AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Attica Gold: ಕಳ್ಳತನ ಚಿನ್ನ ಖರೀದಿ, ವರದಕ್ಷಿಣೆ ಕಿರುಕುಳ ಆರೋಪ ಎರಡೂ ಸುಳ್ಳು: ಅಟ್ಟಿಕಾ ಬಾಬು ಸ್ಪಷ್ಟನೆ

ಮೊನ್ನೆ ಆಂದ್ರ ಪೊಲೀಸರು ಕಳ್ಳತನ ಬಂಗಾರ ಕೇಸ್ ನಲ್ಲಿ ಬಂಧಿಸಿದ್ದಾರೆ ಎನ್ನಲಾಗ್ತಿತ್ತು, ಎರಡನೇ ಪತ್ನಿ ದೂರು ಆಧಾರದ ಮೇಲೆ ಬಂಧನ ಆಗಿದೆ ಎನ್ನಲಾಗ್ತಿತ್ತು, ಅದು ಕೂಡ ಸುಳ್ಳು ಎಂದು ಅಟ್ಟಿಕಾ ಬಾಬು ಹೇಳಿದ್ದಾರೆ.

Attica Gold: ಕಳ್ಳತನ ಚಿನ್ನ ಖರೀದಿ, ವರದಕ್ಷಿಣೆ ಕಿರುಕುಳ ಆರೋಪ ಎರಡೂ ಸುಳ್ಳು: ಅಟ್ಟಿಕಾ ಬಾಬು ಸ್ಪಷ್ಟನೆ
ಅಟ್ಟಿಕಾ ಬಾಬು
TV9 Web
| Edited By: |

Updated on:Dec 19, 2022 | 1:14 PM

Share

ಬೆಂಗಳೂರು: ಆಂಧ್ರ ಪ್ರದೇಶದ ಪೊಲೀಸರು ಕಳ್ಳತನ ಬಂಗಾರ ಖರೀದಿ ಪ್ರಕರಣದಲ್ಲಿ ಬಂಧಿಸಿದ್ದಾರೆ ಎನ್ನಲಾಗ್ತಿತ್ತು, ಎರಡನೇ ಪತ್ನಿ ದೂರು ಆಧಾರದ ಮೇಲೆ ಬಂಧನ ಆಗಿದೆ ಎನ್ನಲಾಗ್ತಿತ್ತು. ಆದರೆ ಈ ಎರಡು ಆರೋಪಗಳು ಸುಳ್ಳು ಎಂದು ಅಟ್ಟಿಕಾ ಬಾಬು (Attica Babu) ಅವರು ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿರುವ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ (Press Meet) ನಡೆಸಿ ಮಾತನಾಡಿದ ಅವರು, ಮೂವರು ಮಕ್ಕಳನ್ನು ಸಾಕಿಕೊಂಡಿದ್ದೆ. ಅಣ್ಣನ ಮಗನನ್ನು ನಾನು ಎಂಬಿಬಿಎಸ್ ಮಾಡಿಸಿದ್ದೆ. ಮೇಯರ್ ಮಗಳಿಗೆ ಅಣ್ಣನ ಮಗನನ್ನ ಮದುವೆ ಮಾಡಿಸಿದ್ದೆ. ಆದರೆ ಅವರ ಕುಟುಂಬದಲ್ಲಿ ವೈಮನಸ್ಸು ಉಂಟಾಗಿತ್ತು. ಅಣ್ಣನ ಮಗನ ಪತ್ನಿ ವರದಕ್ಷಿಣೆ ಕಿರುಕುಳ (Dowry harassment) ಪ್ರಕರಣ ದಾಖಲಿಸಿದ್ದರು. ದೂರಿನಲ್ಲಿ ನನ್ನ ಹಾಗೂ ನನ್ನ ಪತ್ನಿ, ಮಕ್ಕಳ‌ ಹೆಸರನ್ನು ಉಲ್ಲೇಖಿಸಿದ್ದರು. ಹಾಗಾಗಿ ಅನಂತಪುರದಿಂದ ಪೊಲೀಸರು ಬಂದು ಜೊತೆಗೆ ಬರಬೇಕು ಅಂತಾ ಕರೆದುಕೊಂಡು ಹೋದರು, ನಾನು ಕುಟುಂಬ ಸಮೇತವಾಗಿ ಉತ್ತರಿಸಿ ಬಂದಿದ್ದೇನೆ ಎಂದರು.

ಏನಿದು ಪ್ರಕರಣ?

ಕಳ್ಳರಿಂದ ಕದ್ದ ಚಿನ್ನ ಪಡೆದುಕೊಳ್ಳುತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರ ಸಹಯದಿಂದ ಅಟ್ಟಿಕಾ ಬಾಬು ಅವರನ್ನು ಹೈಗ್ರೌಂಡ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ಆಂಧ್ರದ ಅನಂತಪುರ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಅನಂತಪುರ ಬಳಿಯ ಯಲ್ಲೂರಿನ ಶೇಕ್ ಮೀನಾಜ್ ಎಂಬ ಮಹಿಳೆ ಆಯೂಬ್ ಅಲಿಯಾಸ್ ಅಟ್ಟಿಕಾ ಬಾಬು ತನ್ನನ್ನು ಮದುವೆ ಆಗಿ ಮೋಸ ಮಾಡಿದ್ದಾನೆ. ಡಿಸೆಂಬರ್ 12ರಂದು ಯಲ್ಲೂರಿಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ ಮನೆಯಲ್ಲಿ ಇದ್ದ ವಸ್ತುಗಳನ್ನು ದ್ವಂಸ ಮಾಡಿದ್ದಾರೆ. ಕೊಲೆಗೆ ಯತ್ನ ಮಾಡಲಾಗಿದೆ ಎಂದು ದೂರು ನೀಡಿದ್ದರು.

ಇದನ್ನೂ ಓದಿ: ಮೈಸೂರಿನ ಆ ಸುಂದರಿ ಮೊದಲು ಸ್ಪಾ ಪಾರ್ಲರ್​ ತೆಗೆದಳು, ಅದರಿಂದ ಏನೂ ಗಿಟ್ಟಲ್ಲ ಅಂತಾ ವೇಶ್ಯಾವಾಟಿಕೆ ನಡೆಸಿದಳು!

ಈ ದೂರಿನ ಅನ್ವಯ ಪೊಲೀಸರು IPC section 448, 342, 307, 386, 427, 498A, 506 ಮತ್ತು ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಿಸಿದ್ದರು. ಅದರಂತೆ ಪೊಲೀಸರು ಬೆಂಗಳೂರಿಗೆ ಆಗಮಿಸಿ ಬಾಬು ಅವರನ್ನು ಬಂಧಿಸಿದ್ದರು. ಈ ಹಿಂದೆ ಕದ್ದ ಬಂಗಾರ ಖರೀದಿ ಮಾಡಿದ್ದ ಆರೋಪದಲ್ಲೂ ಹಲವಾರು ಬಾರಿ ಅಟ್ಟಿಕಾ ಬಾಬು ಅರೆಸ್ಟ್ ಆಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Mon, 19 December 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?