ ಕೆಲಸ ಸಿಕ್ಕ ಕೂಡ್ಲೆ ಕಂಕಣಭಾಗ್ಯ ಕೂಡಿ ಬರ್ತಿತ್ತು. 26ಕ್ಕೆ ಕಾಲಿಡುವ ದಂಪತಿ ಕೈಯಲ್ಲೊಂದು ಮುದ್ದು ಕಂದಮ್ಮ ಕಿಲಕಿಲ ನಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಫ್ಯಾಮಿಲಿ ಲೈಫಿಗಿಂತ, ಕೆರಿಯರ್ ಮೋಸ್ಟ್ ಇಂಪಾರ್ಟ್ಟೆಂಟ್ ಅಂತ ಯುವ ಸಮೂಹ ಡಿಸೈಡ್ ಮಾಡಿದೆ. ಅದರಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿರುವ ಮಹಿಳೆಯರು 30 ದಾಟಿದ್ರೂ ಮದುವೆ ಬಗ್ಗೆ ಯೋಚಿಸ್ತಿಲ್ಲ. ಲೇಟ್ ಮ್ಯಾರೇಜ್ ಕಾಮನ್ ಆಗಿರೋ ಈ ಕಾಲದಲ್ಲಿ ಸ್ತನ ಕ್ಯಾನ್ಸರ್ (Breast Cancer) ಸಮಸ್ಯೆ ಕೂಡ ದ್ವಿಗುಣಗೊಂಡಿದೆ. ಈ ಬಗ್ಗೆ ಖುದ್ದು ಕಿದ್ವಾಯಿ ವೈದ್ಯರು (Kidwai Hospital) ಆತಂಕ ವ್ಯಕ್ತಪಡಿಸಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಮತ್ತೆ ಶೇ 5% ಸ್ತನ ಕ್ಯಾನ್ಸರ್ ಏರಿಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಇತ್ತೀಚ್ಚಿನ ದಿನಗಳಲ್ಲಿ ಯುವತಿಯರು ಮದುವೆಯಲ್ಲ ಯಾಕೆ.. ಮ್ಯಾರೇಜ್ ಇಸ್ ಬೋರ್ ಅಂತಾ ಲೈಫ್ ಬಿಂದಾಸ್ ಎಂಜಾಯ್ ಮಾಡಿಕೊಂಡು ಪಾಶ್ಚಿಮಾತ್ಯ ಜೀವನ ಶೈಲಿ ಹಾಗೂ ಡಯಟ್ ಪ್ಲಾನ್ ಮಾಡ್ಕೊಂಡು ಸ್ಲೀಮ್ ಆಗಿ ಲೈಪ್ ಕಲರ್ ಪುಲ್ ಮಾಡ್ಕೊಂಡು ಎಂಜಾಯ್ ಮಾಡ್ತಿದ್ದಾರೆ. ಸದ್ಯ ನೀವು ತಡವಾಗಿ ಮದುವೆಯಾಗುವ ಪ್ಲಾನ್ ಮಾಡ್ಕೊಂಡಿದ್ರೆ ಹುಷಾರ್ ಎಂದು ವೈದ್ಯರು ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೊಂಚ ಮರೆಯಾಗಿದ್ದ ಕ್ಯಾನ್ಸರ್ ಈಗ ಮತ್ತೆ ಮಹಿಳೆಯರ ಜೀವ ತಗೆಯುತ್ತಿದೆ.
ತಡವಾದ ಮದುವೆ, ಮಾರ್ಡನ್ ಜೀವನ ಶೈಲಿ, ಮದ್ಯ ಹಾಗು ಧೂಮಪಾನ ಹುಡಗಿಯರ ಸ್ತನ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮದ್ಯವಯಸ್ಸಿನ ಮಹಿಳೆಯರ ಜೀವ ಹಿಂಡುತ್ತಿದೆ ಸ್ತನ ಕ್ಯಾನ್ಸರ್. ಒತ್ತಡದ ಲೈಫ್ ನಿಂದ ಪಾರಾಗಲು ಟಿನೇಜ್ ಹುಡಗಿಯರು ನಾನಾ ಕಸರತ್ತು, ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಡವಾಗಿ ಮದುವೆಯಾಗುವುದು ಕೂಡಾ ಇತ್ತೀಚ್ಚಿನ ದಿನಗಳಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ ಎಂದು ಕಿದ್ವಾಯಿ ಆಸ್ಪತ್ರೆ ಆತಂಕದ ಸಂಗತಿಯನ್ನು ಹೊರ ಹಾಕಿದೆ. ರಾಜ್ಯದಲ್ಲಿ ಸದ್ಯ 2.30 ಲಕ್ಷ ಸಕ್ರಿಯ ಕ್ಯಾನ್ಸರ್ ಪ್ರಕರಣಗಳಿದ್ದು, ವಾರ್ಷಿಕ 87.5 ಸಾವಿರ ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ. ಇದರಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶೇ 5% ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿದೆ. ಜೊತೆಗೆ ಮಹಿಳೆಯರು ವಯಸ್ಸಾದ್ರೂ ಯಂಗ್ ಅ್ಯಂಡ್ ಬ್ಯೂಟಿಪುಲ್ ಆಗಿ ಕಾಣಲು ಪಾಶ್ಚಿಮಾತ್ಯ ಡಯಟ್ ಪ್ಲಾನ್ ಮೊರೆ ಹೋಗುತ್ತಿದ್ದು ಹಾರ್ಮೋನ್ ಟ್ರಾನ್ಸಪ್ಲೆಂಟ್ ಮಾಡಿಸಿಕೊಳ್ಳುವುದು ಈಗ ಮಹಿಳೆಯರ ಪ್ರಾಣ ತಗೆಯವ ಸ್ತನ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ ಬಗ್ಗೆ ಇರುವ 15 ತಪ್ಪು ಕಲ್ಪನೆಗಳಿವು
ಸಿಲಿಕಾನ್ ಸಿಟಿ ಬೆಂಗಳೂರಿನ ಮಹಿಳೆಯರಲ್ಲಿ ಕೊರೊನಾಕ್ಕೂ ಮೊದಲು ವರ್ಷಕ್ಕೆ 700 ರಿಂದ 750 ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಾ ಇದ್ದವು. ಆದರೆ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 1100ಕ್ಕೂ ಹೆಚ್ಚು ಸ್ತನ ಕೇಸ್ ಪತ್ತೆಯಾಗಿವೆ. ಅದರಲ್ಲೂ ಹೆಚ್ಚಾಗಿ ಮದ್ಯವಯಸ್ಸಿನ ಮಹಿಳೆಯರು 3ನೇ ಹಂತ ಅಥವಾ 4ನೇ ಹಂತ ಸ್ಥಿತಿಗಳಲ್ಲಿ ಸ್ತನದ ಕ್ಯಾನ್ಸರ್ ಪತ್ತೆಯಾಗಿರೋದು ಸಾಕಷ್ಟು ಸಾವಿಗೆ ಕಾರಣವಾಗುತ್ತಿದೆ. ಹೀಗಾಗಿ ಮಹಿಳೆಯರು ಪ್ರತಿ ತಿಂಗಳು ಒಂದು ಸರಿ ತಮ್ಮನ್ನು ತಾವು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ.
ಸ್ತನ ಕ್ಯಾನ್ಸರ್ಗೆ ಅಪಾಯಕಾರಿ ಅಂಶಗಳು ಯಾವವು?
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:49 pm, Sat, 11 November 23