ಬೆಂಗಳೂರು, ಸೆಪ್ಟೆಂಬರ್ 11: ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ಅಂತ ಸಂಚಾರಿ ಪೊಲೀಸರು (Traffic Police) ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದರೂ ಕೂಡ ಇನ್ನೂ ಕೆಲವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿ ಜೀವಕ್ಕೆ ಕಂಟಕ ತಂದುಕೊಳ್ಳುತ್ತಾರೆ. ಇದೀಗ ಸಾರ್ವಜನಿಕ ರಸ್ತೆ ಸುರಕ್ಷತಾ ಅಭಿಯಾನದ (Public Road Safety Campaign) ಭಾಗವಾಗಿ ಸಂಚಾರಿ ಪೊಲೀಸ್ ವಿಭಾಗ ವಿಭಿನ್ನವಾಗಿ ಜಾಗೃತಿ ಮೂಡಿಸಲು ಮುಂದಾಗಿದೆ.
“ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ” ಎಂಬ ಮೊಬೈಲ್ ಗೇಮ್ನಲ್ಲಿ ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದೆ.
ಪೋಲೀಸ್, ಗೇಮ್ ಡೆವಲಪರ್‌ಗಳು ಮತ್ತು ಮಾಧ್ಯಮ ಕಂಪನಿ ಸ್ಚ್‌ಬಾಂಗ್ ಸಹಯೋಗದಲ್ಲಿ “ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ”ದಲ್ಲಿ “ಮಚ್ಚಾ ಹೆಲ್ಮೆಟ್ ಡಾ” ಹುಷಾರಾಗಿ, ಜವಾಬ್ದಾರಿಯುತವಾಗಿ ವಾಹನ ಚಲಾಯಿಸಿ ಎಂಬ ಸೂಚನಾ ಫಲಕ ಇದೆ. ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ ಅನ್ನು ಹೆಚ್ಚಾಗಿ 16 ರಿಂದ 25 ವರ್ಷ ವಯಸ್ಸಿನವರು ಆಡುವುದರಿಂದ, ಇವರನ್ನು ಗುರಿಯಾಗಿಸಿಕೊಂಡು ಈ ಜಾಹಿರಾತು ನೀಡಲಾಗಿದೆ.
ಇದನ್ನೂ ಓದಿ: ಸಂಚಾರಿ ಪೊಲೀಸ್ ಕಾನ್ಸ್ ಟೇಬಲ್ ಜೊತೆ ಯುವಕನ ಗಲಾಟೆ; ವಿಡಿಯೋ ವೈರಲ್
ಜಾಹಿರಾತು ಪ್ರಮುಖರಾದ ರೆನ್ಸಿಲ್ಲಾ ಫೆರ್ನಾಂಡಿಸ್ ಮಾತನಾಡಿ, “ಬೆಂಗಳೂರು ಇಂಗ್ಲಿಷ್” ನಲ್ಲೇ ಜಾಹಿರಾತು ನೀಡಲಾಗಿದೆ. ಇದು, ಯುವಕರ ಗಮನ ಸೆಳೆಯುತ್ತದೆ. ಗೇಮಿಂಗ್ ಮತ್ತು ನಿಜ ಜೀವನದ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಭಾಷೆ ಬಳಸಲಾಗಿದೆ ಎಂದರು.
ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಮಾತನಾಡಿ, “ಇದು ಸಾಮಾಜಿಕ ಸೇವಾ ಸಂದೇಶವಾಗಿದೆ. ನಾವು 16-25 ವರ್ಷದ ತರುಣರನ್ನು ಗುರಿಯಾಗಿಸಿಕೊಂಡು ಆಟದೊಳಗೆ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ