ಮೈಸೂರಿನ ಆ ಸುಂದರಿ ಮೊದಲು ಸ್ಪಾ ಪಾರ್ಲರ್ ತೆಗೆದಳು, ಅದರಿಂದ ಏನೂ ಗಿಟ್ಟಲ್ಲ ಅಂತಾ ವೇಶ್ಯಾವಾಟಿಕೆ ನಡೆಸಿದಳು!
ಸವಿತ ಸಾಮಾಜಿಕ ಜಾಲತಾಣದ ಮೂಲಕ ಶ್ರೀಮಂತರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ನಂತರ ಅವರ ಮೊಬೈಲ್ ನಂಬರ್ ಪಡೆದು ಚಾಟ್ ಆರಂಭಿಸುತ್ತಿದ್ದಳು. ಸ್ನೇಹ ಸಲುಗೆ ನಂತರ ಆಕೆ ತನ್ನ ಅಸಲಿ ಕರಾಮತ್ತು ಆರಂಭಿಸುತ್ತಿದ್ದಳು.
ಉದರ ನಿಮಿತ್ತಂ ಬಹುಕೃತ ವೇಷಂ ಅನ್ನೋ ಮಾತನ್ನು ನೀವೆಲ್ಲಾ ಕೇಳಿರ್ತೀರಾ! ಆದ್ರೆ ಮೈಸೂರಿನ (Mysore) ಮಹಿಳೆಯೊಬ್ಬಳು (woman) ಬ್ಲಾಕ್ ಮೇಲ್‌ಗಾಗಿ ಬಹುಕೃತ ವೇಷ ಹಾಕುತ್ತಿದ್ದಳು. ಇವಳು ತನ್ನ ವೇಷಕ್ಕೆ ಮರುಳಾದವರಿಂದ ಲಕ್ಷ ಲಕ್ಷ ಕೀಳುತ್ತಿದ್ದಳು. ಇದೀಗ ಖಾಕಿ ಬಲೆಗೆ ಬಿದ್ದಿದ್ದಾಳೆ. ಈಕೆಯ ಅಂದ ಚೆಂದ ಬೆಡಗು ಬಿನ್ನಾಣ ನೋಡಿದವರು.. ಅರರೆ ಎಂಥಾ ಸುಂದರಿ! ಅಂತಾ ಅಂದುಕೊಂಡು ಈಕೆಯ ಸಹವಾಸಕ್ಕೆ ಬಿದ್ದರೆ ನಿಮ್ಮ ಕಥೆ ಮುಗಿದಂಗೆ. ನಿಮ್ಮ ಬೆನ್ನು ಬಿದ್ದು ಲಕ್ಷ ಲಕ್ಷ ಹಣ ಕಕ್ಕಿಸೋದು ಖಂಡಿತಾ. ಅಂದ್ಹಾಗೆ ಈಕೆ ಸವಿತಾ ಅಲಿಯಾಸ್ ಮಂಜುಳಾ ಯಾದವ್. ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ನಿವಾಸಿ. ಮೈಸೂರಿನಲ್ಲಿ ವಿಜಯನಗರದಲ್ಲಿ ಸ್ಪಾ ನಡೆಸುತ್ತಿದ್ದಳು. ಬರೀ ಸ್ಪಾ ನಡೆಸುತ್ತಿದ್ದರೆ ಏನೂ ಗಿಟ್ಟಲ್ಲ ಎಂದು ಸ್ಪಾ (spa) ಹೆಸರಲ್ಲಿ ಆಕೆ ಮಾಡುತ್ತಿದ್ದಳು ಪಕ್ಕಾ ಬ್ಲ್ಯಾಕ್ ಮೇಲ್ (blackmail)!
ಹೌದು ಸವಿತ ಸಾಮಾಜಿಕ ಜಾಲತಾಣದ ಮೂಲಕ ಶ್ರೀಮಂತರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ನಂತರ ಅವರ ಮೊಬೈಲ್ ನಂಬರ್ ಪಡೆದು ಚಾಟ್ ಆರಂಭಿಸುತ್ತಿದ್ದಳು. ಸ್ನೇಹ ಸಲುಗೆ ನಂತರ ಆಕೆ ತನ್ನ ಅಸಲಿ ಕರಾಮತ್ತು ಆರಂಭಿಸುತ್ತಿದ್ದಳು. ಮೊಬೈಲ್‌ನಲ್ಲಿ ತನ್ನ ಅರೆ ನಗ್ನ ಪೋಟೋ ಕಳುಹಿಸೋದು, ವಿಡಿಯೊ ಕಾಲ್ ಮಾಡಿ ಬೆತ್ತಲಾಗೋದು ಮಾಡುತ್ತಿದ್ದಳು. ಇದಾದ ನಂತರ ತನ್ನ ಕಷ್ಟ ಹೇಳಿಕೊಂಡು ವಾಪಸ್ಸು ಕೊಡುತ್ತೀನಿ ಅಂತಾ ಅವರಿಂದ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಳು. ಹಣ ಪಡೆದ ನಂತರ ಮುಗಿಯಿತು ಹಣ ಕೊಡುವ ಗೋಜಿಗೆ ಹೋಗುತ್ತಿರಲಿಲ್ಲ.
Also Read: ವೇಶ್ಯಾವಾಟಿಕೆಯೂ ಒಂದು ವೃತ್ತಿ, ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಹಣ ಕೇಳಿದರೆ ಪೋಟೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಈ ಸಂಬಂಧ ಈಕೆಯಿಂದ ಮೋಸ ಹೋದ ಮೈಸೂರಿನ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ರು. ಈಕೆಯ ಬೆನ್ನು ಹತ್ತಿದ ಪೊಲೀಸರಿಗೆ ಈಕೆಯ ಮತ್ತಷ್ಟು ಕರಾಳಮುಖಗಳು ಬಯಲಾಗಿದೆ. ಈಕೆ ತನ್ನ ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಹಿತಿ ಸಿಕ್ಕಿದೆ.
ತಕ್ಷಣ ಪೊಲೀಸರು ಸವಿತಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೆಲ್ಲಾ ಏನೇ ಇರಲಿ ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಬಗ್ಗೆ ಎಚ್ಚರವಾಗಿರೋದು ಕ್ಷೇಮಕರ. ಸುಂದರಿ, ಮೈ ಮಾಟ ಅಂತಾ ಹಿಂದೆ ಹೋದ್ರೆ ಪಂಗನಾಮ ಖಂಡಿತಾ.
ವರದಿ: ರಾಮ್, ಟಿವಿ 9, ಮೈಸೂರು
Also Read: ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಯಿಂದ ಭೂ ಒತ್ತುವರಿ? ಕೋರ್ಟ್ ಆದೇಶದಂತೆ ಸರ್ವೆ, ಆರೋಪ ನಿಜ ಎಂದ ತಹಶೀಲ್ದಾರ್