ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್​ ಹಿಂತಿರುಗಿಸಿ ಕರ್ತವ್ಯ ನಿಷ್ಠೆ ಮೆರೆದ ಹೆಡ್​ಕಾನ್ಸ್ ಟೇಬಲ್

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ದಂಪತಿಗೆ ಕರೆ ಮಾಡಿ ಹಿಂತಿರುಗಿಸುವ ಮೂಲಕ ಹೆಡ್​ಕಾನ್ಸ್ ಟೇಬಲ್ ಹೆಚ್ ಸಿ ಮಲ್ಲಿಕಾರ್ಜುನ​ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ನಗರದ ಕೋರಮಂಗಲದ ವಾಟರ್ ಟ್ಯಾಂಕ್ ಸಿಗ್ನಲ್ ಬಳಿ ಘಟನೆ ನಡೆದಿದೆ.

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್​ ಹಿಂತಿರುಗಿಸಿ ಕರ್ತವ್ಯ ನಿಷ್ಠೆ ಮೆರೆದ ಹೆಡ್​ಕಾನ್ಸ್ ಟೇಬಲ್
ಚಿನ್ನಾಭರಣ ಇದ್ದ ಬ್ಯಾಗ್ ಬಿಟ್ಟು ಹೋಗಿದ್ದ ದಂಪತಿ
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on:Jan 17, 2024 | 5:09 PM

ಬೆಂಗಳೂರು, ಜನವರಿ 17: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ಬಿಟ್ಟು ಹೋಗಿದ್ದ ದಂಪತಿಗೆ ಕರೆ ಮಾಡಿ ಹಿಂತಿರುಗಿಸುವ ಮೂಲಕ ಹೆಡ್​ಕಾನ್ಸ್ ಟೇಬಲ್ (Head Cons table) ಹೆಚ್​.ಸಿ ಮಲ್ಲಿಕಾರ್ಜುನ​ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ನಗರದ ಕೋರಮಂಗಲದ ವಾಟರ್ ಟ್ಯಾಂಕ್ ಸಿಗ್ನಲ್ ಬಳಿ ಘಟನೆ ನಡೆದಿದೆ. ಇಂದು ಬೆಳಗ್ಗೆ ಬಸ್​ನಲ್ಲಿ ಬೆಂಗಳೂರಿಗೆ ಪ್ರವೀಣ್ ಹಾಗೂ ಭಾವನಿ ದಂಪತಿ ಬಂದಿದ್ದಾರೆ. ಕೋರಮಂಗಲ ವಾಟರ್ ಟ್ಯಾಂಕ್ ಸಿಗ್ನಲ್​ನಲ್ಲಿ ಬಸ್ ಇಳಿದಿದ್ದಾರೆ. ಈ ವೇಳೆ ಮನೆ ಹೋಗುವ ಆತುರದಲ್ಲಿ ಬ್ಯಾಗ್ ಬಿಟ್ಟಿದ್ದಾರೆ.

ಬಳಿಕ ಅಲ್ಲೇ ಡ್ಯೂಟಿಯಲ್ಲಿ ಇದ್ದ ಆಡುಗೋಡಿ ಸಂಚಾರಿ ಠಾಣೆಯ ಹೆಡ್​ಕಾನ್ಸ್ ಟೇಬಲ್ ಹೆಚ್ ಸಿ ಮಲ್ಲಿಕಾರ್ಜುನ ನೋಡಿದ್ದಾರೆ. ಬಳಿಕ ಆ ಬ್ಯಾಗ್ ಓಪನ್ ಮಾಡಿ ನೋಡಿದಾಗ ಚಿನ್ನಾಭರಣ ಇರೋದು ಗೊತ್ತಾಗಿದೆ. ಅದರಲ್ಲೇ ಇದ್ದ ನಂಬರ್​ಗೆ ಕರೆ ಮಾಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮನ ಸಾಕ್ಷಾತ್ಕಾರಕ್ಕೆ ಹಾರೋಹಳ್ಳಿಯ ಕಲ್ಲು ಅಷ್ಟೇ ಅಲ್ಲ; ಮಣ್ಣು ಸಹ ಬಳಕೆಯಾಗಿದೆ!

ಅದು ಕೊಡಗಿನ ಪ್ರವೀಣ್ ಸಂಬಂಧಿಕ ಸೋಮು ನಂಬರ್ ಆಗಿತ್ತು. ಕರೆ ಮಾಡಿ ಸೋಮು ಅವರಿಗೆ ಮಾಹಿತಿ ನೀಡಿದ್ದ ಹೆಡ್ ಕಾನ್ಸ್ ಸ್ಟೇಬಲ್ ಮಲ್ಲಿಕಾರ್ಜುನ ಬಳಿಕ ಬ್ಯಾಗ್ ಬಿಟ್ಟು ಹೋಗಿರುವ ವಿಷಯ ಪ್ರವೀಣ್​ಗೆ ತಿಳಿಸಿದ್ದಾರೆ. ಪ್ರವೀಣ್ ಬಂದು ಚಿನ್ನಾಭರಣ ಇದ್ದ ಬ್ಯಾಗ್ ಪಡೆದುಕೊಂಡಿದ್ದಾರೆ. ಆಡುಗೋಡಿ ಸಂಚಾರಿ ಠಾಣೆ ಹೆಡ್ ಕಾನ್ಸ್ ಟೇಬಲ್ ಮಲ್ಲಿಕಾರ್ಜುನಗೆ ದಂಪತಿ ಧನ್ಯವಾದ ತಿಳಿಸಿದ್ದಾರೆ. ಹೆಚ್​ಸಿ ಮಲ್ಲಿಕಾರ್ಜುನ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ದುಬಾರಿ ಐಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್​​

ದುಬಾರಿ ಐಫೋನ್ ಅನ್ನು ಪೊಲೀಸರು ಅದರ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿರುವಂತಹ ಘಟನೆ ಕೊಡಗು ಜಿಲ್ಲೆ‌ಯ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲ್ಲಿನಲ್ಲಿ ನಡೆದಿದ್ದು, ಠಾಣೆಯ ಕಾನ್ಸ್‌ಟೇಬಲ್‌ ರಾಘವೇಂದ್ರ ಈ ಸ್ತುತ್ಯರ್ಹ ಕಾರ್ಯವೆಸಗಿದ್ದರು.

ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಠಾಣೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ

ಭಾನುವಾರ ಡಿಸೆಂಬರ್​ 3 ರಂದು ಆನೆಚೌಕೂರು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್‌ ರಾಘವೇಂದ್ರ, ಈ ಸಂದರ್ಭ ರಸ್ತೆ ಬದಿ ದುಬಾರಿ ಬೆಲೆಯ ಐಫೋನ್ ಒಂದು ಅವರ ಕಣ್ಣಿಗೆ ಬಿದ್ದಿತ್ತು. ಐಫೋನ್​ನಲ್ಲಿ‌ ಬಹಳಷ್ಟು ಮಿಸ್ಡ್​​​ ಕಾಲ್​ಗಳಿದ್ದವು. ಅದರಲ್ಲಿ ಅತಿ ಹೆಚ್ಚು ಮಿಸ್ಡ್​ ಕಾಲ್‌ ಬಂದ ನಂಬರ್​ಗೆ ರಾಘವೇಂದ್ರ ಕರೆ ಮಾಡಿದಾಗ ಆ ಮೊಬೈಲ್​ನ​ ಮಾಲೀಕ‌ ಕೇರಳ‌ ಮೂಲದ ಸಿಜೋಮ್ ಎಂಬುದು ಗೊತ್ತಾಗಿತ್ತು. ಬಳಿಕ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ರಾಘವೇಂದ್ರ ಮೊಬೈಲ್ ಹಿಂದಿರುಗಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:08 pm, Wed, 17 January 24