AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕೇಂದ್ರದ ನಾಲ್ವರು ಜಿಎಸ್​ಟಿ ಅಧಿಕಾರಿಗಳ ಬಂಧನ: ಇಲ್ಲಿದೆ ಕಾರಣ?

ಬೆಂಗಳೂರು ನಗರ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಪಶ್ಚಿಮ ವಿಭಾಗ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಮೊಟ್ಟ ಮೊದಲ ಬಾರಿಗೆ ಓರ್ವ ಮಹಿಳೆ ಸೇರಿದಂತೆ ಕೇಂದ್ರದ ನಾಲ್ವರು ಜಿಎಸ್​​ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇಸ್ ಮುಚ್ಚಿಹಾಕಲು 1.5 ಕೋಟಿ ರೂ. ಹಣ ಪಡೆದು ಅಧಿಕಾರಿಗಳು ಪರಾರಿಯಾಗಿದ್ದರು.

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕೇಂದ್ರದ ನಾಲ್ವರು ಜಿಎಸ್​ಟಿ ಅಧಿಕಾರಿಗಳ ಬಂಧನ: ಇಲ್ಲಿದೆ ಕಾರಣ?
ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕೇಂದ್ರದ ನಾಲ್ವರು ಜಿಎಸ್​ಟಿ ಅಧಿಕಾರಿಗಳ ಬಂಧನ: ಇಲ್ಲಿದೆ ಕಾರಣ?
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 11, 2024 | 4:19 PM

Share

ಬೆಂಗಳೂರು, ಸೆಪ್ಟೆಂಬರ್​ 11: ಕೇಸ್​ವೊಂದನ್ನು ಮುಚ್ಚಿಹಾಕಲು 1.5 ಕೋಟಿ ರೂ. ಹಣ ಪಡೆದಿದ್ದ ಕೇಂದ್ರದ ನಾಲ್ವರು ಜಿಎಸ್​​ಟಿ ಅಧಿಕಾರಿಗಳನ್ನು (GST officers) ಸಿಸಿಬಿ ಪೊಲೀಸರು ಮೊಟ್ಟ ಮೊದಲ ಬಾರಿಗೆ ಬಂಧಿಸಿರುವಂತಹ ಘಟನೆ ನಡೆದಿದೆ. ಜಿಎಸ್​​ಟಿಯ ಕೇಂದ್ರ ಗುಪ್ತದಳದ ಮಹಿಳಾ ಅಧಿಕಾರಿ​​ ಸೋನಾಲಿ ಸಹಾಯಿ, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮನೋಜ್ ಸೈನಿ, ಅಧೀಕ್ಷಕ ಅಭಿಷೇಕ್‌, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ನಾಗೇಶ್ ಬಾಬು ಬಂಧಿತ ಅಧಿಕಾರಿಗಳು.

ಕೇಸ್ ಮುಚ್ಚಿಹಾಕುವುದಾಗಿ ಜಿಎಸ್​​ಟಿ ಅಧಿಕಾರಿಗಳು ಹಣ ಪಡೆದು ಬಳಿಕ ಪರಾರಿಯಾಗಿದ್ದರು. ಈ ಬಗ್ಗೆ ಬೈಯ್ಯಪ್ಪನಹಳ್ಳಿ ಪೊಲೀಸ್​ ಠಾಣೆಗೆ ಓರ್ವ ಉದ್ಯಮಿ ದೂರು ನೀಡಿದ್ದರು. ದೂರು ಆಧರಿಸಿ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ದಾಳಿ ರೂಪದಲ್ಲಿ ಕೃತ್ಯವೆಸಗಿದ್ದರು.

ಇದನ್ನೂ ಓದಿ: ಬೆಂಗಳೂರು: ಥೈಲ್ಯಾಂಡ್​ನಿಂದ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದವನ ಬಂಧನ

ಬೆಂಗಳೂರು ನಗರ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ಪಶ್ಚಿಮ ವಿಭಾಗ ಪೊಲೀಸರಿಂದ ಕಾರ್ಯಾಚರಣೆ ಮಾಡಿ ಬಂಧಿಸಲಾಗಿದೆ. ಪ್ರಕರಣವನ್ನು ನಗರ ಪೊಲೀಸ್​ ಆಯುಕ್ತರು ಸಿಸಿಬಿಗೆ ವರ್ಗಾವಣೆ ಮಾಡಿದ್ದರು.

ಸಚಿವ ಸಂತೋಷ ಲಾಡ್ ತವರಿನಲ್ಲೇ ಕಳ್ಳತನ: ಮಕ್ಕಳಿಗೆ ನೀಡಬೇಕಾಗಿದ್ದ ಲ್ಯಾಪ್‌ಟಾಪ್‌ ಕದ್ದ ಖದೀಮರು

ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ ಲಾಡ್ ತವರಿನಲ್ಲೆ ಕಾರ್ಮಿಕ ಇಲಾಖೆಯಲ್ಲಿ ಖದೀಮರು ಕನ್ನ ಹಾಕಿರುವಂತಹ ಘಟನೆ ನಡೆದಿದೆ. ಬಡ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಲು ತಂದಿದ್ದ ಪ್ರತಿಷ್ಠಿತ ಕಂಪನಿಯ ಲ್ಯಾಪ್ ಟ್ಯಾಪ್‌ಗಳು ಕಳ್ಳರ ಪಾಲಾಗಿವೆ. ಹುಬ್ಬಳ್ಳಿಯ ಚೈತನ್ಯ ನಗರದ ಕಾರ್ಮಿಕ ಭವನ ಕಚೇರಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಟ್ಟಡದ ಕೊಠಡಿಯಲ್ಲಿ ಹಾವೇರಿ ಜಿಲ್ಲೆಯ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು ಇಟ್ಟಿದ್ದ 101 ಲ್ಯಾಪ್‌ಟಾಪ್‌ಗಳು ಕಳ್ಳತನ ಮಾಡಲಾಗಿದೆ. ಮೇ 22ರಿಂದ ಆಗಸ್ಟ್ 30ರೊಳಗೆ ಕೊಠಡಿಯ ಕಿಟಕಿ ತೆರೆದು 101 ಲ್ಯಾಪ್‌ಟಾಪ್ ಕಳವು ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿದ್ದ ಸ್ಥಳದ ಹತ್ತಿರದಲ್ಲಿಯೇ ವೃದ್ಧೆ ಶವ ಪತ್ತೆ!

ಸಿಸಿ ಕ್ಯಾಮರಾ ವೈರ್ ಕತ್ತರಿಸಿ, ಹಾರ್ಡ್ ಡಿಸ್ಕ್​ ಹಾಗೂ ಡಿವಿಆ‌ರ್ ಸಹ ಕಳ್ಳತನ ಮಾಡಲಾಗಿದೆ. ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಅವರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಗಳ‌ ಮೇಲೆ ಅನುಮಾನ ಮೂಡಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.