ಸ್ನಾತಕೋತ್ತರ ಮತ್ತು ಕಾನೂನು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಿಸಿದ ಕೆಎಸ್ಆರ್ಟಿಸಿ – ಏನಿದರ ವಿವರ?
021-22ನೇ ಸಾಲಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್ವರೆಗೂ ವಿಸ್ತರಣೆಯಾದ ಹಿನ್ನಲೆ ಕೆಎಸ್ಆರ್ಟಿಸಿ (KSRTC) ನಿಗಮವು ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದೆ.
ಬೆಂಗಳೂರು: 2021-22ನೇ ಸಾಲಿನ ಸ್ನಾತಕೋತ್ತರ (Post Graduate) ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್ವರೆಗೂ ವಿಸ್ತರಣೆಯಾದ ಹಿನ್ನಲೆ ಕೆಎಸ್ಆರ್ಟಿಸಿ (KSRTC) ನಿಗಮವು ವಿದ್ಯಾರ್ಥಿಗಳ ಉಚಿತ (Free) ಬಸ್ ಪಾಸ್ (Bus Pass) ಅವಧಿಯನ್ನು ವಿಸ್ತರಿಸಿದೆ. ಕಾನೂನು (LAW) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್ವರೆಗೂ ನಡೆಯಲಿದೆ. ಆದರೆ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿ ಏಪ್ರಿಲ್ ತಿಂಗಳಿಗೆ ಕೊನೆಯಾಗಲಿದೆ. ಹೀಗಾಗಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದ್ದು, ವಿದ್ಯಾರ್ಥಿಗಳು ಕಾಲೇಜು ಅಡ್ಮಿಷನ್ ರಶೀದಿ, ಹಳೇ ಪಾಸ್ ತೋರಿಸಿ ಬಸ್ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಕೆಎಸ್ಆರ್ಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.