ಸೈಟ್​ಗಳ ಹಂಚಿಕೆಯಲ್ಲಿ ಗೋಲ್​ಮಾಲ್​ ಶಂಕೆ: ಬಿಡಿಎ ಕಚೇರಿ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ, ಮೂವರು ಬ್ರೋಕರ್​ಗಳು ವಶಕ್ಕೆ

ಬಿಡಿಎ ಕಾರ್ನರ್​​ ಸೈಟ್​ಗಳ ಹಂಚಿಕೆಯಲ್ಲಿ ಗೋಲ್​ಮಾಲ್​ ಶಂಕೆ ಹಿನ್ನೆಲೆ ಬಿಡಿಎ ಕಚೇರಿ ಮೇಲೆ 6 ತಂಡಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಸೈಟ್​ಗಳ ಹಂಚಿಕೆಯಲ್ಲಿ ಗೋಲ್​ಮಾಲ್​ ಶಂಕೆ: ಬಿಡಿಎ ಕಚೇರಿ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ, ಮೂವರು ಬ್ರೋಕರ್​ಗಳು ವಶಕ್ಕೆ
ಪ್ರಾತಿನಿಧಿಕ ಚಿತ್ರ
Image Credit source: tv9kannada.com
Edited By:

Updated on: Feb 10, 2023 | 5:50 PM

ಬೆಂಗಳೂರು: ಬಿಡಿಎ ಕಚೇರಿ ಮೇಲೆ 6 ತಂಡಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ (Lokayukta police raid) ಮಾಡಿದ್ದಾರೆ. ಬಿಡಿಎ ಕಾರ್ನರ್​​ ಸೈಟ್​ಗಳ ಹಂಚಿಕೆಯಲ್ಲಿ ಗೋಲ್​ಮಾಲ್​ ಶಂಕೆ ಹಿನ್ನೆಲೆ 35 ಅಧಿಕಾರಿಗಳ ತಂಡದಿಂದ ಬಿಡಿಎ ಕಚೇರಿಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಲೇಔಟ್​ ನಿರ್ಮಾಣ ಪ್ರಕ್ರಿಯೆಯಲ್ಲಿ ಹತ್ತಾರು ಅನುಮಾನಗಳು ಕಂಡುಬಂದಿದ್ದು, ಪರಿಹಾರ ನೀಡುವಲ್ಲೂ ಸಾಕಷ್ಟು ಅವ್ಯವಹಾರದ ಬಗ್ಗೆ ವ್ಯಾಪಕ ದೂರು ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಸದ್ಯ ಬಿಡಿಎ ಕಚೇರಿಯ 4 ಬಾಗಿಲು ಮುಚ್ಚಿ ಕಡತ ಪರಿಶೀಲನೆ ಮಾಡಲಾಗುತ್ತಿದೆ.

ಕಚೇರಿ ಒಳಗಿರುವವರನ್ನು ಒಬ್ಬೊಬ್ಬರಾಗಿ ವಿಚಾರಣೆ ನಡೆಸಿ, ತಪಾಸಣೆ ನಡೆಸಿ ಪೊಲೀಸರು ಹೊರಕ್ಕೆ ಬಿಡುತ್ತಿದ್ದಾರೆ. ಲೋಕಾಯುಕ್ತ ಎಸ್​ಪಿ ಅಶೋಕ್​ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಬಿಡಿಎ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದರು. ಕಚೇರಿ ಆವರಣದಲ್ಲಿ ಟೇಬಲ್​ ಹಾಕಿಕೊಂಡು ಪೊಲೀಸರು ಕುಳಿತ್ತಿದ್ದು, ಸಾರ್ವಜನಿಕರಿಂದ ಅಧಿಕಾರಿಗಳು ದೂರು ಸ್ವೀಕರಿಸುತ್ತಿದ್ದಾರೆ. ಐಜಿಪಿ ಸುಬ್ರಹ್ಮಣೇಶ್ವರ್ ರಾವ್​ರಿಂದ ಸಾರ್ವಜನಿಕ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಬಿಡಿಎ ಕಚೇರಿಗೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಭೇಟಿ

ಬಿಡಿಎ ಕಚೇರಿಗೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಬಿಡಿಎ ಕಾರ್ಯದರ್ಶಿ ವೈ.ಬಿ.ಶಾಂತರಾಜು ಕಚೇರಿಗೆ ಭೇಟಿ ನೀಡಿದ್ದಾರೆ. ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದು, ದೂರು ನೀಡಿದ್ದವರು ಯಾರು? ಅವರಿಗೆ ಆಗಿರುವ ಅನ್ಯಾಯವೇನು? ಈ ಕುರಿತು ಫೋನ್ ನಂಬರ್ ಸಹಿತ ಮಾಹಿತಿ ಪಡೆಯಿರಿ. ಸಿಎ ಸೈಟ್, ಕಾರ್ನರ್ ಸೈಟ್ ಹಾಗೂ ಡಬಲ್ ಅಲಾಟ್ಮೆಂಟ್​ ಸಾರ್ವಜನಿಕರ ದೂರು ಪಡೆದು ಎಲ್ಲಾ ಕಡೆ ಪರಿಶೀಲನೆ ಮಾಡಿ. ಬಿಡಿಎ ಸೈಟ್ ಅಲಾಟ್ಮೆಂಟ್, ಭೂ ಸ್ವಾಧೀನ ಹಾಗೂ ಟೌನ್ ಪ್ಲಾನಿಂಗ್​ಗಳ ಮೇಲೆ ನಿಗಾ ಇಟ್ಟು ಪರಿಶೀಲನೆ ನಡೆಸಬೇಕು ಎಂದು ನ್ಯಾ.ಪಾಟೀಲ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮಡಿಕೇರಿ: ಸಾಲದ ಚೆಕ್​ ನೀಡಲು ಲಂಚ, ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಹೇಳಿದಿಷ್ಟು

ಈ ಕುರಿತಾಗಿ ಬೆಂಗಳೂರಲ್ಲಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಹೇಳಿಕೆ ನೀಡಿದ್ದು, ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ. ನಮ್ಮ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈಗ ಆಗಿರುವ ದಾಳಿ ಎಲ್ಲವನ್ನೂ ಕೂಲಂಕುಶವಾಗಿ ತನಿಖೆ ಆಗುತ್ತೆ. ತನಿಖೆ ಮುಂದಿನ ಹಂತಕ್ಕೆ ಬಂದ ಬಳಿಕ ಮಾಹಿತಿ ನೀಡಲಾಗುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್‌ ಶಾಸಕ ಹ್ಯಾರಿಸ್ ಮತ್ತು ಬೆಂಬಲಿಗರ ವಿರುದ್ಧ ಬೆದರಿಕೆ ಆರೋಪ: ಆಪ್ ಮುಖಂಡರಿಂದ ದೂರು

ಮೂವರು ಬ್ರೋಕರ್​ಗಳು ವಶಕ್ಕೆ

ಲೋಕಾಯುಕ್ತ ಕಚೇರಿಯಲ್ಲಿ ಮೂವರು ಬ್ರೋಕರ್​ಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನ್ನ ಬಳಿ 50 ಲಕ್ಷ ಲಂಚಕ್ಕೆ ಡಿಎಸ್ ಶಾಂತರಾಜು ಮತ್ತು ಮಂಜುನಾಥ್ .ಆರ್. ಬೇಡಿಕೆ ಇಟ್ಟಿದ್ದರು. ಬೊಮ್ಮನಹಳ್ಳಿ ವಲಯದ ಹೆಚ್ಎಸ್ ಆರ್ ಲೇಔಟ್​ನ ಒಂದೂವರೆ ಎಕರೆ ಜಮೀನು ಭೂ ಸ್ವಾಧೀನಾ ಮಾಡಿದ್ದಾರೆ ಹಣ ನೀಡಿಲ್ಲ. ಹೀಗಾಗಿ ಅಧಿಕಾರಿಗಳನ್ನು ಕೇಳಲು ಬಂದಿದ್ದಾಗಿ ಆರೋಪಿಸಿದ್ರು. ಆದರೆ ವಿಚಾರಣೆ ವೇಳೆ ಮಂಜುನಾಥ್ ಹಾಗೂ ಮೂವರು ಬ್ರೋಕರ್ ಎಂಬುದು ಪತ್ತೆಯಾಗಿದೆ. ಹಾಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:07 pm, Fri, 10 February 23