ಬಂದ್​ನಿಂದ ಬೆಂಗಳೂರಿಗೆ ಅಪಮಾನ ಮಾಡುತ್ತಿಲ್ಲ: ಡಿಕೆ ಶಿವಕುಮಾರ್​ ವಿರುದ್ಧ ಕುರುಬೂರು ಶಾಂತಕುಮಾರ್‌ ವಾಗ್ದಾಳಿ

ಬಂದ್​ನಿಂದ ನಾವು ಬೆಂಗಳೂರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿಲ್ಲ. ಡಿಸಿಎಂ ಡಿಕೆ ಶಿವಕುಮಾರ್​ ಹೋರಾಟಗಾರರ ವಿರುದ್ಧ ಲಘುವಾಗಿ ಮಾತನಾಡಿದ್ದು, ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ಅವರ ಹುದ್ದೆಗೆ ತಕ್ಕ ಹೇಳಿಕೆಯಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್​​ ವಾಗ್ದಾಳಿ ಮಾಡಿದ್ದಾರೆ.

ಬಂದ್​ನಿಂದ ಬೆಂಗಳೂರಿಗೆ ಅಪಮಾನ ಮಾಡುತ್ತಿಲ್ಲ: ಡಿಕೆ ಶಿವಕುಮಾರ್​ ವಿರುದ್ಧ ಕುರುಬೂರು ಶಾಂತಕುಮಾರ್‌ ವಾಗ್ದಾಳಿ
ಕುರುಬೂರು ಶಾಂತಕುಮಾರ್‌, ಡಿಕೆ ಶಿವಕುಮಾರ್​​
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on:Sep 24, 2023 | 7:31 PM

ಬೆಂಗಳೂರು, ಸೆಪ್ಟೆಂಬರ್​ 24: ಬೆಂಗಳೂರು ಘನತೆಗೆ ಕುಂದು ಉಂಟು ಮಾಡುತ್ತೇವೆ ಅಂತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar)​ ಹೇಳುತ್ತಿದ್ದಾರೆ. ಅವರ ಹುದ್ದೆಗೆ ತಕ್ಕ ಹೇಳಿಕೆಯಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್​​ ವಾಗ್ದಾಳಿ ಮಾಡಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ‘ಬೆಂಗಳೂರು ಬಂದ್’ ವಿಚಾರವಾಗಿ ನಡೆದ ಹೋರಾಟಗಾರರ ಸಭೆ ಬಳಿಕ ಮಾತನಾಡಿದ ಅವರು, ಬಂದ್​ನಿಂದ ನಾವು ಬೆಂಗಳೂರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿಲ್ಲ. ಡಿಸಿಎಂ ಡಿಕೆ ಶಿವಕುಮಾರ್​ ಹೋರಾಟಗಾರರ ವಿರುದ್ಧ ಲಘುವಾಗಿ ಮಾತನಾಡಿದ್ದು, ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದಿದ್ದಾರೆ.

ರಾಜ್ಯದ ಜನರಿಗಾಗಿ ಹೋರಾಟ ಮಾಡುತ್ತಿದ್ದೇವೆ

ಬೆಂಗಳೂರು ಬಂದ್ ಬಗ್ಗೆ ನೀರಾವರಿ ಸಚಿವರು ಲಘುವಾಗಿ ಮಾತಾಡುತ್ತಾರೆ. ಸರ್ಕಾರ ನಮ್ಮ‌ ಧ್ವನಿಯಾಗಿರಬೇಕು. ರಾಜ್ಯದ ಜನರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಕುಡಿಯುವ ನೀರು ಹಾಗೂ ಆ ಜನರ ಸಮಸ್ಯೆ ಪರವಾಗಿ ನಿಂತಿದ್ದೀವಿ. ಈ ಬಗ್ಗೆ ಸರ್ಕಾರ ಬಹಳ ಗಂಭೀರವಾಗಿ ಯೋಚನೆ ಮಾಡಬೇಕಿತ್ತು. ಪದೇಪದೆ ಹೋರಾಟಗಾರರ ಬಗ್ಗೆ ಲಘುವಾಗಿ ಮಾತಾಡುತ್ತಿದ್ದಾರೆ. ಡಿಕೆ ಶಿವಕುಮಾರ್​ ನೀವು ಕೂಡ ಮೇಕೆದಾಟು ಹೋರಾಟ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸೆ.26ರಂದು ಬೆಂಗಳೂರು ಬಂದ್ ಫಿಕ್ಸ್, ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ವಿವರ

ನಾವು ಹೋರಾಟಗಾರರು ಜನರ ಜೀವನಾಡಿಯಾಗಿ ಕೆಲಸ ಮಾಡುತ್ತಿದ್ದೇವೆ. ನೀವು ಎಚ್ಚೆತ್ತುಕೊಂಡು ಇಂತಹ ಹೇಳಿಕೆ ಕೊಡುವುದನ್ನು ಬಿಡಬೇಕು. ಸಿಎಂ ಸಿದ್ದರಾಮಯ್ಯನವರು ಒಂಥರಾ ಹೇಳಿಕೆ ಕೊಡುತ್ತಾರೆ. ಹೋರಾಟ ಮಾಡಲು ಬೇಡ ಅಂತ ಹೇಳಲು ಆಗೋದಿಲ್ಲ ಅಂತಾರೆ. ಹೋರಾಟ ಅವರ ಹಕ್ಕು, ನಾನು ಪ್ರತಿಕ್ರಿಯೆ ಕೊಡಲ್ಲ ಅಂದಿದ್ದಾರೆ. ಇವರು ಬೆಂಗಳೂರು ಘನತೆ ಕಳೆಯುತ್ತೀರಾ ಅಂತ ಹೇಳಿಕೆ ಕೊಡುತ್ತಾರೆ. ಒಬ್ಬ ಮಂತ್ರಿಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸೆ.26ರ ಬೆಂಗಳೂರು ಬಂದ್​​​ ಹಿಂಪಡೆಯಲು ಕರವೇ ಮನವಿ, ಒಂದೇ ಬಾರಿ ರಾಜ್ಯ ಬಂದ್​ಗೆ ಪ್ಲಾನ್

ಅಂದು ಡಾ.ರಾಜ್​ಕುಮಾರ್ ಗೋಕಾಕ್ ಚಳವಳಿ ನೇತೃತ್ವ ವಹಿಸಿದ್ದರು. ಆದರೆ ಮಂಗಳವಾರ ಬೆಂಗಳೂರು ಬಂದ್​ನಲ್ಲಿ ಎಲ್ಲರೂ ಮುಖಂಡರೇ. ಇದು ನೇತೃತ್ವವಿಲ್ಲದ ಹೋರಾಟ, ಈ ಬಂದ್ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ.

ಕಾವೇರಿ ನೀರಿಗಾಗಿ ಬೆಂಗಳೂರು ಬಂದ್‌ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದ್ದು, ಸೆಪ್ಟೆಂಬರ್‌ 26 ಮಂಗಳವಾರದಂದು ಬೆಂಗಳೂರು ಬಂದ್ ಫಿಕ್ಸ್ ಆಗಿದೆ. ನಿನ್ನೆ ಎಲ್ಲಾ ಸಂಘ ಸಂಸ್ಥೆಗಳು ಸೇರಿ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದವು. ಮಂಗಳವಾರ ಬಂದ್‌ಗೆ ಸಾಕಷ್ಟು ಸಂಘ ಸಂಸ್ಥೆಗಳು ಬೆಂಬಲ ಕೊಟ್ಟಿವೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:30 pm, Sun, 24 September 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್