ಎರಡನೇ ಕೇಸಿನಲ್ಲಿಯೂ ಜಾಮೀನು ಮಂಜೂರು, ವಕೀಲ ಜಗದೀಶ್ ಜೈಲಿನಿಂದ ಶೀಘ್ರದಲ್ಲೇ ಬಿಡುಗಡೆ

| Updated By: ಆಯೇಷಾ ಬಾನು

Updated on: Mar 07, 2022 | 5:36 PM

ನಿನ್ನೆ ವಕೀಲ ಜಗದೀಶ್ಗೆ ನಗರದ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದೀಗ, ಕೊಡಿಗೇಹಳ್ಳಿ ಠಾಣೆ ಪೊಲೀಸರು ದಾಖಲಿಸಿದ್ದ ಜಾತಿ ನಿಂದನೆ ಕೇಸ್ನಲ್ಲಿ ಜಾಮೀನು ದೊರೆತಿದೆ. ಎರಡೂ ಪ್ರಕರಣಗಳಲ್ಲಿ ಅವರಿಗೆ ಜಾಮೀನು ದೊರೆತಿದ್ದು, ಬಹುಶಃ ಮಂಗಳವಾರ ವಕೀಲ ಜಗದೀಶ್ ಬಿಡುಗಡೆಯಾಗುವ ಅಂದಾಜಿದೆ.

ಎರಡನೇ ಕೇಸಿನಲ್ಲಿಯೂ ಜಾಮೀನು ಮಂಜೂರು, ವಕೀಲ ಜಗದೀಶ್ ಜೈಲಿನಿಂದ ಶೀಘ್ರದಲ್ಲೇ ಬಿಡುಗಡೆ
ಬಂಧಿತ ವಕೀಲ ಜಗದೀಶ್
Follow us on

ಬೆಂಗಳೂರು: ವಕೀಲ ಜಗದೀಶ್ರಿಗೆ ಎರಡನೇ ಕೇಸಿನಲ್ಲಿಯೂ ಜಾಮೀನು ಮಂಜೂರಾಗಿದ್ದು ವಕೀಲ ಜಗದೀಶ್ ಜೈಲಿನಿಂದ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ. ಈ ಹಿಂದೆ ಹಲಸೂರು ಗೇಟ್ ಠಾಣೆಪೊಲೀಸರು ದಾಖಲಿಸಿದ್ದ ಕೊಲೆ ಯತ್ನ ಕೇಸ್ನಲ್ಲಿ ಮೊನ್ನೆಯಷ್ಟೇ ವಕೀಲ ಜಗದೀಶ್ಗೆ ನಗರದ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದೀಗ, ಕೊಡಿಗೇಹಳ್ಳಿ ಠಾಣೆ ಪೊಲೀಸರು ದಾಖಲಿಸಿದ್ದ ಜಾತಿ ನಿಂದನೆ ಕೇಸ್ನಲ್ಲಿ ಜಾಮೀನು ದೊರೆತಿದೆ. ಎರಡೂ ಪ್ರಕರಣಗಳಲ್ಲಿ ಅವರಿಗೆ ಜಾಮೀನು ದೊರೆತಿದ್ದು, ಬಹುಶಃ ಮಂಗಳವಾರ ವಕೀಲ ಜಗದೀಶ್ ಬಿಡುಗಡೆಯಾಗುವ ಅಂದಾಜಿದೆ. ಸದ್ಯಕ್ಕೆ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಫೆಬ್ರವರಿ 11ರಂದು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಗಲಭೆ ನಡೆದ ಪ್ರಕರಣ ಸಂಬಂಧ ವಕೀಲರ ಗುಂಪೊಂದು ಹಲ್ಲೆ ಮಾಡಿದ್ದಾರೆ ಎಂದು ವಕೀಲ ಜಗದೀಶ್ ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ವಕೀಲ ಜಗದೀಶ್, ಅವರ ಪುತ್ರ ಆರ್ಯಗೌಡ ಮತ್ತು ಪ್ರಶಾಂತಿ ಸುಭಾಷ್, ಶರತ್ ಖದ್ರಿ ಅವರಿಗೆ 68 ನೇ ಸಿಟಿ ಸಿವಿಲ್ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿತ್ತು. ಇಂದು (ಸೋಮವಾರ) ವಕೀಲ ಜಗದೀಶ್ರ ಜಾತಿ ನಿಂದನೆ ಪ್ರಕರಣದಲ್ಲೂ ಜಾಮೀನು ಮಂಜೂರಾಗಿದೆ. ವಕೀಲ ಜಗದೀಶ್ ಮಹದೇವ್ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಜೊತೆಗೆ ಪೊಲೀಸ್ ಆಯುಕ್ತ ಕಮಲಪಂತ್ ಅವರ ಕಚೇರಿಯಲ್ಲಿ ಪೇದೆ ರಮೇಶ್ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಾಗಿದ್ದು ಎರಡೂ ಪ್ರಕರಣದಲ್ಲಿ ವಕೀಲ ಜಗದೀಶ್ಗೆ ಜಾಮೀನು ಮಂಜೂರಾಗಿದೆ.

ಇದನ್ನೂ ಓದಿ: ಕಮಲ್ ಪಂತ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ವಕೀಲ ಜಗದೀಶ್ ಅರೆಸ್ಟ್! 14 ದಿನಗಳ ಕಾಲ ನ್ಯಾಯಾಂಗ ಬಂಧನ

ವಿಚಾರಣೆ, ಸಾಕ್ಷ್ಯ ಪರೀಶೀಲನೆಗಳೆಲ್ಲಾ ನಡೆದಿದೆ ಆದರೂ ಆರೋಪಿಯ ಬಂಧಿಸೋ ಕೆಲಸ ಆಗಿಲ್ಲ: ಎಸ್ ಐ ಟಿ ವಿರುದ್ಧ ಸಿಡಿ ಯುವತಿ ವಕೀಲ ಜಗದೀಶ್ ಆಕ್ರೋಶ

Published On - 5:27 pm, Mon, 7 March 22