ಚುನಾವಣಾ ಕರ್ತವ್ಯಕ್ಕೆ ತೆರಳಿದವರಿಗೆ ಶಾಕ್! 20 ಸಿಬ್ಬಂದಿಗಳಿಗೆ ಒಂದೇ ಟಾಯ್ಲೆಟ್
ಲೋಕಸಭಾ ಚುನಾವಣೆ ಹಿನ್ನಲೆ ಚುನಾವಣಾಧಿಕಾರಿಗಳು ಭರ್ಜರಿ ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ(Bangalore North Lok Sabha Constituency) ದ ಬೂತ್ ಸಂಖ್ಯೆ 280, 281, 282 ರಲ್ಲಿ ಚುನಾವಣೆಗೆ ನಿಯೋಜನೆಗೊಂಡು ಶಾಲೆಗೆ ತೆರಳಿದ 20 ಸಿಬ್ಬಂದಿಗಳಿಗೆ ಸೇರಿ ಒಂದೇ ಟಾಯ್ಲೆಟ್ ರೂಂ ಕೊಡಲಾಗಿದ್ದು, ಅಧಿಕಾರಿಗಳು ಶಾಕ್ ಆಗಿದ್ದಾರೆ.
ಬೆಂಗಳೂರು, ಏ.25: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ(Bangalore North Lok Sabha Constituency) ದ ಬೂತ್ ಸಂಖ್ಯೆ 280, 281, 282 ರಲ್ಲಿ ಚುನಾವಣೆಗೆ ನಿಯೋಜನೆಗೊಂಡು ಶಾಲೆಗೆ ತೆರಳಿದ 20 ಸಿಬ್ಬಂದಿಗಳಿಗೆ ಸೇರಿ ಒಂದೇ ಟಾಯ್ಲೆಟ್ ರೂಂ ಕೊಡಲಾಗಿದ್ದು, ಅಧಿಕಾರಿಗಳು ಶಾಕ್ ಆಗಿದ್ದಾರೆ. ಹೌದು, ಕರ್ತವ್ಯಕ್ಕೆ ಬಂದಿರುವ 20 ಸಿಬ್ಬಂದಿಗಳಲ್ಲಿ 10 ಮಹಿಳೆಯರೂ ಇದ್ದಾರೆ. ಆದರೆ, ಖಾಸಗಿ ಶಾಲೆಯ ನಾಲ್ಕು ಬೂತ್ಗಳ ಸಿಬ್ಬಂದಿಗಳಿಗೂ ಒಂದೇ ಟಾಯ್ಲೆಟ್ ರೂಂನ ಶೌಚಾಲಯ ಬಳಸುವಂತೆ ವ್ಯವಸ್ಥೆ ಮಾಡಲಾಗಿದೆ.
ಸಮಸ್ಯೆ ಬಗ್ಗೆ ಸೆಕ್ಟರ್ ಆಫೀಸರ್ಗೆ ಮಾಹಿತಿ
ಇನ್ನು ಬಾಕಿ ಉಳಿದ ಶೌಚಾಲಯಗಳಲ್ಲಿ ರಿನೋವೇಟ್ ಕೆಲಸ ನಡೆಯುತ್ತಿರುವ ಹಿನ್ನಲೆ ಎಲ್ಲಾ ಶೌಚಾಲಯಗಳನ್ನು ಬಂದ್ ಮಾಡಿ ಒಂದನ್ನು ಮಾತ್ರ ಬಳಸುವಂತೆ ಹೇಳಲಾಗಿದೆ. ಸದ್ಯ ಸಮಸ್ಯೆ ಬಗ್ಗೆ ಸೆಕ್ಟರ್ ಆಫೀಸರ್ ವೆಂಕಟಪ್ಪ ಎಂಬುವವರಿಗೆ ಸಿಬ್ಬಂದಿಗಳು ಮಾಹಿತಿ ನೀಡಿದ್ದು, ಬಿಬಿಎಂಪಿ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆಸುತ್ತಿದ್ದಾರೆ.
ಇದನ್ನೂ ಓದಿ:ಗಿರ್ ಅರಣ್ಯದಿಂದ ಹಿಡಿದು ದೂರದ ದ್ವೀಪಗಳವರೆಗೆ; ಚುನಾವಣೆ ನಡೆಸಲು ಚುನಾವಣಾ ಆಯೋಗ ಯಾವ ರೀತಿ ಕೆಲಸ ಮಾಡುತ್ತದೆ?
ಇನ್ನು ಇದೇ ಏ.21 ರಂದು ಲೋಕಸಭಾ ಚುನಾವಣೆ ಹಿನ್ನಲೆ ಇವಿಎಂ ಮಷಿನ್‌ಗಳ ಕುರಿತು ಅಧಿಕಾರಿಗಳಿಗೆ ತುಮಕೂರು ಜಿಲ್ಲೆಯ ತಿಪಟೂರಿನ ಸರ್ಕಾರಿ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತಿತ್ತು. ಜೊತೆಗೆ ಟ್ರೈನಿಂಗ್ಗಾಗಿ ಸುಮಾರು 600ಕ್ಕೂ ಹೆಚ್ಚು ಅಧಿಕಾರಿಗಳನ್ನ ಕರೆಸಿದ್ದರು. ಆದರೆ, ತರಬೇತಿ ವೇಳೆ ಊಟ,ತಿಂಡಿ ಕನಿಷ್ಟ ನೀರು ಸಹ ಕೊಡದೆ ತಾಲೂಕು ಚುನಾವಣಾಧಿಕಾರಿ ಸತಾಯುಸುತ್ತಿರುವ ಘಟನೆ ನಡೆದಿತ್ತು. ಇದೀಗ 20 ಸಿಬ್ಬಂದಿಗಳಿಗೆ ಸೇರಿ ಒಂದೇ ಟಾಯ್ಲೆಟ್ ರೂಂ ಕೊಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:51 pm, Thu, 25 April 24